ETV Bharat / sports

ಟೆಸ್ಟ್​ ತಂಡಕ್ಕೆ ಪದಾರ್ಪಣೆ ಮಾಡುವ ಮೂಲಕ ಅಪ್ಪನ ಕನಸು ಈಡೇರಿಸಿದ್ದಾನೆ: ಸಿರಾಜ್ ಸಹೋದರ - ಆಸ್ಟ್ರೇಲಿಯಾ vs ಇಂಡಿಯಾ ಲೈವ್ ಸ್ಕೋರ್

26 ವರ್ಷದ ಸಿರಾಜ್​ ತಂಡದ ಮೊಹಮ್ಮದ್​ ಗೌಸ್​ ಆಟೋ ಚಾಲಕರಾಗಿದ್ದರು. ತಮ್ಮ ಮಗ ದೇಶ ಪ್ರತಿನಿಧಿಸುವುದನ್ನು ನೋಡುವ ಕನಸು ಕಂಡಿದ್ದ ಅವರು ದೇಶಕ್ಕಾಗಿ ಸಿರಾಜ್ ಆಡುವ ಮೊದಲೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ದುರಾದೃಷ್ಟ ಎಂದರೆ ಕೋವಿಡ್​ ನಿಯಮಗಳಿಂದ ಸಿರಾಜ್​ ತಂದೆಯ ಅಂತ್ಯ ಕ್ರಿಯೆಗೂ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ಮೊಹಮ್ಮದ್​ ಸಿರಾಜ್​
ಮೊಹಮ್ಮದ್​ ಸಿರಾಜ್​
author img

By

Published : Dec 26, 2020, 9:07 PM IST

ಹೈದರಾಬಾದ್​: ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯದಲ್ಲಿ ಪದಾರ್ಪಣೆ ಮಾಡುವ ಮೂಲಕ ಇತ್ತೀಚೆಗೆ ಆನಾರೋಗ್ಯದಿಂದ ನಿಧನರಾಗಿದ್ದ ತಂದೆಯ ಕನಸನ್ನು ನನಸು ಮಾಡಿದ್ದಾರೆ. ಮೆಲ್ಬೋರ್ನ್​ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಸಿರಾಜ್ ದೇಶಕ್ಕೆ​ ಗೌರವ ತಂದಿದ್ದಾರೆ ಎಂದು ಅವರ ಕುಟುಂಬ ಸಂತಸ ವ್ಯಕ್ತಪಡಿಸಿದೆ.

26 ವರ್ಷದ ಸಿರಾಜ್​ ತಂಡದ ಮೊಹಮ್ಮದ್​ ಗೌಸ್​ ಆಟೋ ಚಾಲಕರಾಗಿದ್ದರು. ತಮ್ಮ ಮಗ ದೇಶ ಪ್ರತಿನಿಧಿಸುವುದನ್ನು ನೋಡು ಕನಸು ಕಂಡಿದ್ದ ಅವರು ದೇಶಕ್ಕಾಗಿ ಸಿರಾಜ್ ಆಡುವ ಮೊದಲೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ದುರಾದೃಷ್ಟವೆಂದರೆ ಕೋವಿಡ್​ ನಿಯಮಗಳಿಂದ ಸಿರಾಜ್​ ತಂದೆಯ ಅಂತ್ಯ ಕ್ರಿಯೆಗೂ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ಆದರೆ, ಇಂದು ಸಿರಾಜ್​ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಮೂಲಕ ತಮ್ಮ ತಂದೆಯ ಕನಸು ಇಡೇರಿಸಿದ್ದಾರೆ ಎಂದು ಅವರ ಸಹೋದರ ಇಸ್ಮಾಯಿಲ್ ತಿಳಿಸಿದ್ದಾರೆ.

" ಸಿರಾಜ್​ ಭಾರತ ತಂಡದ ಪರ ಟೆಸ್ಟ್​ ಕ್ರಿಕೆಟ್​ ಆಡಬೇಕೆಂಬುದು ನಮ್ಮ ತಂದೆಯ ಕನಸು. ಅವರು ಯಾವಾಗಲು ಸಿರಾಜ್​ ಬ್ಲೂ ಮತ್ತು ವೈಟ್​ ಜರ್ಸಿ ತೊಟ್ಟು ದೇಶದ ಪರ ಆಡುವುದನ್ನು ನೋಡಲು ಇಷ್ಟಪಡುತ್ತಿದ್ದರು. ಹಾಗಾಗಿ ಇಂದು ನಮ್ಮ ಕನಸು ಸಂಪೂರ್ಣವಾಗಿದೆ " ಎಂದು ಇಸ್ಮಾಯಿಲ್ ಹೈದರಾಬಾದ್​ನಲ್ಲಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಿನ್ನೆ ತಂಡದಲ್ಲಿ ಅವನ ಹೆಸರು ಘೋಷಣೆಯಾಗುತ್ತಿದ್ದಂತೆ ಇಂದು ಪದಾರ್ಪಣೆ ಮಾಡುತ್ತಾನೆಂದು ತಿಳಿದಿತ್ತು. ಹಾಗಾಗಿ ನಮಗೆ ಇಡೀ ರಾತ್ರಿ ನಿದ್ದೆ ಮಾಡಿಲ್ಲ. ನಾವು 4 ಗಂಟೆಗೆ ಟಿವಿ ಆನ್​ ಮಾಡಿ ಕುಳಿತಿದ್ದೆವು ಎಂದು ಸಾಫ್ಟ್​ವೇರ್​ ವೃತ್ತಿ ಹಾಗೂ ಸಹೋದರನ ಮ್ಯಾನೇಜರ್​ ಆಗಿರುವ ಇಸ್ಮಾಯಿಲ್​ ತಿಳಿಸಿದ್ದಾರೆ.

ನಾವು ಅವರು ಬೌಲಿಂಗ್​ ಮಾಡಲು ಬರುವುದನ್ನ ಕಾತುರದಿಂದ ಕಾಯುತ್ತಿದ್ದೆವು. ನಮ್ಮ ಕಾಯುವಿಕೆ ತುಂಬಾ ದೀರ್ಘವಾಗಿತ್ತು. ಆದರೆ, ಭೋಜನ ವಿರಾಮದ ನಂತರ ನಮ್ಮ ಕಾಯುವಿಕೆಗೆ ಮುಗಿದಿತ್ತು. ಅದೊಂದು ನಮ್ಮ ಹೆಮ್ಮೆಯ ಕ್ಷಣವಾಗಿತ್ತು.ಅದು ನಮ್ಮ ಕುಟುಂಬದ ಭಾವುಕ ಕ್ಷಣವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಸಿರಾಜ್​ ಕೂಡ ಕುಟುಂಬದ ಹಾಗೂ ಸಾವಿರಾರು ಅಭಿಮಾನಿಗಳಿಗೆ ನಿರಾಶೆ ಮೂಡಿಸಲಿಲ್ಲ. ಅವರು ಮೊದಲ ಪಂದ್ಯದಲ್ಲಿ 2 ವಿಕೆಟ್ ಪಡೆದು ಮಿಂಚಿದರು. ಅದರಲ್ಲೂ ಅಪಾಯಕಾರಿಯಾಗಿದ್ದ ಮಾರ್ನಸ್​ ಲಾಬುಶೇನ್​ ವಿಕೆಟ್ ಪಡೆದು ಮಿಂಚಿದ್ದರು. ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.