ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಶುಬ್ಮನ್ ಗಿಲ್ ಮತ್ತು ಹೈದರಾಬಾದ್ನ ಮೊಹಮ್ಮದ್ ಸಿರಾಜ್ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.
ಎಂಸಿಜೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಮುಖಾಮುಖಾಯಾಗಿವೆ. ಮೊದಲ ಟೆಸ್ಟ್ನಲ್ಲಿ ಭಾರತ 8 ವಿಕೆಟ್ಗಳಿಂದ ಸೋಲು ಕಂಡಿರುವುದರಿಂದ ಇಂದಿನ ಪಂದ್ಯದಲ್ಲಿ 4 ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ. ವೈಯಕ್ತಿಕ ಕಾರಣಗಳಿಂದ ತಂಡದಿಂದ ಕೊಹ್ಲಿ ಹೊರಬಂದಿದ್ದಾರೆ. ಗಾಯಗೊಂಡು ಶಮಿ ಹೊರಗುಳಿದಿದ್ದರೆ, ಶಾ ಮತ್ತು ಸಹಾರನ್ನು ಟೀಮ್ ಮ್ಯಾನೇಜ್ಮೆಂಟ್ ತಂಡದಿಂದ ಕೈಬಿಟ್ಟಿದೆ.
-
Maiden Test wicket for Mohammed Siraj and maiden Test catch for @RealShubmanGill 😎💪
— BCCI (@BCCI) December 26, 2020 " class="align-text-top noRightClick twitterSection" data="
Labuschagne is OUT for 48 and AUS are 134-5. #TeamIndia #AUSvIND pic.twitter.com/UntPC8hkcI
">Maiden Test wicket for Mohammed Siraj and maiden Test catch for @RealShubmanGill 😎💪
— BCCI (@BCCI) December 26, 2020
Labuschagne is OUT for 48 and AUS are 134-5. #TeamIndia #AUSvIND pic.twitter.com/UntPC8hkcIMaiden Test wicket for Mohammed Siraj and maiden Test catch for @RealShubmanGill 😎💪
— BCCI (@BCCI) December 26, 2020
Labuschagne is OUT for 48 and AUS are 134-5. #TeamIndia #AUSvIND pic.twitter.com/UntPC8hkcI
ಇನ್ನು ಪಂದ್ಯದಲ್ಲಿ ರಿಷಭ್ ಪಂತ್ ಮತ್ತು ಜಡೇಜಾ ತಂಡಕ್ಕೆ ಕಮ್ಬ್ಯಾಕ್ ಮಾಡಿದರೆ, ಪಂಜಾಬ್ನ ಶುಬ್ಮನ್ ಗಿಲ್ 297ನೇ ಆಟಗಾರ ಮತ್ತು ಹೈದರಾಬಾದ್ನ ಮೊಹಮ್ಮದ್ ಸಿರಾಜ್ 298ನೇ ಆಟಗಾರನಾಗಿ ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.
ಸಿರಾಜ್ 15 ಓವರ್ಗಳಲ್ಲಿ 15 ರನ್ ನೀಡಿ ಅಪಾಯಕಾರಿ ಬ್ಯಾಟ್ಸ್ಮನ್ ಮಾರ್ನಸ್ ಲಾಬುಶೇನ್ ಮತ್ತು ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ವಿಕೆಟ್ ಪಡೆದರು. ಶುಬ್ಮನ್ ಗಿಲ್ 38 ಎಸೆತಗಳಲ್ಲಿ ಆಕರ್ಷಕ 5 ಬೌಂಡರಿಗಳ ನೆರವಿನಿಂದ ಅಜೇಯ 28 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಮೊದಲ ದಿನವೇ ಅವರ ಬ್ಯಾಟಿಂಗ್ನಲ್ಲಿ ಆತ್ಮವಿಶ್ವಾಸ ಕಂಡುಬಂದಿದ್ದು 2ನೇ ದಿನ ದೊಡ್ಡ ಮೊತ್ತವನ್ನು ನಿರೀಕ್ಷಿಸಬಹುದಾಗಿದೆ.
ಮೊದಲ ದಿನ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 72.3 ಓವರ್ಗಳಲ್ಲಿ 195 ರನ್ ಗಳಿಸಿದೆ. ಜಸ್ಪ್ರೀತ್ ಬುಮ್ರಾ 4, ಅಶ್ವಿನ್ 3, ಸಿರಾಜ್ 2 ಹಾಗೂ ಜಡೇಜಾ 1 ವಿಕೆಟ್ ಪಡೆದು ಮಿಂಚಿದರು. ಆಸೀಸ್ ಪರ ಲಾಬುಶೇನ್(48) ಗರಿಷ್ಠ ರನ್ಗಳಿಸಿದರು.