ನವದೆಹಲಿ: ದೇವ್ಧರ್ ಟ್ರೋಫಿಯಲ್ಲಿ ಭಾರತ ಸಿ ತಂಡವನ್ನ ಮುನ್ನಡೆಸುತ್ತಿರುವ ಯುವ ಆಟಗಾರ ಶುಬ್ಮನ್ ಗಿಲ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನ ಬ್ರೇಕ್ ಮಾಡಿದ್ದಾರೆ.
2009-10 ನೇ ಸಾಲಿನ ದೇವ್ಧರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಉತ್ತರ ವಲಯ ತಂಡದ ನಾಯಕನಾಗಿದ್ದರು. ಆಗ ವಿರಾಟ್ ಕೊಹ್ಲಿಗೆ ಕೇವಲ 21 ವರ್ಷ ವಯಸ್ಸಾಗಿತ್ತು. ಈ ಮೂಲಕ ತಂಡವೊಂದನ್ನ ಮುನ್ನಡೆಸಿದ ಕಿರಿಯ ವಯಸ್ಸಿನ ನಾಯಕ ಎಂಬ ದಾಖಲೆಯನ್ನ ವಿರಾಟ್ ಬರೆದಿದ್ದರು.
-
Shubman Gill is the youngest-known captain in Deodhar Trophy finals. He is just 20 years, 57 days old. #DeodharTrophy pic.twitter.com/5iufYxQAO4
— Johns (@CricCrazyJohns) November 4, 2019 " class="align-text-top noRightClick twitterSection" data="
">Shubman Gill is the youngest-known captain in Deodhar Trophy finals. He is just 20 years, 57 days old. #DeodharTrophy pic.twitter.com/5iufYxQAO4
— Johns (@CricCrazyJohns) November 4, 2019Shubman Gill is the youngest-known captain in Deodhar Trophy finals. He is just 20 years, 57 days old. #DeodharTrophy pic.twitter.com/5iufYxQAO4
— Johns (@CricCrazyJohns) November 4, 2019
ಇದೀಗ 2019-20ನೇ ಸಾಲಿನ ದೇವ್ಧರ್ ಟ್ರೋಫಿ ಫೈನಲ್ನಲ್ಲಿ ಶುಬಮನ್ ಗಿಲ್ 20 ವರ್ಷ ವಯಸ್ಸಿನಲ್ಲೇ ಭಾರತ ಸಿ ತಂಡವನ್ನ ಮುನ್ನಡೆಸಿದ್ದಾರೆ. ಈ ಮೂಲಕ 10 ವರ್ಷದ ಹಿಂದೆ ವಿರಾಟ್ ಕೊಹ್ಲಿ ನಿರ್ಮಿಸಿದ್ದ ದಾಖಲೆಯನ್ನ ಅಳಿಸಿ ಹಾಕಿದ್ದಾರೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ಸಿ ತಂಡನ್ನ ಸೋಲಿಸಿದ ಭಾರತ ಬಿ ತಂಡ, ದೇವಧರ್ ಟ್ರೋಫಿಯನ್ನ ಮುಡಿಗೇರಿಸಿಕೊಂಡಿದೆ.