ETV Bharat / sports

ವಿಶೇಷ ದಾಖಲೆ ಪಟ್ಟಿಗೆ ಸೇರಿದ ಶತಕಧಾರಿಗಳಾದ ಶ್ರೇಯಸ್​ ಅಯ್ಯರ್​-ರಾಸ್​ ಟೇಲರ್!​ - ಭಾರತ-ನ್ಯೂಜಿಲ್ಯಾಂಡ್ ಏಕದಿನ ಸರಣಿ

ಹ್ಯಾಮಿಲ್ಟನ್​ನ ಸೆಡನ್‌ ಪಾರ್ಕ್‌ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ​ ಇಳಿದಿದ್ದ ಶ್ರೇಯಸ್ ಅಯ್ಯರ್​(103) ಶತಕ ಸಿಡಿಸಿದರೆ, ಎದುರಾಳಿ ಕಿವೀಸ್​ ತಂಡದ ಅನುಭವಿ ಬ್ಯಾಟ್ಸ್​ಮನ್​ ರಾಸ್​ ಟೇಲರ್​ ಕೂಡ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದ್ದಾರೆ.

ಶ್ರೇಯಸ್​ ಅಯ್ಯರ್​-ರಾಸ್​ ಟೇಲರ್
ಶ್ರೇಯಸ್​ ಅಯ್ಯರ್​-ರಾಸ್​ ಟೇಲರ್
author img

By

Published : Feb 5, 2020, 7:57 PM IST

ಹ್ಯಾಮಿಲ್ಟನ್: ಭಾರತ ಹಾಗೂ ನ್ಯೂಜಿಲ್ಯಾಂಡ್​ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ ಶ್ರೇಯಸ್​ ಅಯ್ಯರ್​ ಹಾಗೂ ರಾಸ್​ ಟೇಲರ್​ ಅಪರೂಪದ ದಾಖಲೆಗೆ ಪಾತ್ರವಾಗಿದೆ.

ಹ್ಯಾಮಿಲ್ಟನ್​ನ ಸೆಡನ್‌ ಪಾರ್ಕ್‌ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ​ ಇಳಿದಿದ್ದ ಶ್ರೇಯಸ್ ಅಯ್ಯರ್​(103) ಶತಕ ಸಿಡಿಸಿದರೆ, ಎದುರಾಳಿ ಕಿವೀಸ್​ ತಂಡದ ಅನುಭವಿ ಬ್ಯಾಟ್ಸ್​ಮನ್​ ರಾಸ್​ ಟೇಲರ್​ ಕೂಡ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದ್ದಾರೆ. ಈ ಮೂಲಕ ಒಂದೇ ಪಂದ್ಯದಲ್ಲಿ ಎರಡೂ ತಂಡಗಳ ಬ್ಯಾಟ್ಸ್​ಮನ್​ಗಳು ಒಂದೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದ ಮೂರನೇ ನಿದರ್ಶನಕ್ಕೆ ರಾಸ್​ ಟೇಲರ್​ ಹಾಗೂ ಶ್ರೇಯಸ್​ ಅಯ್ಯರ್​ ಪಾತ್ರರಾದರು.

ರಾಸ್​ ಟೇಲರ್​- ಶ್ರೇಯಸ್​ ಅಯ್ಯರ್​ಗೂ ಮುನ್ನ 2007ರಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್‌ (107) ಹಾಗೂ ಜಿಂಬಾಬ್ವೆಯ ತಟೆಂದ ತೈಬು (107) ಶತಕ ಸಿಡಿಸಿದ್ದರು. 2017ರಲ್ಲಿ ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಯುವರಾಜ್ ಸಿಂಗ್ (150) ಮತ್ತು ಇಂಗ್ಲೆಂಡ್‌ನ ಇಯಾನ್‌ ಮಾರ್ಗನ್‌ (102) ಶತಕ ಗಳಿಸಿದ್ದರು. ಇದೀಗ ಅಯ್ಯರ್‌ ಹಾಗೂ ಟೇಲರ್‌ ಈ ಪಟ್ಟಿಗೆ ಸೇರಿದ ಮೂರನೇ ಜೋಡಿಯಾಗಿದೆ.

ಬುಧವಾರ ನಡೆದ ಪಂದ್ಯಗಳಲ್ಲಿ ಭಾರತ ತಂಡ 4 ವಿಕೆಟ್‌ ಕಳೆದುಕೊಂಡು 347 ರನ್ ಕಲೆ ಹಾಕಿತ್ತು. ಈ ಮೊತ್ತ ಬೆನ್ನತ್ತಿದ ಕಿವೀಸ್‌ ಪಡೆ 48.1ನೇ ಓವರ್‌ಗಳಲ್ಲಿ 6 ವಿಕೆಟ್​ ಕಳೆದುಕೊಂಡು ಗೆಲುವು ಸಾಧಿಸಿತ್ತು..

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.