ETV Bharat / sports

ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ: ಆರೋಗ್ಯ ಸಮಸ್ಯೆಯಿಂದ ಶ್ರೇಯಸ್​ ಅಯ್ಯರ್​ ಔಟ್​ - ಐಪಿಎಲ್‌ ಪಂದ್ಯ

ಎಡ ಭುಜಕ್ಕೆ ಗಂಭೀರವಾಗಿ ಗಾಯವಾದ ಹಿನ್ನೆಲೆಯಲ್ಲಿ ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮುಂದಿನ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.

Shreyas Iyer
ಶ್ರೇಯಸ್​ ಅಯ್ಯರ್
author img

By

Published : Mar 25, 2021, 10:21 AM IST

ಪುಣೆ: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಎಂಟನೇ ಓವರ್‌ನಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮುಂದಿನ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು ಎಡ ಭುಜಕ್ಕೆ ಗಾಯವಾಗಿರುವುದರಿಂದ ಮುಂಬರುವ ಐಪಿಎಲ್ ಟೂರ್ನಿ ಆಡುವುದು ಡೌಟ್ ಎನ್ನಲಾಗಿದೆ.

ಗಾಯ ಗಂಭೀರವಾದ ನಂತರ ಮೂರು ಪಂದ್ಯಗಳ ಏಕದಿನ ಸರಣಿಯ ಉಳಿದ ಎರಡು ಪಂದ್ಯಗಳಿಂದ ಮತ್ತು ಐಪಿಎಲ್ 2021 ರ ಕೆಲವು ಪಂದ್ಯಗಳಲ್ಲಿ ಅವರಿಗೆ ಆಡಲು ಸಾಧ್ಯವಾಗುವುದಿಲ್ಲ. ಫೀಲ್ಡಿಂಗ್ ಸಮಯದಲ್ಲಿ ಶ್ರೇಯಾಸ್ ಅವರ ಎಡ ಭುಜಕ್ಕೆ ಗಾಯವಾಗಿತ್ತು

ಜಾನಿ ಬೈರ್‌ಸ್ಟೋವ್‌ ಬಾರಿಸಿದ ಚೆಂಡನ್ನು ಬೌಂಡರಿಗೆ ಹೋಗದಂತೆ ತಡೆಯುವ ಪ್ರಯತ್ನದಲ್ಲಿ ಅಯ್ಯರ್‌ನ ಎಡ ಭುಜಕ್ಕೆ ಗಾಯವಾಗಿತ್ತು.

ಅಯ್ಯರ್ ಅನುಪಸ್ಥಿತಿಯಲ್ಲಿ, ಐಪಿಎಲ್‌ ಪಂದ್ಯಗಳಲ್ಲಿ ದೆಹಲಿ ಕ್ಯಾಪಿಟಲ್ಸ್ ನಾಯಕತ್ವವನ್ನು ರಿಷಭ್ ಪಂತ್, ಅಜಿಂಕ್ಯ ರಹಾನೆ, ಸ್ಟೀವನ್ ಸ್ಮಿತ್ ಅಥವಾ ರವಿಚಂದ್ರನ್ ಅಶ್ವಿನ್​ಗೆ ನೀಡುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.