ETV Bharat / sports

ಒಂದೇ ಓವರ್​​ನಲ್ಲಿ 6, 6, 4, 6, 6=31ರನ್​​... 2ನೇ ಏಕದಿನ ಪಂದ್ಯದಲ್ಲಿ ದಾಖಲೆ ಬರೆದ ಅಯ್ಯರ್​​​-ರಿಷಭ್ ಜೋಡಿ!

ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​​ಗಳಾದ ಶ್ರೇಯಸ್ ಅಯ್ಯರ್​ ಹಾಗೂ ರಿಷಭ್​ ಪಂತ್​ ಜೋಡಿ ಹೊಸ ದಾಖಲೆವೊಂದನ್ನ ನಿರ್ಮಾಣ ಮಾಡಿದ್ದಾರೆ.

Shreyas Iyer, Rishabh Pant
ಅಯ್ಯರ್​​-ರಿಷಭ್​ ಜೋಡಿ
author img

By

Published : Dec 18, 2019, 7:02 PM IST

ವಿಶಾಖಪಟ್ಟಣ: ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್​​ಮನ್​ಗಳು ಅಬ್ಬರಿಸಿದ್ದು, 50 ಓವರ್​​ಗಳಲ್ಲಿ ಬರೋಬ್ಬರಿ 387ರನ್​ಗಳಿಕೆ ಮಾಡಿದೆ.

ರೋಹಿತ್​​​-ರಾಹುಲ್​ ಜೋಡಿ 200ರನ್​​ಗಳ​​​ ಜೊತೆಯಾಟ ನೀಡಿದ್ದು, ಇದಾದ ಬಳಿಕ ಮೈದಾನ ಹಂಚಿಕೊಂಡ ಅಯ್ಯರ್​​​-ರಿಷಭ್​​ ಜೋಡಿ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ರನ್​ಗಳಿಕೆ ಮಾಡಿ ಹೊಸ ದಾಖಲೆ ನಿರ್ಮಾಣ ಮಾಡಿದೆ. ಈ ಜೋಡಿ ಕೇವಲ 25 ಎಸೆತಗಳಲ್ಲಿ 18.25 ಸರಾಸರಿಯಲ್ಲಿ ಬರೋಬ್ಬರಿ 73ರನ್​ಗಳಿಕೆ ಮಾಡಿದೆ.

Shreyas Iyer, Rishabh Pant
ಶ್ರೇಯಸ್​ ಅಯ್ಯರ್​​

45ನೇ ಓವರ್​​ನಲ್ಲಿ ರೋಹಿತ್​ ಶರ್ಮಾ ವಿಕೆಟ್​​ ಬೀಳುತ್ತಿದ್ದಂತೆ ಮೈದಾನಕ್ಕೆ ಬಂದ ರಿಷಭ್​ ಪಂತ್​ ಒಂದೇ ಓವರ್​​ನಲ್ಲಿ ಎರಡು ಸಿಕ್ಸರ್​​ ಸಿಡಿಸಿದ್ರೆ ನಂತರದ ಓವರ್​​ನಲ್ಲಿ ಮತ್ತೆರಡು ಸಿಕ್ಸರ್​ ಹಾಗೂ ಮೂರು ಬೌಂಡರಿ ಸಿಡಿಸಿದ್ದಾರೆ. ಇದರ ಮುಂದಿನ ಓವರ್​​​ನಲ್ಲಿ ಅಯ್ಯರ್​​​ ನಾಲ್ಕು ಸಿಕ್ಸರ್​ ಹಾಗೂ ಒಂದು ಬೌಂಡರಿ ಸಿಡಿಸಿ 31ರನ್​ ಕಬಳಿಸಿದ್ದಾರೆ. ಭಾರತೀಯ ಜೋಡಿಯಿಂದ ಒಂದೇ ಓವರ್​​ನಲ್ಲಿ ಇಷ್ಟೊಂದು ರನ್​ಗಳಿಕೆಯಾಗಿರುವುದು ಇದೇ ಮೊದಲು ಎಂಬುದು ಗಮನಾರ್ಹ ಸಂಗತಿ. ಈ ಹಿಂದೆ ಸಚಿನ್​ ತೆಂಡೂಲ್ಕರ್​ ಹಾಗೂ ಅಜಯ್​ ಜಡೇಜಾ ಜೋಡಿ 1999ರಲ್ಲಿ ಒಂದೇ ಓವರ್​​ನಲ್ಲಿ 28ರನ್​ಗಳಿಕೆ ಮಾಡಿದ್ದು ಇಲ್ಲಿಯವರೆಗಿನ ಅತಿ ಹೆಚ್ಚಿನ ಸ್ಕೋರ್​ ಆಗಿತ್ತು.

ರಿಷಭ್​ ಪಂತ್​​ 16 ಎಸೆತಗಳಲ್ಲಿ 4 ಸಿಕ್ಸರ್​​​ ಹಾಗೂ 3 ಬೌಂಡರಿ ಸೇರಿ 39ರನ್​​ಗಳಿಕೆ ಮಾಡಿದರೆ, ಶ್ರೇಯಸ್​ ಅಯ್ಯರ್​ 4ಸಿಕ್ಸರ್​​ ಹಾಗೂ 3 ಬೌಂಡರಿ ಸೇರಿ​​​ 32 ಎಸೆತಗಳಲ್ಲಿ 53ರನ್​ಗಳಿಕೆ ಮಾಡಿದರು. ​2015ರಲ್ಲಿ ಸ್ಟುವರ್ಟ್​ ಬಿನ್ನಿ ಹಾಗೂ ಕೇದಾರ್​ ಜಾಧವ್​​ ಜಿಂಬಾಬ್ವೆ ವಿರುದ್ಧ 15.78ರ ಸರಾಸರಿಯಲ್ಲಿ 50ರನ್​ಗಳಿಕೆ ಮಾಡಿದ್ದರ ರೆಕಾರ್ಡ್​ ಬ್ರೇಕ್​ ಮಾಡಿದ್ದಾರೆ.

Intro:Body:

ಒಂದೇ ಓವರ್​​ನಲ್ಲಿ 6, 6, 4, 6, 6... 2ನೇ ಏಕದಿನ ಪಂದ್ಯದಲ್ಲಿ ದಾಖಲೆ ಬರೆದ ಅಯ್ಯರ್​​​-ರಿಷಭ್ ಜೋಡಿ! 

ವಿಶಾಖಪಟ್ಟಣ: ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್​​ಮನ್​ಗಳು ಅಬ್ಬರಿಸಿದ್ದು, 50 ಓವರ್​​ಗಳಲ್ಲಿ ಬರೋಬ್ಬರಿ 387ರನ್​ಗಳಿಕೆ ಮಾಡಿದೆ. 

ರೋಹಿತ್​​​-ರಾಹುಲ್​ ಜೋಡಿ 200ರನ್​​ಗಳ​​​ ಜೊತೆಯಾಟ ನೀಡಿದ್ದು, ಇದಾದ ಬಳಿಕ ಮೈದಾನ ಹಂಚಿಕೊಂಡ ಅಯ್ಯರ್​​​-ರಿಷಭ್​​ ಜೋಡಿ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ರನ್​ಗಳಿಕೆ ಮಾಡಿ ಹೊಸ ದಾಖಲೆ ನಿರ್ಮಾಣ ಮಾಡಿದೆ. ಈ ಜೋಡಿ ಕೇವಲ 25 ಎಸೆತಗಳಲ್ಲಿ 18.25 ಸರಾಸರಿಯಲ್ಲಿ ಬರೋಬ್ಬರಿ 73ರನ್​ಗಳಿಕೆ ಮಾಡಿದೆ. 

45ನೇ ಓವರ್​​ನಲ್ಲಿ ರೋಹಿತ್​ ಶರ್ಮಾ ವಿಕೆಟ್​​ ಬೀಳುತ್ತಿದ್ದಂತೆ ಮೈದಾನಕ್ಕೆ ಬಂದ ರಿಷಭ್​ ಪಂತ್​ ಒಂದೇ ಓವರ್​​ನಲ್ಲಿ ಎರಡು ಸಿಕ್ಸರ್​​ ಸಿಡಿಸಿದ್ರೆ ನಂತರದ ಓವರ್​​ನಲ್ಲಿ ಮತ್ತೆರಡು ಸಿಕ್ಸರ್​ ಹಾಗೂ ಮೂರು ಬೌಂಡರಿ ಸಿಡಿಸಿದ್ದಾರೆ. ಇದರ ಮುಂದಿನ ಓವರ್​​​ನಲ್ಲಿ ಅಯ್ಯರ್​​​ ನಾಲ್ಕು ಸಿಕ್ಸರ್​ ಹಾಗೂ ಒಂದು ಬೌಂಡರಿ ಸಿಡಿಸಿ 31ರನ್​ ಕಬಳಿಸುತ್ತಾರೆ. ಭಾರತೀಯ ಜೋಡಿಯಿಂದ ಒಂದೇ ಓವರ್​​ನಲ್ಲಿ ಇಷ್ಟೊಂದು ರನ್​ಗಳಿಕೆಯಾಗಿರುವುದು ಇದೇ ಮೊದಲು ಎಂಬುದು ಗಮನಾರ್ಹ ಸಂಗತಿ. ಈ ಹಿಂದೆ ಸಚಿನ್​ ತೆಂಡೂಲ್ಕರ್​ ಹಾಗೂ ಅಜಯ್​ ಜಡೇಜಾ ಜೋಡಿ 1999ರಲ್ಲಿ ಒಂದೇ ಓವರ್​​ನಲ್ಲಿ 28ರನ್​ಗಳಿಕೆ ಮಾಡಿದ್ದು ಇಲ್ಲಿಯವರೆಗಿನ ಅತಿ ಹೆಚ್ಚಿನ ಸ್ಕೋರ್​ ಆಗಿತ್ತು. 

ರಿಷಭ್​ ಪಂತ್​​ 16 ಎಸೆತಗಳಲ್ಲಿ 4 ಸಿಕ್ಸರ್​​​ ಹಾಗೂ 3 ಬೌಂಡರಿ ಸೇರಿ 39ರನ್​​ಗಳಿಕೆ ಮಾಡಿದರೆ, ಶ್ರೇಯಸ್​ ಅಯ್ಯರ್​ 4ಸಿಕ್ಸರ್​​ ಹಾಗೂ 3 ಬೌಂಡರಿ ಸೇರಿ​​​ 32 ಎಸೆತಗಳಲ್ಲಿ 53ರನ್​ಗಳಿಕೆ ಮಾಡಿದರು.  ​2015ರಲ್ಲಿ ಸ್ಟುವರ್ಟ್​ ಬಿನ್ನಿ ಹಾಗೂ ಕೇದಾರ್​ ಜಾಧವ್​​ ಜಿಂಬಾಬ್ವೆ ವಿರುದ್ಧ 15.78ರ ಸರಾಸರಿಯಲ್ಲಿ 50ರನ್​ಗಳಿಕೆ ಮಾಡಿದ್ದರ ರೆಕಾರ್ಡ್​ ಬ್ರೇಕ್​ ಮಾಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.