ETV Bharat / sports

2019ರ ಏಕದಿನ ವಿಶ್ವಕಪ್ ತಂಡದ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕಿತ್ತು: ಅಜಿಂಕ್ಯಾ ರಹಾನೆ

ದೆಹಲಿ ಕ್ಯಾಪಿಟಲ್​ ತಂಡದೊಂದಿಗೆ ಮುಂಬರುವ ಐಪಿಎಲ್​ನಲ್ಲಿ ಆಡುತ್ತಿರುವ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ 2019ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದಿರುವುದಕ್ಕೆ ನಿರಾಶೆಗೊಂಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಅಜಿಂಕ್ಯಾ ರಹಾನೆ
ಅಜಿಂಕ್ಯಾ ರಹಾನೆ
author img

By

Published : Aug 27, 2020, 7:57 PM IST

ದುಬೈ : ಭಾರತ ಏಕದಿನ ಕ್ರಿಕೆಟ್​ ತಂಡದಿಂದ ಅವಕಾಶ ವಂಚಿತನಾಗಿರುವ ಅಜಿಂಕ್ಯಾ ರಹಾನೆ 2018ರಿಂದ ಏಕದಿನ ಕ್ರಿಕೆಟ್​ ಆಡಿಲ್ಲ. ಆದರೆ 2019ರ ವಿಶ್ವಕಪ್​ನಲ್ಲಿ ನಾನು ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕೆಂಬ ಬಯಕೆ ಇದ್ದಿದ್ದು ನಿಜ ಎಂದು ಹೇಳಿಕೊಂಡಿದ್ದಾರೆ.

ದೆಹಲಿ ಕ್ಯಾಪಿಟಲ್​ ತಂಡದೊಂದಿಗೆ ಮುಂಬರುವ ಐಪಿಎಲ್​ನಲ್ಲಿ ಆಡುತ್ತಿರುವ ಅವರು ಮಾಧ್ಯಮದ ಜೊತೆ ಮಾತನಾಡುತ್ತಾ 2019ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದಿರುವುದಕ್ಕೆ ನಿರಾಶೆಗೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ.

ಅಜಿಂಕ್ಯಾ ರಹಾನೆ
ಅಜಿಂಕ್ಯಾ ರಹಾನೆ

ನನ್ನ ಸದ್ಯದ ಗುರಿ ಡೆಲ್ಲಿ ಕ್ಯಾಪಿಟಲ್​ ತಂಡದ ಪರ ಉತ್ತಮ ಪ್ರದರ್ಶನ ತೋರುವುದಾಗಿದೆ. ನನ್ನ ಏಕದಿನ ಪುನರಾಗಮನದ ಬಗ್ಗೆ ನನಗೆ ಖಾತ್ರಿಯಿದೆ, ಮತ್ತು ನನಗೆ ನನ್ನ ಮೇಲೆ ನಂಬಿಕೆಯಿದೆ. ಈಗ ಅದರ(ವಿಶ್ವಕಪ್​) ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ಆದರೆ ವಿಶ್ವಕಪ್​ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ನಾನು ಆಡುತ್ತೇನೆಂದು ನಾನು ಭಾವಿಸಿದ್ದೆ ಎಂದು ರಹಾನೆ ಮಾಧ್ಯಮಗಳ ಮುಂದೆ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ವಿಶ್ವಕಪ್​ನಲ್ಲಿ ನಾಲ್ಕನೇ ಬ್ಯಾಟಿಂಗ್​ ಕ್ರಮಾಂಕದಲ್ಲಿರುತ್ತೇನೆ ಎಂದು ನಿಜವಾಗಿ ಭಾವಿಸಿದ್ದೆ. ಆದರೆ ಈಗ ಅದು ಮುಗಿದೆ ಹೋಗಿದೆ. ಅದರ ಬಗ್ಗೆ ಹೆಚ್ಚು ಯೋಚಿಸಲು ಸಾಧ್ಯವಿಲ್ಲ. ನನ್ನ ಗುರಿ ಏಕದಿನ ಕ್ರಿಕೆಟ್​ಗೆ ಮರಳುವುದು. ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತೇನೆ ಎಂಬುದರ ಬಗ್ಗೆ ನನಗೆ ವಿಶ್ವಾಸವಿದೆ ಎಂದಿದ್ದಾರೆ.

ಒಬ್ಬ ಆಟಗಾರನಾಗಿ ವಿಶ್ವಕಪ್​ನಲ್ಲಿ ಆಡಬೇಕೆಂದು ಎಲ್ಲರೂ ಬಯಸುತ್ತಾರೆ. ವಿಶೇಷವಾಗಿ ನೀವು ನಿಜವಾಗಿ ತಂಡಕ್ಕಾಗಿ ಶ್ರಮಿಸಿದ್ದೀರಿ ಎಂದು ನೀವು ತಿಳಿದಿದ್ದಾಗ ಮತ್ತು ತಂಡದಲ್ಲಿ ನೀವು ಉತ್ತಮ ದಾಖಲೆಯನ್ನು ಹೊಂದಿದ್ದಾಗ ಬಯಕೆ ಇದ್ದೇ ಇರುತ್ತದೆ ಎಂದು ತಮಗೆ ವಿಶ್ವಕಪ್​ನಲ್ಲಿ ಆಡುವ ಅರ್ಹತೆ ಇತ್ತು ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಅಜಿಂಕ್ಯಾ ರಹಾನೆ 90 ಏಕದಿನ ಪಂದ್ಯಗಳನ್ನಾಡಿದ್ದು, 3 ಶತಕ ಹಾಗೂ 24 ಅರ್ಧಶತಕಗಳ ಸಹಿತ 2962 ರನ್​ಗಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.