ನವದೆಹಲಿ: ಸೆಪ್ಟೆಂಬರ್ 19ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಈ ಟೂರ್ನಿಗಾಗಿ ಈಗಿನಿಂದಲೇ ಎಲ್ಲ ಆಟಗಾರರು ತಯಾರಾಗುತ್ತಿದ್ದಾರೆ. ಟೀಂ ಇಂಡಿಯಾದ ಆರಂಭಿಕ ದಾಂಡಿಗ ಶಿಖರ್ ಧವನ್ ಮೈದಾನಕ್ಕಿಳಿದು ನೆಟ್ ಪ್ರಾಕ್ಟಿಸ್ ಶುರು ಮಾಡಿದ್ದಾರೆ.
-
Keeping the intensity going 🔥 Love the sound of the bat on ball 💥 pic.twitter.com/ZuOZ4JYWQ3
— Shikhar Dhawan (@SDhawan25) July 31, 2020 " class="align-text-top noRightClick twitterSection" data="
">Keeping the intensity going 🔥 Love the sound of the bat on ball 💥 pic.twitter.com/ZuOZ4JYWQ3
— Shikhar Dhawan (@SDhawan25) July 31, 2020Keeping the intensity going 🔥 Love the sound of the bat on ball 💥 pic.twitter.com/ZuOZ4JYWQ3
— Shikhar Dhawan (@SDhawan25) July 31, 2020
ಲಾಕ್ಡೌನ್ ಹಾಗೂ ಕೊರೊನಾ ವೈರಸ್ ಸೋಂಕು ಹರಡುವ ಭೀತಿಯ ಕಾರಣದಿಂದ ಮನೆಯಲ್ಲಿಯೇ ಧವನ್ ಸಮಯ ಕಳೆದಿದ್ದರು. ಆದರೀಗ ದುಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸಲು ಬಿಸಿಸಿಐ ಮುಂದಾಗುತ್ತಿದ್ದಂತೆ ಅವರು ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಈ ಕುರಿತ ವಿಡಿಯೊವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಭ್ಯಾಸದ ವೇಳೆ ಲೀಲಾಜಾಲವಾಗಿ ಬ್ಯಾಟ್ ಬೀಸಿರುವ ಅವರು, ಭಾರತದ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ.
ಶಿಖರ್ ಧವನ್ IPL ಸಾಧನೆ:
ಐಪಿಎಲ್‌ನಲ್ಲಿ 2018ರಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿರುವ ಶಿಖರ್ ಧವನ್, 2019ರಲ್ಲಿ 521 ರನ್ ಸಾಧನೆ ಮಾಡಿದ್ದರು. ಟೂರ್ನಿಯಲ್ಲಿ ಆಡಿರುವ 159 ಪಂದ್ಯಗಳಿಂದ 4,579 ರನ್ ಕಲೆ ಹಾಕಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಟೀಂ ಇಂಡಿಯಾ ಯಾವುದೇ ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಂಡಿಲ್ಲ.