ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಐಪಿಎಲ್ನಲ್ಲಿ 5000 ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 5ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರವಿ ಬಿಷ್ಣೋಯ್ ಅವರ ಓವರ್ನಲ್ಲಿ ಸಿಕ್ಸರ್ ಸಿಡಿಸುತ್ತಿದ್ದಂತೆ ಐಪಿಎಲ್ನಲ್ಲಿ 5000 ರನ್ಸ್ ಗಡಿದಾಟಿದರು. ಈ ಪಂದ್ಯಕ್ಕೂ ಮುನ್ನ ಅವರು 4,938 ರನ್ಗಳಿಸಿದ್ದರು.
-
5000* runs for @SDhawan25 in IPL.
— IndianPremierLeague (@IPL) October 20, 2020 " class="align-text-top noRightClick twitterSection" data="
He is the 5th player to reach the milestone and 4th Indian to achieve this feat.#Dream11IPL pic.twitter.com/ZOm1ix6ORm
">5000* runs for @SDhawan25 in IPL.
— IndianPremierLeague (@IPL) October 20, 2020
He is the 5th player to reach the milestone and 4th Indian to achieve this feat.#Dream11IPL pic.twitter.com/ZOm1ix6ORm5000* runs for @SDhawan25 in IPL.
— IndianPremierLeague (@IPL) October 20, 2020
He is the 5th player to reach the milestone and 4th Indian to achieve this feat.#Dream11IPL pic.twitter.com/ZOm1ix6ORm
ಶಿಖರ್ ಧವನ್ಗೂ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ (5,759), ಸುರೇಶ್ ರೈನಾ(5,368), ರೋಹಿತ್ ಶರ್ಮಾ(5,158) ಹಾಗೂ ಡೇವಿಡ್ ವಾರ್ನರ್(5,037)ಐಪಿಎಲ್ನಲ್ಲಿ 5000 ರನ್ಗಡಿದಾಟಿದ ಬ್ಯಾಟ್ಸ್ಮನ್ ಆಗಿದ್ದಾರೆ.
ಧವನ್ 5000 ರನ್ ಗಡಿದಾಟಿದ್ದಲ್ಲೆ ವೇಗವಾಗಿ ಈ ಸಾಧನೆ ಮಾಡಿದ 3ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಡೇವಿಡ್ ವಾರ್ನರ್ 135 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರೆ, ಕೊಹ್ಲಿ 157, ಧವನ್ 168, ರೈನಾ 173 ಹಾಗೂ ರೋಹಿತ್ ಶರ್ಮಾ 187 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ.