ಮುಂಬೈ: ಮಹಿಳಾ ಕ್ರಿಕೆಟರ್ಗಳ ವಾರ್ಷಿಕ ಗುತ್ತಿಗೆಯನ್ನು ಬಿಸಿಸಿಐ ಪ್ರಕಟಿಸಿದ್ದು, 15 ವರ್ಷದ ಶೆಫಾಲಿ ವರ್ಮಾ ವಾರ್ಷಿಕ ಗುತ್ತಿಗೆಯಲ್ಲಿ ಅವಕಾಶ ಪಡೆದಿದ್ದಾರೆ.
ಟಿ-20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್, ಆರಂಭಿಕ ಬ್ಯಾಟ್ಸ್ಮನ್ ಸ್ಮೃತಿ ಮಂದಾನ ಹಾಗೂ ಸ್ಪಿನ್ ಬೌಲರ್ ಪೂನಮ್ ಯಾದವ್ ಎ ಗ್ರೇಡ್ ಪಡೆದಿದ್ದಾರೆ. ಇತ್ತೀಚೆಗೆ ಟಿ-20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಬಿ ಗ್ರೇಡ್ಗೆ ಹಿಂಬಡ್ತಿ ಪಡೆದಿದ್ದಾರೆ.
ಬಿ ಗ್ರೇಡ್ನಲ್ಲಿ 8 ಆಟಗಾರ್ತಿಯರು ಹಾಗೂ ಸಿ ಗ್ರೇಡ್ನಲ್ಲಿ 11 ಆಟಗಾರ್ತಿಯರು ಅವಕಾಶ ಪಡೆದಿದ್ದಾರೆ.
ಇನ್ನು ಕೇವಲ 15 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಹರಿಯಾಣದ ಶಫಾಲಿ ವರ್ಮಾ ಮೊದಲ ಬಾರಿಗೆ ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ವಾರ್ಷಿಕ ಗುತ್ತಿಗೆಯಲ್ಲಿರುವ ಆಟಗಾರ್ತಿಯರು:
ಎ ಗ್ರೇಡ್ (50 ಲಕ್ಷ ರೂ):- ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ, ಪೂನಮ್ ಯಾದವ್
ಬಿ ಗ್ರೇಡ್ (30 ಲಕ್ಷ ರೂ):
ಮಿಥಾಲಿ ರಾಜ್, ಜೂಲಾನ್ ಗೋಸ್ವಾಮಿ, ಏಕ್ತಾ ಬಿಸ್ತ್, ರಾಧ ಯಾದವ್, ಶಿಖಾ ಪಾಂಡೆ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ತನಿಯಾ ಭಾಟಿಯಾ
ಸಿ ಗ್ರೇಡ್(10 ಲಕ್ಷ ರೂ):
ವೇದಾ ಕೃಷ್ಣಮೂರ್ತಿ, ಪೂನಮ್ ರಾವುತ್, ಅನುಜಾ ಪಾಟಿಲ್, ಮಾನ್ಸಿ ಜೋಶಿ, ಡಿ ಹೇಮಲತಾ, ಅರುಂಧತಿ ರೆಡ್ಡಿ, ರಾಜೇಶ್ವರಿ ಗಾಯಕವಾಡ್, ಪೂಜಾ ವಸ್ತ್ರಾಕರ್, ಹರ್ಲೀನ್ ಡಿಯೋಲ್, ಪ್ರಿಯಾ ಪೂನಿಯಾ, ಶಫಾಲಿ ವರ್ಮಾ