ಮುಂಬೈ : ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿರುವ ತಮಿಳುನಾಡಿನ ಬ್ಯಾಟ್ಸ್ಮನ್ ಶಾರುಖ್ ಖಾನ್ ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕನಾಗಿರುವ ಅನಿಲ್ ಕುಂಬ್ಳೆಯವರಿಂದ ಮೆಚ್ಚುಗೆ ಪಡೆದಿದ್ದಾರೆ.
ಮೊದಲ ಆವೃತ್ತಿಯನ್ನಾಡಲಿರುವ ಶಾರುಖ್ ತಮಗೆ ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಕೀರನ್ ಪೊಲಾರ್ಡ್‌ರನ್ನು ನೆನಪಿಸುತ್ತಾರೆ ಎಂದು ಭಾರತದ ಮಾಜಿ ಸ್ಪಿನ್ ದಿಗ್ಗಜ ಕುಂಬ್ಳೆ 25 ವರ್ಷದ ಆಟಗಾರನನ್ನು ಗುಣಗಾನ ಮಾಡಿದ್ದಾರೆ. ನೆಟ್ಸ್ನಲ್ಲಿ ಶಾರುಖ್‌ಗೆ ಬೌಲಿಂಗ್ ಮಾಡುವಾಗ ಆತನ ಕೌಶಲ್ಯ ಪೋಲಾರ್ಡ್ರನ್ನು ನೆನಪಿಸಿದೆ ಎಂದು ಕನ್ನಡಿಗ ಹೇಳಿಕೊಂಡಿದ್ದಾರೆ.
"ಆತ ನನಗೆ ಸ್ವಲ್ಪ ಪೋಲಾರ್ಡ್ರನ್ನು ನೆನಪಿಸುತ್ತಾನೆ. ನಾನು ಮುಂಬೈ ಇಂಡಿಯನ್ಸ್ನಲ್ಲಿದ್ದಾಗ ಪೋಲಾರ್ಡ್ ನೆಟ್ಸ್ನಲ್ಲಿ ತುಂಬಾ ಅಪಾಯಕಾರಿಯಾಗಿರುತ್ತಿದ್ದುದನ್ನು ನೋಡಿದ್ದೇನೆ. ಅದಕ್ಕಾಗಿ ನಾನು ಅವರಿಗೆ ನೆಟ್ಸ್ನಲ್ಲಿ ಬೌಲಿಂಗ್ ಮಾಡುವ ವೇಳೆ, ನೇರವಾಗಿ ಹೊಡೆಯಬೇಡಿ ಎಂದು ಅವರಿಗೆ ಮೊದಲೇ ತಿಳಿಸುತ್ತಿದ್ದೆ.
ಆದರೆ, ಇಲ್ಲಿ (ಶಾರುಖ್‌ಗೆ) ನಾನು ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿಲ್ಲ. ಯಾಕೆಂದರೆ, ನನಗೆ ವಯಸ್ಸಾಗಿದೆ. ನನ್ನ ದೇಹ ಬೌಲಿಂಗ್ ಮಾಡಲು ಸಹಕರಿಸುವುದಿಲ್ಲ. ಹಾಗಾಗಿ, ಶಾರುಖ್‌ಗೆ ನಾನು ಇಲ್ಲಿ ಬೌಲಿಂಗ್ ಖಂಡಿತ ಮಾಡಲು ಹೋಗುವುದಿಲ್ಲ ಎಂದು ಕುಂಬ್ಳೆ ತಿಳಿಸಿದ್ದಾರೆ.
ಶಾರುಖ್ ಖಾನ್ರನ್ನು ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸಿಎಸ್ಕೆ ಮತ್ತು ಡೆಲ್ಲಿ ತಂಡಕ್ಕೆ ಪೈಪೋಟಿ ನೀಡಿ 5.25 ಕೋಟಿ ರೂ. ಗಳಿಗೆ ಖರೀದಿಸಿದೆ.
ಇದನ್ನು ಓದಿ:ಕಳೆದ ಐಪಿಎಲ್ ಪರಿಸ್ಥಿತಿ ಬೇರೆ, ಈ ಬಾರಿ ನಾವೆಲ್ಲರೂ ಆಕ್ರಮಣಕಾರಿ ರಾಹುಲ್ ನೋಡಲಿದ್ದೇವೆ: ಜಾಫರ್