ETV Bharat / sports

ಡೆಲ್ಲಿ ವಿರುದ್ಧ ಪಂದ್ಯಕ್ಕೂ ಮುನ್ನ ಅಜ್ಜಿ ಸಾವಿನ ಸುದ್ದಿ ಕೇಳಿದ್ದ ವಾಟ್ಸನ್.. ಕುಟುಂಬದ ಜತೆಯಿರಲಾಗದ್ದಕ್ಕೆ ಬೇಸರ - ಐಪಿಎಲ್ 2020

ವಾಟ್ಸನ್​ ತಮ್ಮ ಕುಟುಂಬದಲ್ಲಿ ಸಾವಾಗಿದ್ದರೂ ಪಂದ್ಯದಲ್ಲಿ ಆಡುವ ಮನಸ್ಸು ಮಾಡಿದ ನಿರ್ಧಾರಕ್ಕೆ ಆಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2019ರ ಫೈನಲ್​ ಪಂದ್ಯದಲ್ಲಿ ಮಂಡಿಯಲ್ಲಿ ಗಾಯವಾಗಿ ರಕ್ತ ಸೋರುತ್ತಿದ್ದರೂ ತಂಡ ಗೆಲ್ಲಿಸುವುದಕ್ಕಾಗಿ ಆಡಿ ಕ್ರಿಕೆಟ್​ ಅಭಿಮಾನಿಗಳ ಮನಗೆದ್ದಿದ್ದರು..

ಶೇನ್ ವಾಟ್ಸನ್​
ಶೇನ್ ವಾಟ್ಸನ್​
author img

By

Published : Sep 27, 2020, 4:26 PM IST

ದುಬೈ: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಎರಡು ದಿನಗಳಿಗೂ ಮುನ್ನ ಸಿಎಸ್​ಕೆ ಬ್ಯಾಟ್ಸ್​ಮನ್​ ಶೇನ್ ವಾಟ್ಸನ್​ ಅವರ ಅಜ್ಜಿ ತೀರಿಕೊಂಡ ವಿಷಯ ಹಂಚಿಕೊಂಡಿದ್ದು, ತಾವು ಈ ಕಠಿಣ ಸಂದರ್ಭದಲ್ಲಿ ಕುಟುಂಬದ ಜೊತೆಯಿರಲು ಸಾಧ್ಯವಾಗದಿರುವುದಕ್ಕೆ ಕ್ಷಮೆ ಕೋರಿದ್ದಾರೆ. 2018ರಲ್ಲಿ ಸಿಎಸ್​ಕೆಗೆ ಟ್ರೋಫಿ ತಂದುಕೊಡಲು ಪ್ರಮುಖ ಪಾತ್ರವಹಿಸಿದ್ದ ಶೇನ್ ವಾಟ್ಸನ್​, 2019ರಲ್ಲಿ ಸರಾಸರಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆದರೆ, 2020ರಲ್ಲಿ ತಮ್ಮ ಆಡಿದ ಮೂರು ಪಂದ್ಯಗಳಲ್ಲೂ 4, 33 ಹಾಗೂ 14 ರನ್​ಗಳಿಸಿ ಲಯಕ್ಕೆ ಮರಳಲು ವಿಫಲರಾಗಿದ್ದಾರೆ.

ಆದರೆ, ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಎರಡು ದಿನಗಳಿರುವಾಗ ವಾಟ್ಸನ್​ಗೆ ಅಘಾತಕಾರಿ ಸುದ್ದಿಯೊಂದು ಮನಸ್ಸಿಗೆ ನೋವುಂಟು ಮಾಡಿರುವುದಾಗಿ ಇದೀಗ ಬೆಳಕಿಗೆ ಬಂದಿದೆ. ಅದೇನೆಂದ್ರೆ ವಾಟ್ಸ​ನ್ ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಪಾಲ್ಗೊಳ್ಳುವ ಮುನ್ನ, ಅವರ ಅಜ್ಜಿ ನಿಧನರಾದ ಸುದ್ದಿ ತಿಳಿದಿತ್ತು. ಆದರೆ, ಅವರು ತಂಡದ ಹಿತಕ್ಕೋಸ್ಕರ ಮೈದಾನಕ್ಕಿಳಿದರಾದರೂ ಉತ್ತಮ ರನ್​ಗಳಿಸಲಾಗಲಿಲ್ಲ. ಅವರು ಕೇವಲ 14 ರನ್​ಗಳಿಸಿ ಔಟಾದರು.

"ನನ್ನ ಪ್ರೀತಿಯನ್ನು ಮನಯಲ್ಲಿರುವ ನನ್ನ ಕುಟುಂಬಕ್ಕೆ ಕಹುಹಿಸಲು ಬಯಸುತ್ತೇನೆ ಮತ್ತು ನನ್ನ ಅಮ್ಮನಿಗೆ ಅಜ್ಜಿ ನಂಬಲಾಸಾಧ್ಯವಾದ ತಾಯಿಯಾಗಿದ್ದಳು ಎಂದು ನನಗೆ ತಿಳಿದಿದೆ. ನಾನು ಅಲ್ಲಿರಲು ಸಾಧ್ಯವಾಗದಿರುವುದಕ್ಕೆ ನನ್ನನ್ನು ಕ್ಷಮಿಸಿ. ಆದರೆ, ನನ್ನ ಹೃದಯ ಈ ಸಂದರ್ಭದಲ್ಲಿ ನನ್ನ ಕುಟುಂಬದ ಜೊತೆಯಿರುತ್ತದೆ" ಎಂದು ನೋವಿನಿಂದ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್​ ಡೀನ್ ಜೋನ್ಸ್​ ಅವರಿಗೂ ಸಂತಾಪ ಸೂಚಿಸಿದ್ದಾರೆ.

ವಾಟ್ಸನ್​ ತಮ್ಮ ಕುಟುಂಬದಲ್ಲಿ ಸಾವಾಗಿದ್ದರೂ ಪಂದ್ಯದಲ್ಲಿ ಆಡುವ ಮನಸ್ಸು ಮಾಡಿದ ನಿರ್ಧಾರಕ್ಕೆ ಆಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2019ರ ಫೈನಲ್​ ಪಂದ್ಯದಲ್ಲಿ ಮಂಡಿಯಲ್ಲಿ ಗಾಯವಾಗಿ ರಕ್ತ ಸೋರುತ್ತಿದ್ದರೂ ತಂಡವನ್ನು ಗೆಲ್ಲಿಸುವುದಕ್ಕಾಗಿ ಆಡಿ ಕ್ರಿಕೆಟ್​ ಅಭಿಮಾನಿಗಳ ಮನಗೆದ್ದಿದ್ದರು. ಆದರೆ, ಇವರ ಶ್ರಮದ ಹೊರೆತಾಗಿಯೂ ಚೆನ್ನೈ 1 ರನ್ನಿಂದ ಸೋಲು ಕಂಡಿತ್ತು. ಆ ಪಂದ್ಯದಲ್ಲಿ ವಾಟ್ಸನ್​ 59 ಎಸೆತಗಳಲ್ಲಿ 80 ರನ್​ಗಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.