ETV Bharat / sports

ಕಳಪೆ ಪ್ರದರ್ಶನ: ಐಪಿಎಲ್​​ನಿಂದ ವ್ಯಾಟ್ಸನ್​​ ನಿವೃತ್ತಿ? - ಆಲ್​ರೌಂಡರ್​ ಶೇನ್​ ವ್ಯಾಟ್ಸನ್​​​

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಪರ ಕಣಕ್ಕಿಳಿದಿದ್ದ ವ್ಯಾಟ್ಸನ್​ ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿಲ್ಲ. ಹೀಗಾಗಿ ಅವರು ಐಪಿಎಲ್​​ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

Shane Watson
Shane Watson
author img

By

Published : Nov 2, 2020, 7:47 PM IST

ಹೈದರಾಬಾದ್​: ಐಪಿಎಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪರ ಕಣಕ್ಕಿಳಿಯುತ್ತಿದ್ದ ಆಲ್​ರೌಂಡರ್​ ಶೇನ್​ ವ್ಯಾಟ್ಸನ್​​​ ಇದೀಗ ನಿವೃತ್ತಿ ಪಡೆದುಕೊಂಡಿದ್ದಾರೆ ಎಂಬ ವರದಿ ಎಲ್ಲೆಡೆ ಹರಿದಾಡ್ತಿದೆ.

2016ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿರುವ ವ್ಯಾಟ್ಸನ್​, ಪ್ರಾಂಚೈಸಿಯ ವಿವಿಧ ಟೂರ್ನಿಗಳಲ್ಲಿ ಭಾಗಿಯಾಗುತ್ತಿದ್ದರು. 13ನೇ ಆವೃತ್ತಿಯ ಐಪಿಎಲ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಏನು ಅವರಿಂದ ಮೂಡಿ ಬಂದಿರಲಿಲ್ಲ. ಹೀಗಾಗಿ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಅವರು ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನು ಚೆನ್ನೈ ಸೂಪರ್​ ಕಿಂಗ್ಸ್​ ಡ್ರೆಸ್ಸಿಂಗ್​ ರೂಂನಲ್ಲಿ ಅವರು ನಿವೃತ್ತಿ ಘೋಷಣೆ ಮಾಡ್ತಿದ್ದ ವೇಳೆ ಭಾವುಕರಾಗಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

2018ರ ಸನ್ ​ರೈಸರ್ಸ್​ ಹೈದರಾಬಾದ್​ ವಿರುದ್ಧದ ಫೈನಲ್​​ ಪಂದ್ಯದಲ್ಲಿ ಸಿಎಸ್​ಕೆ ಪರ ಕಣಕ್ಕಿಳಿದಿದ್ದ ವ್ಯಾಟ್ಸನ್​ ಕೇವಲ 57 ಎಸೆತಗಳಲ್ಲಿ ಬರೋಬ್ಬರಿ 117 ರನ್​ ಗಳಿಸಿ ತಂಡ ಟ್ರೋಫಿ ಗೆಲ್ಲುವಂತೆ ಮಾಡಿದ್ದರು. ಇನ್ನು 2008ರಲ್ಲಿ ಪ್ರಶಸ್ತಿ ಗೆದ್ದ ಆರ್​ಆರ್​ ತಂಡದಲ್ಲೂ ವ್ಯಾಟ್ಸನ್​ ಇದ್ದರು. 39 ವರ್ಷದ ವ್ಯಾಟ್ಸನ್​ ಇಲ್ಲಿಯವರೆಗೆ 145 ಪಂದ್ಯಗಳನ್ನಾಡಿದ್ದು, 3,874 ರನ್​ಗಳಿಸಿದ್ದು, 92 ವಿಕೆಟ್​ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ 59 ಟೆಸ್ಟ್​, 190 ಏಕದಿನ ಹಾಗೂ 50 ಟಿ-20 ಪಂದ್ಯಗಳನ್ನಾಡಿದ್ದಾರೆ. ಐಪಿಎಲ್​ನಲ್ಲಿ ರಾಜಸ್ಥಾನ, ಆರ್​ಸಿಬಿ ಹಾಗೂ ಚೆನ್ನೈ ಪರ ಆಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.