ಇಸ್ಲಾಮಾಬಾದ್: ಮಹಾಮಾರಿ ಕೊರೊನಾ ವೈರಸ್ ಪಕ್ಕದ ರಾಷ್ಟ್ರ ಪಾಕಿಸ್ತಾನದಲ್ಲಿ ರೌದ್ರನರ್ತನ ಹೊರಹಾಕುತ್ತಿದ್ದು, ಇಷ್ಟಾದರೂ ಯಾವುದೇ ಹೇಳಿಕೊಳ್ಳುವಂತಹ ಕ್ರಮ ಕೈಗೊಳ್ಳಲು ಇಮ್ರಾನ್ ಸರ್ಕಾರ ಮುಂದಾಗಿಲ್ಲ. ಇದರ ಮಧ್ಯೆ ಕ್ರಿಕೆಟರ್ ಮಾಡುತ್ತಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
-
Humanity is bigger than anything! Thank you Bhajji for your kind words. The world needs to unite, it is our collective responsibility to help the poor and needy in every way possible in the global fight against #COVID2019 https://t.co/QasLBJ9kXk
— Shahid Afridi (@SAfridiOfficial) March 25, 2020 " class="align-text-top noRightClick twitterSection" data="
">Humanity is bigger than anything! Thank you Bhajji for your kind words. The world needs to unite, it is our collective responsibility to help the poor and needy in every way possible in the global fight against #COVID2019 https://t.co/QasLBJ9kXk
— Shahid Afridi (@SAfridiOfficial) March 25, 2020Humanity is bigger than anything! Thank you Bhajji for your kind words. The world needs to unite, it is our collective responsibility to help the poor and needy in every way possible in the global fight against #COVID2019 https://t.co/QasLBJ9kXk
— Shahid Afridi (@SAfridiOfficial) March 25, 2020
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ, ಅಲ್ಲಿನ ಜನರಿಗೆ ಅಗತ್ಯ ವಸ್ತು ನೀಡುವ ಕೆಲಸ ಮಾಡುತ್ತಿದ್ದು, ಇದೇ ವಿಷಯವನ್ನಿಟ್ಟುಕೊಂಡು ಹರ್ಭಜನ್ ಸಿಂಗ್ ಅವರ ಬೆನ್ನು ತಟ್ಟುವ ಕೆಲಸ ಮಾಡಿದ್ದರು. ಮಾನವೀಯತೆಗಾಗಿ ಉತ್ತಮ ಕೆಲಸ ಮಾಡುತ್ತಿದ್ದೀರಿ. ದೇವರು ನಿಮ್ಮೆಲ್ಲರನ್ನೂ ಆಶೀರ್ವದಿಸಲಿ... ನಿಮಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ಹೇಳಿದ್ದರು.
ಇದೀಗ ಭಜ್ಜಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಅಫ್ರಿದಿ, ಮಾನವೀಯತೆ ಎಲ್ಲಕ್ಕಿಂತ ದೊಡ್ಡದು. ಥ್ಯಾಂಕೂ ಭಜ್ಜಿ ನಿಮ್ಮ ವಾತ್ಸಲ್ಯದ ಮಾತುಗಳಿಗಾಗಿ. ಇದು ನಮ್ಮ ಜವಾಬ್ದಾರಿಯಾಗಿದ್ದು, ಕೊರೊನಾ ವೈರಸ್ನಿಂದ ಇಡೀ ಜಗತ್ತು ರಕ್ಷಣೆ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ ಎಂದಿದ್ದಾರೆ.
ಪಾಕಿಸ್ತಾನದಲ್ಲಿ ಸಾಮಾನ್ಯ ಜನರಿಗೆ ಆಹಾರ, ಅಗತ್ಯ ವಸ್ತು ಸೇರಿದಂತೆ ಮಾಸ್ಕ್ಗಳ ವಿಸ್ತರಣೆ ಮಾಡುತ್ತಿದ್ದ ಆಫ್ರಿದಿ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು.