ETV Bharat / sports

ನನ್ನ ವೃತ್ತಿ ಜೀವನದ ಆರಂಭದಿಂದಲೂ ಅಫ್ರಿದಿ ನನ್ನ ವಿರುದ್ಧವಿದ್ದರು: ​ಕನೇರಿಯಾ - Pakistan team was unfair to Danish Kaneria

ತಾವು ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗದ್ದಕ್ಕೆ ಕಾರಣ ಮಾಜಿ ನಾಯಕ ಶಾಹೀದ್​ ಅಫ್ರಿದಿಯವರ ರಾಜಕೀಯ ಎಂದು ಆರೋಪ ಮಾಡುವ ಮೂಲಕ ಕನೇರಿಯಾ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

author img

By

Published : May 16, 2020, 4:01 PM IST

ಲಾಹೋರ್​: ಶಾಹೀದ್​ ಅಫ್ರಿದಿ ತಮ್ಮ ವೃತ್ತಿ ಜೀವನದುದ್ದಕ್ಕೂ ನನ್ನ ವಿರುದ್ಧ ನಿಂತಿದ್ದರು ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್​ ​ಕನೇರಿಯಾ ಆರೋಪಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಇಡೀ ಪಾಕಿಸ್ತಾನ ತಂಡ ಕನೇರಿಯಾ, ತಾನು ಒಬ್ಬ ಹಿಂದೂ ಎಂಬ ಕಾರಣಕ್ಕೆ ಅವರನ್ನು ಡ್ರೆಸ್ಸಿಂಗ್​ ರೂಮ್​ನಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು ಎಂದು ಹೇಳಿಕೆ ನೀಡಿ ಕ್ರಿಕೆಟ್​ ಜಗತ್ತಿನಲ್ಲೇ ದೊಡ್ಡ ವಿವಾದ ಸೃಷ್ಟಿಸಿದ್ದರು.

ಇದೀಗ ಸ್ವತಃ ಕನೇರಿಯಾ, ತಾವು ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗದ್ದಕ್ಕೆ ಕಾರಣ ಮಾಜಿ ನಾಯಕ ಶಾಹೀದ್​ ಅಫ್ರಿದಿಯವರ ರಾಜಕೀಯ ಎಂದು ಆರೋಪ ಮಾಡುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

“ಶಾಹೀದ್​ ಅಫ್ರಿದಿ ನನ್ನ ವೃತ್ತಿ ಜೀವನ ಆರಂಭವಾದ ದಿನದಿಂದಲೂ ನನ್ನ ವಿರೋಧಿಯಾಗಿದ್ದರು. ಅವರು ನನ್ನನ್ನು ಏಕದಿನ ತಂಡದಿಂದ ದೂರವಿಟ್ಟರು. ನಾವಿಬ್ಬರೂ ಒಂದೇ ವಿಭಾಗದಲ್ಲಿದ್ದರಿಂದ ಅವರು ನನ್ನನ್ನು ಹೊರಗಿಡುತ್ತಿದ್ದರು. ಹೆಚ್ಚು ಪಂದ್ಯಗಳಿಗೆ ಅವಕಾಶ ನೀಡದೇ ಬೆಂಚ್​ ಕಾಯುವಂತೆ ಮಾಡುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ​ ಅವಕಾಶ ದೊರೆಯದಂತೆ ಮಾಡಿದರು. ನಾನು ನನ್ನ 10 ವರ್ಷಗಳ ವೃತ್ತಿ ಜೀವನದಲ್ಲಿ ಕೇವಲ 16 ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದೇನೆ. ಒಂದು ವರ್ಷಕ್ಕೆ ಕೇವಲ 2ರಿಂದ 3 ಏಕದಿನ ಪಂದ್ಯಗಳನ್ನು ಮಾತ್ರ ಆಡಲು ಅವಕಾಶ ಪಡೆಯುತ್ತಿದ್ದೆ” ಎಂದು ಕನೇರಿಯಾ ಹೇಳಿಕೊಂಡಿದ್ದಾರೆ.

ಕನೇರಿಯಾ 2009ರಲ್ಲಿ ಸ್ಪಾಟ್​ ಫಿಕ್ಸಿಂಗ್​ನಲ್ಲಿ ಸಿಲುಕಿದ್ದರು. ತಮ್ಮ ಮಾಜಿ ಸಹ ಆಟಗಾರ ಮರ್ವಿನ್​ ವಿರುದ್ಧ ಓವರ್​ಗೆ 12 ರನ್​ ಬಿಟ್ಟುಕೊಡುವುದಾಗಿ ಫಿಕ್ಸಿಂಗ್​ ಮಾಡಿಕೊಂಡು ಸಿಕ್ಕಿಬಿದ್ದಿದ್ದರು.

ಈ ಕುರಿತ ಮಾತನಾಡಿರುವ ಅವರು, “ನಾನು ಮಾಡಿದ ತಪ್ಪಿನ ಬಗ್ಗೆ ವಿಷಾಧಿಸುತ್ತಿದ್ದೇನೆ. ಅದಕ್ಕಾಗಿ ದಂಡವನ್ನೂ ತೆತ್ತಿದ್ದೇನೆ. ಮಾನವೀಯತೆ ದೃಷ್ಟಿಯಿಂದ ನನ್ನ ಮೇಲಿರುವ ನಿಷೇಧವನ್ನು ತೆಗೆದು ಹಾಕಿದರೆ ನನ್ನಲ್ಲಿರುವ ಲೆಗ್​ಸ್ಪಿನ್​ ಕಲೆಯನ್ನು ಮುಂದುವರಿಸಿಕೊಂಡು ದೇಶದ ಜನರು ಸದಾ ನೆನೆಯುವ ಸಾಧನೆಯನ್ನು ಮಾಡಬೇಕೆಂದುಕೊಂಡಿದ್ದೇನೆ“ ಎಂದು ಪಾಕಿಸ್ತಾನ ಪರ ಅತಿ ಹೆಚ್ಚು ಟೆಸ್ಟ್​ ವಿಕೆಟ್ ಪಡೆದಿರುವ ಕನೇರಿಯಾ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.