ಇಸ್ಲಾಮಾಬಾದ್: ಶ್ರೀಲಂಕಾ ಆಟಗಾರರು ಪಾಕ್ ಪ್ರವಾಸವನ್ನ ಕೈಗೊಳ್ಳುವುದಿಲ್ಲ ಎಂದು ಹೇಳುತ್ತಿರುವ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕ್ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಹೇಳಿದ್ದಾರೆ.
-
Shahid Afridi Srilankan Players who are not Going to Pakistan reason is IPL & IPL Franchise : @SAfridiOfficial pic.twitter.com/vc7ob32g3E
— Just a Fan (@iemRahul_) September 20, 2019 " class="align-text-top noRightClick twitterSection" data="
">Shahid Afridi Srilankan Players who are not Going to Pakistan reason is IPL & IPL Franchise : @SAfridiOfficial pic.twitter.com/vc7ob32g3E
— Just a Fan (@iemRahul_) September 20, 2019Shahid Afridi Srilankan Players who are not Going to Pakistan reason is IPL & IPL Franchise : @SAfridiOfficial pic.twitter.com/vc7ob32g3E
— Just a Fan (@iemRahul_) September 20, 2019
ಸಂದರ್ಶನವೊಂದರಲ್ಲಿ ಮಾತನಾಡಿರುವ ಅಫ್ರಿದಿ, ನಾನು ಶ್ರೀಲಂಕಾ ಅಟಗಾರರೊಂದಿಗೆ ಮಾತನಾಡಿದ್ದೇನೆ. ಪಾಕಿಸ್ತಾನಕ್ಕೆ ಬಂದು ಪಿಎಸ್ಎಲ್ನಲ್ಲಿ ಭಾಗವಹಿಸುವಂತೆ ಕೇಳಿದ್ದೆ. ಆದರೆ, ಅವರು ಹೇಳುವ ಪ್ರಕಾರ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳು ಪಾಕಿಸ್ತಾನಕ್ಕೆ ಹೋದರೆ ನಿಮ್ಮ ಕಾಂಟ್ರಾಕ್ಟ್ಗಳನ್ನ ಸ್ಥಗಿತಗೊಳಿಸುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಹೀಗಾಗಿ ಪಾಕ್ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಅಂತ ಅಫ್ರಿದಿ ಆರೋಪಿಸಿದ್ದಾರೆ.
-
Shahid Afridi "Sri Lankan players are under pressure from IPL franchises. I spoke to SL players last time when there was talk of them coming to Pakistan & playing in PSL. They said they wanted to come, but IPL guys say if you go to Pakistan we won't give you a contract" #PAKvSL
— Saj Sadiq (@Saj_PakPassion) September 19, 2019 " class="align-text-top noRightClick twitterSection" data="
">Shahid Afridi "Sri Lankan players are under pressure from IPL franchises. I spoke to SL players last time when there was talk of them coming to Pakistan & playing in PSL. They said they wanted to come, but IPL guys say if you go to Pakistan we won't give you a contract" #PAKvSL
— Saj Sadiq (@Saj_PakPassion) September 19, 2019Shahid Afridi "Sri Lankan players are under pressure from IPL franchises. I spoke to SL players last time when there was talk of them coming to Pakistan & playing in PSL. They said they wanted to come, but IPL guys say if you go to Pakistan we won't give you a contract" #PAKvSL
— Saj Sadiq (@Saj_PakPassion) September 19, 2019
ಲಂಕಾ ಕ್ರಿಕೆಟ್ ಬೋರ್ಡ್ ತಮ್ಮ ಆಟಗಾರರ ಮೇಲೆ ಒತ್ತಡ ಹೇರಿ ಅವರನ್ನ ಪಾಕಿಸ್ತಾನಕ್ಕೆ ಕಳುಹಿಸಬೇಕು. ಇಲ್ಲಿಗೆ ಬಂದು ಕ್ರಿಕೆಟ್ ಆಡುವ ಆಟಗಾರರು ಪಾಕಿಸ್ತಾನದ ಇತಿಹಾಸದಲ್ಲಿ ಉಳಿಯಲಿದ್ದಾರೆ ಎಂದಿದ್ದಾರೆ.
ಪಾಕಿಸ್ತಾನ ಪ್ರವಾಸದ ವೇಳೆ ಲಂಕಾ ಆಟಗಾರರ ಮೇಲೆ ಉಗ್ರದಾಳಿ ನಡೆಯಲಿದೆ ಎನ್ನುವ ಗುಪ್ತಚರ ಇಲಾಖೆಯ ಮಾಹಿತಿಯನ್ನು ಲಂಕಾ ಪ್ರಧಾನಿ ಕಚೇರಿ ಪಡೆದುಕೊಂಡಿದೆ. ಹೀಗಾಗಿ ಲಂಕಾ ತಂಡದ ಕೆಲ ಆಟಗಾರರು ಪಾಕ್ ಪ್ರವಾಸದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ.