ETV Bharat / sports

ಐಪಿಎಲ್​ ಹರಾಜು: ಗಮನ ಸೆಳೆದ ಶಾರೂಖ್ ಮಗ ಆರ್ಯನ್​, ಜೂಹಿ ಚಾವ್ಲಾ ಮಗಳು ಜಾನ್ವಿ! - ಐಪಿಎಲ್​ 2021 ಹರಾಜು

ಇಂಡಿಯನ್​ ಪ್ರೀಮಿಯರ್ ಲೀಗ್​ನ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಪ್ರಾಂಚೈಸಿಯಲ್ಲಿ ಕೆಲ ಸ್ಟಾರ್​ ಮಕ್ಕಳು ಭಾಗಿಯಾಗಿ ಗಮನ ಸೆಳೆದಿದ್ದಾರೆ.

Shah Rukh Khan's Son Aryan
Shah Rukh Khan's Son Aryan
author img

By

Published : Feb 18, 2021, 4:54 PM IST

ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್ ಟೂರ್ನಿಗಾಗಿ ಚೆನ್ನೈನಲ್ಲಿಂದು ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲ ಪ್ರಾಂಚೈಸಿಗಳು ಇದರಲ್ಲಿ ಭಾಗಿಯಾಗಿ ತಮಗೆ ಇಷ್ಟವಾಗುವ ಪ್ಲೇಯರ್​ ಖರೀದಿ ಮಾಡ್ತಿವೆ. ಇದರ ಮಧ್ಯೆ ಕೆಲ ಪ್ರಾಂಚೈಸಿ ಮಕ್ಕಳು ಗಮನ ಸೆಳೆಯುತ್ತಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ಮಾಲೀಕ ಶಾರೂಖ್​ ಖಾನ್ ಮಗ ಆರ್ಯನ್ ಹಾಗೂ ಬಾಲಿವುಡ್​ ನಟಿ ಜೂಹಿ ಚಾವ್ಲಾ ಮಗಳು ಜಾನ್ವಿ ಮೆಹ್ತಾ ಗಮನ ಸೆಳೆದಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಂಡಾಗಿನಿಂದಲೂ ತಂದೆ ಜತೆ ಪಂದ್ಯ ವೀಕ್ಷಣೆ ಮಾಡಲು ಹೋಗ್ತಿದ್ದ ಆರ್ಯನ್ ಇದೇ ಮೊದಲ ಸಲ ಬಿಡ್ಡಿಂಗ್​ನಲ್ಲಿ ಪ್ರಾಂಚೈಸಿ ಪರ ಭಾಗಿಯಾಗಿದ್ದಾರೆ.

ಓದಿ: ಆರ್​ಸಿಬಿ ಕೈಬಿಟ್ಟ ಮೋರಿಸ್​ಗೆ ಜಾಕ್​ಪಾಟ್​.. 16. 25 ಕೋಟಿ ರೂ. ನೀಡಿ ಖರೀದಿ ಮಾಡಿದ ಆರ್​ಆರ್!

ಇದರ ಜತೆಗೆ ಬಾಲಿವುಡ್ ನಟಿ ಜೂಹಿ ಚಾವ್ಲಾ ಮಗಳು ಜಾನ್ವಿ ಮೆಹ್ತಾ ಕೂಡ ಇದರಲ್ಲಿ ಭಾಗಿಯಾಗಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಕೆಕೆಆರ್​ 2.2 ಕೋಟಿ ರೂ. ನೀಡಿ ಸ್ವೀವ್ ಸ್ಮಿತ್​ಗೆ ಖರೀದಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.