ETV Bharat / sports

ಟಿ20 ರ‍್ಯಾಂಕಿಂಗ್.. ನಂಬರ್ 1 ಸ್ಥಾನಕ್ಕೆ ಮರಳಿದ 17 ವರ್ಷದ ಶೆಫಾಲಿ ವರ್ಮಾ

ಭಾರತದ ಜೂಲನ್ ಗೋಸ್ವಾಮಿ 6 ಮತ್ತು ಪೂನಮ್ ಯಾದವ್​ 8ರ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಬ್ಯಾಟಿಂಗ್​ ಶ್ರೇಯಾಂದಲ್ಲಿ ಸ್ಮೃತಿ ಮಂಧಾನ7, ಮಿಥಾಲಿ ರಾಜ್​ 8ನೇ ಶ್ರೇಯಾಂಕ ಪಡೆದಿದ್ದಾರೆ..

ಶಪಾಲಿ ವರ್ಮಾ
ಶಪಾಲಿ ವರ್ಮಾ
author img

By

Published : Mar 23, 2021, 3:59 PM IST

ಪುಣೆ : ಭಾರತ ತಂಡದ ಯುವ ಸ್ಫೋಟಕ ಬ್ಯಾಟ್ಸ್‌ವುಮೆನ್‌ ಶೆಫಾಲಿ ವರ್ಮಾ ಮಂಗಳವಾರ ಐಸಿಸಿ ಬಿಡುಗಡೆ ಮಾಡಿರುವ ಟಿ20 ಮಹಿಳೆಯರ ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಮರಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಕ್ರಮವಾಗಿ 23 ಮತ್ತು 47 ರನ್​ಗಳಿಸಿದ ಶೆಫಾಲಿ ವರ್ಮಾ ಮತ್ತೆ ನಂಬರ್​ 1 ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ವೇಳೆ ಭಾರತ ನಾಕೌಟ್ ಪ್ರವೇಶಿಸಲು ನೆರವಾಗಿದ್ದ 17 ವರ್ಷದ ಯುವ ಪ್ರತಿಭೆ ಮೊದಲ ಬಾರಿಗೆ ಅಗ್ರ ಶ್ರೇಯಾಂಕ ಪಡೆದಿದ್ದರು.

ಇದನ್ನು ಓದಿ: ಭಾರತ - ಸೌತ್​ ಆಫ್ರಿಕಾ 3ನೇ ಟಿ-20: ಕೊನೆಯ ಪಂದ್ಯದಲ್ಲಾದರೂ ಪುಟದೇಳ್ತಾರಾ ಇಂಡಿಯನ್ಸ್ ವುಮೆನ್ಸ್​​

ದಕ್ಷಿಣ ಆಫ್ರಿಕಾದ ಲಿಜೆಲೆ ಲೀ ಟಿ20 ಶ್ರೇಯಾಂಕದಲ್ಲಿ ಒಂದು ಸ್ಥಾನ ಮೇಲೇರಿ 11ನೇ ಸ್ಥಾನ ಪಡೆದಿದ್ದಾರೆ. ಲೌರಾ ವೋಲ್ವಾರ್ಡ್ಟ್​ 5 ಸ್ಥಾನ ಏರಿಕೆ ಕಂಡು 24ರಲ್ಲಿ, ನಾಯಕಿ ಸುನೆ ಲೂಸ್​ 5 ಸ್ಥಾನ ಮೇಲೇರಿ 38ರಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತದ ದೀಪ್ತಿ ಶರ್ಮಾ 40ಮ ರಿಚಾ ಘೋಷ್​ 59 ಸ್ಥಾನ ಮೇಲೇರಿ 85ನೇ ಸ್ಥಾನ ಪಡೆದಿದ್ದಾರೆ. ಏಕದಿನ ಶ್ರೇಯಾಂಕದದಲ್ಲಿ ದಕ್ಷಿಣ ಆಫ್ರಿಕಾದ ಮರಿಝಾನೆ ಕಾಪ್​ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಭಾರತದ ಜೂಲನ್ ಗೋಸ್ವಾಮಿ 6 ಮತ್ತು ಪೂನಮ್ ಯಾದವ್​ 8ರ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಬ್ಯಾಟಿಂಗ್​ ಶ್ರೇಯಾಂದಲ್ಲಿ ಸ್ಮೃತಿ ಮಂಧಾನ7, ಮಿಥಾಲಿ ರಾಜ್​ 8ನೇ ಶ್ರೇಯಾಂಕ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.