ETV Bharat / sports

ವಿರಾಟ್​ ರೀತಿ ಇಶಾನ್​ ಕಿಶನ್​, ರಿಷಭ್​ ಪಂತ್​ ಗೇಮ್​ ಫಿನಿಶರ್​ ಆಗಲಿ: ಸೆಹ್ವಾಗ್​ - ಇಶಾನ್​ ಬಗ್ಗೆ ಸೆಹ್ವಾಗ್ ಮಾತು

ಇಂಗ್ಲೆಂಡ್​ ವಿರುದ್ಧದ ಟಿ-20 ಕ್ರಿಕೆಟ್​ನಲ್ಲಿ ಇಶಾನ್​ ಕಿಶನ್​ ಹಾಗೂ ರಿಷಭ್​ ಪಂತ್​ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಇಬ್ಬರೂ ಪ್ಲೇಯರ್ಸ್​​ ಗೇಮ್​ ಫಿನಿಶರ್​ ಆಗಿ ಹೊರಹೊಮ್ಮಲಿ ಎಂದು ವಿರೇಂದ್ರ ಸೆಹ್ವಾಗ್​ ಹೇಳಿದ್ದಾರೆ.

Ishan Kishan-Rishabh Pant
Ishan Kishan-Rishabh Pant
author img

By

Published : Mar 16, 2021, 4:56 PM IST

ಹೈದರಾಬಾದ್​: ಟೀಂ ಇಂಡಿಯಾ ಪರ ರಿಷಭ್​ ಪಂತ್​ ಹಾಗೂ ಇಶಾನ್ ಕಿಶನ್​ ಗೇಮ್​ ಫಿನಿಶರ್​ ಆಗಲಿ ಎಂದು ಟೀಂ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್​ ವಿರೇಂದ್ರ ಸೆಹ್ವಾಗ್​ ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಟಿ-20 ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಯುವ ಬ್ಯಾಟ್ಸ್‌ಮನ್​ ಇಶಾನ್ ಕಿಶನ್​​ 32 ಎಸೆತಗಳಲ್ಲಿ 56 ರನ್​ಗಳಿಕೆ ಮಾಡಿದ್ದರು. ಈ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಕುರಿತು ಸ್ಫೋಟಕ ಬ್ಯಾಟ್ಸ್‌ಮನ್​ ಸೆಹ್ವಾಗ್‌ ಮಾತನಾಡಿದ್ದು, ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ರೀತಿಯಲ್ಲಿ ರಿಷಭ್​ ಪಂತ್​ ಹಾಗೂ ಇಶಾನ್ ಕಿಶನ್​ ಗೇಮ್​ ಫಿನಿಶರ್​ ಆಗಿ ಹೊರಹೊಮ್ಮಬೇಕಾಗಿದೆ ಎಂದಿದ್ದಾರೆ.

Sehwag
ವಿರೇಂದ್ರ ಸೆಹ್ವಾಗ್​

ಇದನ್ನೂ ಓದಿ: ಇಂಡೋ-ಆಂಗ್ಲೋ 3ನೇ ಟಿ-20.. ಎರಡೂ ತಂಡಕ್ಕೆ ಗೆಲುವೇ ಮಂತ್ರ.. ಕೆ ಎಲ್‌ ರಾಹುಲ್‌ಗೆ ಬೆಂಚ್‌!?

ಕೊಹ್ಲಿ ಈ ಹಿಂದೆ ಟೀಂ ಇಂಡಿಯಾ ಪರ ಅನೇಕ ಇನ್ನಿಂಗ್ಸ್​ಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಎರಡನೇ ಟಿ-20 ಪಂದ್ಯದಲ್ಲೂ ಅಜೇಯ 73ರನ್​ಗಳಿಕೆ ಮಾಡಿ ಗಮನ ಸೆಳೆದಿದ್ದರು. ಅದೇ ರೀತಿ ಇಬ್ಬರೂ ಯಂಗ್​ ಪ್ಲೇಯರ್ಸ್‌​ ಮುಂದಿನ ಪಂದ್ಯಗಳಲ್ಲಿ ಪ್ರದರ್ಶನ ನೀಡಬೇಕು ಎಂದು ಸಲಹೆ ಕೊಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.