ಲಂಡನ್ : ಭಾರತದ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ, 5 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡುವುದಕ್ಕಾಗಿ ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ಸ್ಟೋಕ್ಸ್ ಭಾರತಕ್ಕೆ ಆಗಮಿಸಲು ವಿಮಾನ ಏರಿದ್ದಾರೆ. ಭಾನುವಾರ ಟ್ವಿಟರ್ನಲ್ಲಿ ತಾವು ವಿಮಾನದಲ್ಲಿರುವ ಫೋಟೋವನ್ನು ಶೇರ್ ಮಾಡಿಕೊಂಡಿರುವ ಸ್ಟೋಕ್ಸ್, ಆದಷ್ಟು ಬೇಗ ಭಾರತದಲ್ಲಿ ಸಿಗೋಣ ಎಂದು ಬರೆದುಕೊಂಡಿದ್ದಾರೆ.
ಬೆನ್ಸ್ಟೋಕ್ಸ್, ಜೋಫ್ರಾ ಆರ್ಚರ್ ಮತ್ತು ರೋನಿ ಬರ್ನ್ಸ್ ಇಂಗ್ಲೆಂಡ್ ತಂಡಕ್ಕಿಂತ ಬೇಗ ಭಾರತಕ್ಕೆ ಆಗಮಿಸುತ್ತಿದ್ದಾರೆ. ಯಾಕೆಂದರೆ, ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡ ಪ್ರಸ್ತುತ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನಾಡುತ್ತಿದೆ. ಆ ಸರಣಿ ಜನವರಿ 26ಕ್ಕೆ ಮುಗಿಯಲಿದ್ದು, 27ಕ್ಕೆ ಚೆನ್ನೈಗೆ ಬಂದು ಸೇರಲಿದೆ. ಈ ಮೂವರು ದಕ್ಷಿಣ ಆಫ್ರಿಕಾ ಸರಣಿ ಮುಗಿದ ಮೇಲೆ ವಿಶ್ರಾಂತಿ ತೆಗೆದುಕೊಂಡಿದ್ದರು.
-
See you soon India ✈️🇮🇳 pic.twitter.com/TrGHG3iuy3
— Ben Stokes (@benstokes38) January 23, 2021 " class="align-text-top noRightClick twitterSection" data="
">See you soon India ✈️🇮🇳 pic.twitter.com/TrGHG3iuy3
— Ben Stokes (@benstokes38) January 23, 2021See you soon India ✈️🇮🇳 pic.twitter.com/TrGHG3iuy3
— Ben Stokes (@benstokes38) January 23, 2021
ಇನ್ನು,ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲುವ ಆಲೋಚನೆಯಲ್ಲಿದೆ. ಕಳೆದ ಬಾರಿ ಇಂಗ್ಲೆಂಡ್ ತಂಡ ಭಾರತಕ್ಕೆ ಬಂದಿದ್ದ ವೇಳೆ ಕೊಹ್ಲಿ ಬಳಗ 4-0ಯಲ್ಲಿ ಸರಣಿ ಗೆದ್ದಿತ್ತು.
ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಮುಂಬರುವ ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳಲ್ಲಿ ಸರಣಿಯನ್ನು 2-0ಯಲ್ಲಿ ಗೆದ್ದರೆ ಫೈನಲ್ ಸ್ಥಾನ ಖಚಿತವಾಗಲಿದೆ. ಒಂದು ವೇಳೆ ಇಂಗ್ಲೆಂಡ್ ವಿರುದ್ಧ ಒಂದು ಟೆಸ್ಟ್ ಪಂದ್ಯ ಸೋತರೆ ಉಳಿದ 3 ಪಂದ್ಯ ಗೆಲ್ಲಲೇಬೇಕಾಗುತ್ತದೆ.