ETV Bharat / sports

ಆಸ್ಟ್ರೇಲಿಯಾದಲ್ಲಿ ನಿಮ್ಮನ್ನ ಕಾಣುತ್ತೇನೆ: ಭಾರತ ತಂಡಕ್ಕೆ ಆಯ್ಕೆಯಾದ ನಟರಾಜನ್​ಗೆ ವಾರ್ನರ್​ ಅಭಿನಂದನೆ - Warner congratulates T Natarajan

ಕೆಕೆಆರ್ ತಂಡದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ವರುಣ್ ಚಕ್ರವರ್ತಿ ಭುಜದ ನೋವಿಗೆ ತುತ್ತಾಗಿ ಭಾರತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಬಿಸಿಸಿಐ ಬದಲಿ ಆಟಗಾರನನ್ನಾಗಿ ನಟರಾಜನ್​ರನ್ನು 3 ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ.

Warner congratulates T Natarajan
ನಟರಾಜನ್​ಗೆ ವಾರ್ನರ್​ ಅಭಿನಂದನೆ
author img

By

Published : Nov 9, 2020, 10:49 PM IST

ದುಬೈ: ಸನ್​ರೈಸರ್ಸ್​ ಹೈದರಾಬಾದ್​ ತಂಡದ ಬೌಲರ್​ ಎನ್​ ನಟರಾಜನ್​ ಭಾರತ ತಂಡಕ್ಕೆ ಸೇರ್ಪಡೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ನಾಯಕ ಡೇವಿಡ್ ವಾರ್ನರ್​ , ಆಸ್ಟ್ರೇಲಿಯಾ ಆದಷ್ಟು ಬೇಗ ಸಿಗೋಣ ಎಂದು ಎಂದು ತಿಳಿಸಿದ್ದಾರೆ.

ಕೆಕೆಆರ್ ತಂಡದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ವರುಣ್ ಚಕ್ರವರ್ತಿ ಭುಜದ ನೋವಿಗೆ ತುತ್ತಾಗಿ ಭಾರತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಬಿಸಿಸಿಐ ಬದಲಿ ಆಟಗಾರನನ್ನಾಗಿ ನಟರಾಜನ್​ರನ್ನು 3 ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ.

ನಮ್ಮ ಪಾಲಿಗೆ ಇದೊಂದ ಮಿಶ್ರ ಟೂರ್ನಿಯಾಗಿದೆ.ನಾವು ಉತ್ತಮವಾಗಿ ಆರಂಭ ಮಾಡಲಿಲ್ಲ. ಆದರೆ ಅಂತ್ಯದಲ್ಲಿ ನೀಡಿದ ಪ್ರದರ್ಶನಕ್ಕೆ ಹೆಮ್ಮೆ ಪಡುತ್ತೇನೆ. ಕೊನೆಯ ಲೀಗ್​ ಪಂದ್ಯಗಳಲ್ಲಿ ತಂಡದ ಆಟಗಾರರು ನೀಡಿದ ಪ್ರದರ್ಶನಕ್ಕೆ ನಾನು ತುಂಬಾ ಗರ್ವಪಡುತ್ತೇನೆ. ಮುಂದಿನ ಮತ್ತೊಂದು ಸ್ಟೆಪ್​ ಮುಂದಕ್ಕಿಟ್ಟು ಫೈನಲ್​ ಪ್ರವೇಶಿಸುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ತಮ್ಮ ಇನ್ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿರುವ ಹಿನ್ನೆಲೆ ನಟರಾಜನ್​ಗೆ ಅಭಿನಂದನೆ ಸಲ್ಲಿಸಿದ್ದಾರೆ." ಅಭಿನಂದನೆಗಳು ನಟ್ಟು, ನಿಮ್ಮನ್ನು ಆಸ್ಟ್ರೇಲಿಯಾದಲ್ಲಿ ಕಾಣುತ್ತೇನೆ" ಎಂದು ಹೇಳಿದ್ದಾರೆ.

ಈ ಸರಣಿಯಲ್ಲಿ ನಟರಾಜನ್​ ಜೊತೆಗೆ ಹೈದರಾಬಾದ್ ತಂಡ ಮನೀಶ್ ಪಾಂಡೆ ಕೂಡ ಅವಕಾಶ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.