ETV Bharat / sports

ಭಾರತ 'ಎ' ಪರವಾಗಿ ಆಡಿದ್ದು ಸಹಕಾರಿ ಆಯಿತು: ಶ್ರೇಯಸ್​​ ಅಯ್ಯರ್ - ನ್ಯೂಜಿಲ್ಯಾಂಡ್​ನೊಂದಿಗೆ ಮೊದಲ ವನ್ಡೆನಲ್ಲಿ ಟೀಂ ಇಂಡಿಯಾ ಪರಾಜಯ

ನ್ಯೂಜಿಲ್ಯಾಂಡ್​​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತನ್ನ ಸೆಂಚುರಿಯೊಂದಿಗೆ ಎಲ್ಲರನ್ನೂ ಆಕರ್ಷಿಸಿದ ಯುವ ಆಟಗಾರ ಶ್ರೇಯಸ್​​ ಅಯ್ಯರ್​​ ತಮ್ಮ ಚೊಚ್ಚಲ ಶತಕದ ಕುರಿತು ಮಾತನಾಡಿದ್ದಾರೆ.

ಶ್ರೇಯಸ್​​ ಅಯ್ಯರ್
ಶ್ರೇಯಸ್​​ ಅಯ್ಯರ್
author img

By

Published : Feb 6, 2020, 1:28 PM IST

Updated : Feb 6, 2020, 1:35 PM IST

ಹ್ಯಾಮಿಲ್ಟನ್​​: ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಏಕದಿನದಲ್ಲಿ ಟೀಂ ಇಂಡಿಯಾ ಪರಾಜಯ ಕಂಡಿತ್ತು. ಆದರೆ, ಈ ಮ್ಯಾಚ್​​ನಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಕೊಹ್ಲಿ ಸೇನೆ, 4 ವಿಕೆಟ್​ಗಳ ನಷ್ಟಕ್ಕೆ 347 ರನ್​​​ ಗಳ ಟಾರ್ಗೆಟ್​ ನೀಡಿಯೂ ಸೋಲು ಕಂಡಿತು. ಈ ನಡುವೆಯೂ ಯುವ ಆಟಗಾರ ಶ್ರೇಯಸ್​ ಅಯ್ಯರ್​​ ಮೊದಲ ಶತಕ ಬಾರಿಸಿ ಗಮನ ಸೆಳೆದರು.

ಈ ಮ್ಯಾಚ್​ನಲ್ಲಿ ಭಾರತ ಪರವಾಗಿ 4ನೇ ಸ್ಥಾನದಲ್ಲಿ ಬ್ಯಾಟಿಂಗ್​ ಮಾಡಿದ ಯುವ ಬ್ಯಾಟ್ಸ್​ಮನ್​​​​​ ಶ್ರೇಯಸ್​​ ಅಯ್ಯರ್​​, ಸೆಂಚುರಿ ಮಾಡಿ ಬೀಗಿದರು. ಬಳಿಕ ಮಾತನಾಡಿದ ಅವರು, ಭಾರತ​​-ಎ ತಂಡದ ಪರವಾಗಿ ನಾಲ್ಕನೇ ಸ್ಥಾನದಲ್ಲಿ ಆಡುವುದು ಅಷ್ಟು ಸುಲಭವಲ್ಲ. ಪರಿಸ್ಥಿತಿ ನೋಡಿ ಆಡಬೇಕಾಗುತ್ತದೆ. ನಾನು ಯಾವಾಗಲೂ 3 ಅಥವಾ 5 ಸ್ಥಾನಗಳ ಮಧ್ಯೆ ಬ್ಯಾಟಿಂಗ್​​ ಮಾಡುತ್ತಿದ್ದೆ. ಹಾಗಾಗಿ ಭಿನ್ನ ಪರಿಸ್ಥಿತಿಗಳಲ್ಲಿ ಆಟವಾಡುವುದು ಅಭ್ಯಾಸವಾಗಿದೆ ಎಂದರು.

Scoring century for my nation was special: Shreyas Iyer
ಈ ಮ್ಯಾಚ್​​ನಲ್ಲಿ ಶ್ರೇಯಸ್​​ 107 ಬಾಲ್ಸ್​ ಎದುರಿಸಿ 103ರನ್​​ ಗಳಿಸಿದರು

ಈ ಪಂದ್ಯದಲ್ಲಿ ಶ್ರೇಯಸ್​​ 107 ಚಂಡುಗಳನ್ನ ಎದುರಿಸಿ 103ರನ್​​ ಗಳಿಸಿದರು. ಈ ಸೆಂಚುರಿಯ ಕುರಿತು ಮಾತನಾಡಿರುವ ಅಯ್ಯರ್​, ಸೆಂಚುರಿ ಬಾರಿಸಿರುವುದು ತುಂಬಾ ಸಂತಸ ತಂದಿದೆ. ಆದರೆ, ಮ್ಯಾಚ್​ ಗೆದ್ದಿದ್ದರೇ ಇನ್ನೂ ಖುಷಿಯಾಗಿರುತಿತ್ತು ಎಂದರು. ಮಾತು ಮುಂದುವರಿಸಿದ ಅವರು, ಸ್ವಲ್ಪ ಸಮಯ ಕಳೆದ ಬಳಿಕ ನನ್ನ ಶೈಲಿಯಲ್ಲಿ ಆಟವನ್ನಾಡಿದೆ. ಪ್ರಾರಂಭದಲ್ಲಿ ಸಾಕಷ್ಟು ಡಾಟ್​ ಬಾಲ್ಸ್​​​ ಮಾಡಿದೆ. ನಂತರ ಕವರ್​ ಮಾಡಲು ಆರಂಭಿಸಿದೆ. ಈ ಬಗ್ಗೆ ಮೊದಲೇ​ ಪ್ಲಾನ್​ ಮಾಡಿಕೊಂಡಿದ್ದೆ. ಅಂದುಕೊಂಡಂತೆ ಬಾಲ್​ ನೇರವಾಗಿ ಬ್ಯಾಟ್​ ಮೇಲೆ ಬರುತಿತ್ತು ಎಂದರು. ಸೆಕೆಂಡ್​​ ಇನ್ನಿಂಗ್ಸ್​​ನಲ್ಲಿ ತೇವಾಂಶ ಹೆಚ್ಚು ಪ್ರಭಾವ ಬೀರಿತ್ತು, ಕಿವಿಸ್​ ಕೂಡ ಒಳ್ಳೆಯ ಪ್ರದರ್ಶನ ನೀಡಿತು ಎಂದರು.

ಎರಡನೇ ಏಕದಿನ ಇದೇ ಶನಿವಾರ ನಡೆಯಲಿದೆ.

Last Updated : Feb 6, 2020, 1:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.