ಲೀಡ್ಸ್: ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಶ್ವಚಾಂಪಿಯನ್ ಇಂಗ್ಲೆಂಡ್ ತಂಡ ಪವಾಡದ ರೀತಿಯಲ್ಲಿ 1ವಿಕೆಟ್ ಅಂತರದ ಗೆಲುವು ದಾಖಲು ಮಾಡಿ ನೂತನ ದಾಖಲೆ ನಿರ್ಮಾಣ ಮಾಡಿದೆ.
ಆಸ್ಟ್ರೇಲಿಯಾ ನೀಡಿದ್ದ 359ರನ್ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಕೊನೆ ವಿಕೆಟ್ ವೇಳೆಗೆ 76ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಏಕಾಂಗಿಯಾಗಿ ಹೋರಾಟ ನಡೆಸಿದ್ದ ಬೆನ್ ಸ್ಟೋಕ್ಸ್ ಅಜೇಯರಾಗಿ 135 ರನ್ಗಳಿಕೆ ಮಾಡುವ ಮೂಲಕ ತಂಡಕ್ಕೆ ಐತಿಹಾಸಿಕ ಗೆಲುವು ದಾಖಲಿಸಿಕೊಟ್ಟಿದ್ದಾರೆ. ಈ ಸಂಭ್ರಮವನ್ನ ಇಂಗ್ಲೆಂಡ್ ಮಹಿಳಾ ತಂಡ ಕೂಡ ಆಚರಿಸಿದೆ.
-
Sarah Taylor and Nat Sciver, in the middle at Guildford during a KSL match, on hearing England men have won the Test. pic.twitter.com/LlNWEy2mIh
— hypocaust (@_hypocaust) August 25, 2019 " class="align-text-top noRightClick twitterSection" data="
">Sarah Taylor and Nat Sciver, in the middle at Guildford during a KSL match, on hearing England men have won the Test. pic.twitter.com/LlNWEy2mIh
— hypocaust (@_hypocaust) August 25, 2019Sarah Taylor and Nat Sciver, in the middle at Guildford during a KSL match, on hearing England men have won the Test. pic.twitter.com/LlNWEy2mIh
— hypocaust (@_hypocaust) August 25, 2019
KIA ಮಹಿಳಾ ಸೂಪರ್ ಲೀಗ್ ಪಂದ್ಯದಲ್ಲಿ ಭಾಗಿಯಾಗಿದ್ದ ಇಂಗ್ಲೆಂಡ್ ಮಹಿಳಾ ತಂಡದ ಆಟಗಾರ್ತಿಯರಾದ ಸಾರಾ ಟೇಲರ್ ಹಾಗೂ ನ್ಯಾಟ್ ಸ್ಕಿವರ್ ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಪುರುಷರ ತಂಡ ಗೆಲುವು ದಾಖಲು ಮಾಡಿರುವ ಮಾಹಿತಿ ಗೊತ್ತಾಗಿದೆ. ಈ ವೇಳೆ ಮೈದಾನದಲ್ಲೇ ಇಬ್ಬರು ಪ್ಲೇಯರ್ ಸಂಭ್ರಮಿಸಿದ್ದಾರೆ. ಸರ್ರೆ ಸ್ಟಾರ್ಸ್ ಮತ್ತು ವೆಸ್ಟರ್ನ್ ಸ್ಟಾರ್ಮ್ ತಂಡಗಳ ನಡುವೆ ಪಂದ್ಯ ನಡೆದಿತ್ತು.
ತಂಡದ ಇಬ್ಬರು ಮಹಿಳಾ ಪ್ಲೇಯರ್ ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.