ಹೈದರಾಬಾದ್: ಭಾನುವಾರವಷ್ಟೆ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿಗೆ ತಂಡವನ್ನ ಪ್ರಕಟಿಸಿದ್ದ ಬಿಸಿಸಿಐ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಹೆಸರನ್ನ ಕೈಬಿಟ್ಟಿತ್ತು. ಈ ಸಮಯದಲ್ಲಿ ಸಂಜು ಸ್ಯಾಮ್ಸನ್ ಮಾಡಿರುವ ಟ್ವೀಟ್ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
-
,
— Sanju Samson (@IamSanjuSamson) January 16, 2020 " class="align-text-top noRightClick twitterSection" data="
">,
— Sanju Samson (@IamSanjuSamson) January 16, 2020,
— Sanju Samson (@IamSanjuSamson) January 16, 2020
ಹಲವು ಸರಣಿಗೆ ಆಯ್ಕೆ ಮಾಡಿದ್ದರೂ ಆಡುವ 11ರ ಬಳಗದಲ್ಲಿ ಅವಕಾಶ ನೀಡದೆ ಸಂಜು ಸ್ಯಾಮ್ಸನ್ಗೆ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿಯಿಂದ ಗೇಟ್ ಪಾಸ್ ನೀಡಲಾಗಿದೆ. ಇಂದು ಟ್ವೀಟ್ ಮಾಡಿರುವ ಸ್ಯಾಮ್ಸನ್ ಅಲ್ಪ ವಿರಾಮದ(,) ಚಿನ್ಹೆಯನ್ನ ಪೋಸ್ಟ್ ಮಾಡಿದ್ದಾರೆ.
ಸ್ಯಾಮ್ಸನ್ ಟ್ವೀಟ್ ಇದೀಗ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಇಲ್ಲಿಗೆ ಎಲ್ಲವೂ ಮುಗಿದಿಲ್ಲ, ಇನ್ನೂ ಅವಕಾಶ ಇದೆ ಎಂಬ ಅರ್ಥವನ್ನ ಸೂಚಿಸಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಸ್ಯಾಮ್ಸನ್ ಟ್ವೀಟ್ಗೆ ಕಮೆಂಟ್ ಮಾಡುತ್ತಿರುವ ಅಭಿಮಾನಿಗಳು ಮುಂದೆ ಇನ್ನೂ ಉತ್ತಮ ಅವಕಾಶ ದೊರೆಯಲಿದೆ. ನಿಮ್ಮ ಪ್ರಯತ್ನ ಬಿಡಬೇಡಿ ಎಂದು ಧೈರ್ಯ ತುಂಬುತ್ತಿದ್ದಾರೆ.
ಕಳೆದ ನಾಲೈದು ತಿಂಗಳಿಂದ ರಿಷಭ್ ಪಂತ್ ಪ್ರದರ್ಶನದ ಬಗ್ಗೆ ಟೀಕೆ ವ್ಯಕ್ತವಾಗುತ್ತಿದ್ದು ವೈಫಲ್ಯ ಅನುಭವಿಸಿದರೂ ಮತ್ತೆ ಮತ್ತೆ ಪಂತ್ಗೆ ಅವಕಾಶ ನೀಡುತ್ತಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಾನ್ವಿತ ಆಟಗಾರರನನ್ನ ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.