ಹ್ಯಾಮಿಲ್ಟನ್: ಮೂರನೇ ಟಿ-20 ಪಂದ್ಯದಲ್ಲಿ ಸೂಪರ್ ಓವರ್ ಮಾಡಿದ್ದ ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಷಯವನ್ನಿಟ್ಟುಕೊಂಡು ಟ್ವೀಟ್ ಮಾಡಿದ್ದ ಸಂಜಯ್ ಮಂಜ್ರೇಕರ್ ವಿರುದ್ಧ ನೆಟಿಜನ್ಸ್ ತಿರುಗಿಬಿದ್ದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿನ ಸೂಪರ್ ಓವರ್ ಮಾಡಿದ್ದ ಜಸ್ಪ್ರೀತ್ ಬುಮ್ರಾ 17ರನ್ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮಂಜ್ರೆಕರ್, ಜಸ್ಪ್ರೀತ್ ಬುಮ್ರಾ ಮಾಡಿದ್ದ ಸೂಪರ್ ಓವರ್ ನಾನು ನೋಡಿದ್ದೇನೆ. ಆತ ಓರ್ವ ಅದ್ಭುತ ಬೌಲರ್. ಆದರೆ ವಿಭಿನ್ನ ರೀತಿಯಲ್ಲಿ ಬೌಲಿಂಗ್ ಮಾಡಲು ಕ್ರೀಸ್ ಅನ್ನು ಸ್ವಲ್ಪ ಹೆಚ್ಚು ಬಳಕೆ ಮಾಡಬಹುದಿತ್ತು ಎಂದು ಹೇಳಿದ್ದಾರೆ.
-
Watched that super over from Bumrah. He is such a fabulous bowler but he could use the crease a little more to create different delivery angles. #INDvsNZ
— Sanjay Manjrekar (@sanjaymanjrekar) January 30, 2020 " class="align-text-top noRightClick twitterSection" data="
">Watched that super over from Bumrah. He is such a fabulous bowler but he could use the crease a little more to create different delivery angles. #INDvsNZ
— Sanjay Manjrekar (@sanjaymanjrekar) January 30, 2020Watched that super over from Bumrah. He is such a fabulous bowler but he could use the crease a little more to create different delivery angles. #INDvsNZ
— Sanjay Manjrekar (@sanjaymanjrekar) January 30, 2020
ಇದೇ ವಿಷಯವನ್ನಿಟ್ಟುಕೊಂಡು ನೆಟಿಜನ್ಸ್ ಅವರನ್ನ ಟ್ರೋಲ್ ಮಾಡಿದ್ದು, ನಿಲ್ಲಿಸಿ, ನೀವೊಬ್ಬ ಸಾಧಾರಣ ಪ್ಲೇಯರ್ ಎಂದಿದ್ದಾರೆ. ಇದರ ಬೆನ್ನಲ್ಲೇ ನೀವೂ ಕೋಚ್ ಹುದ್ದೆಗೆ ಯಾಕೆ ಅರ್ಜಿ ಸಲ್ಲಿಸಬಾರದು ಎಂದು ಕಾಲೆಳೆದಿದ್ದಾರೆ.