ಬೆಂಗಳೂರು: ಭಾರತ ತಂಡದ ಬ್ಯಾಟಿಂಗ್ ಕೋಚ್ ಸ್ಥಾನದಿಂದ ಕೆಳಗಿಳಿದಿರುವ ಸಂಜಯ್ ಬಂಗಾರ ಇದೀಗ ಆರ್ಸಿಬಿ ಬ್ಯಾಟಿಂಗ್ ಕೋಚ್ನತ್ತ ಕಣ್ಣಾಯಿಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಎರಡು ದಿನಗಳ ಹಿಂದೆಯಷ್ಟೆ ಸಂಜಯ್ ಬಂಗಾರ ಭಾರತ ತಂಡದ ಬ್ಯಾಟಿಂಗ್ ಕೋಚ್ ಹುದ್ದೆ ಕಳೆದುಕೊಂಡಿದ್ದರು. ಇವರ ಜಾಗಕ್ಕೆ ವಿಕ್ರಮ್ ರಾಥೋರ್ ಭಾರತ ತಂಡಕ್ಕೆ ಬ್ಯಾಟಿಂಗ್ ಕೋಚ್ ಸ್ಥಾನ ಅಲಂಕರಿಸಿದ್ದರು.
ಇದೇ ಸಮಯದಲ್ಲಿ ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ ತಮ್ಮ ಕೋಚ್ ಬಳಗವನ್ನು ಸಂಪೂರ್ಣವಾಗಿ ಬದಲಾಯಿಸುತ್ತಿರುವುದರಿಂದ ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ಸಂಜಯ್ ಬಂಗಾರ ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
ಬುಧವಾರವಷ್ಟೇ ಆರ್ಸಿಬಿ ಗ್ಯಾರಿ ಕಸ್ಟರ್ನ್ ಬದಲಿಗೆ ಸೈಮನ್ ಕ್ಯಾಟಿಚ್ರನ್ನು ಹಾಗೂ ಮೈಕ್ ಹೆಸ್ಸೆನ್ರನ್ನು ಡೈರೆಕ್ಟರ್ ಆಗಿ ನೇಮಿಸಿಕೊಂಡಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಕೋಚ್ ಸ್ಥಾನವೂ ಖಾಲಿಯಿರುವುದರಿಂದ ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ಬಂಗಾರ ಆರ್ಸಿಬಿ ಜೊತೆ ಸಂಪರ್ಕದಲ್ಲಿದ್ದಾರೆಂದು ತಿಳಿದುಬಂದಿದೆ.