ETV Bharat / sports

ಐಪಿಎಲ್​ಗಾಗಿ ಪಾಕಿಸ್ತಾನದ ವಿರುದ್ಧದ ಸರಣಿಯನ್ನೇ ಬಿಟ್ಟು ಬರ್ತಾರಾ ಈ ಆಟಗಾರರು? - South African cricketers

ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನದೆದುರು ಏಪ್ರಿಲ್ 2 ಮತ್ತು ಏಪ್ರಿಲ್ 16ರ ನಡುವೆ 3 ಏಕದಿನ ಮತ್ತು 4 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ದಕ್ಷಿಣ ಆಫ್ರಿಕಾದಿಂದ ಬರುವ ಆಟಗಾರರು ಇಲ್ಲಿಗೆ ಬಂದ ಮೇಲೆ 7 ದಿನಗಳ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗುವ ಅವಶ್ಯಕತೆಯಿಲ್ಲ. ಯಾಕೆಂದರೆ, ಪಾಕಿಸ್ತಾನದೆದುರಿನ ಸರಣಿ ಬಯೋಬಬಲ್​ನಲ್ಲೇ ನಡೆಯಲಿದೆ..

ಇಂಡಿಯನ್ ಪ್ರೀಮಿಯರ್ ಲೀಗ್
ದಕ್ಷಿಣ ಆಫ್ರಿಕಾ ಕ್ರಿಕೆಟಿಗರು
author img

By

Published : Mar 27, 2021, 4:18 PM IST

ಹೈದರಾಬಾದ್ : ದಕ್ಷಿಣ ಆಫ್ರಿಕಾದ ಐಪಿಎಲ್​ನಲ್ಲಿ ಭಾಗವಹಿಸವ ಆಟಗಾರರು ಪಾಕಿಸ್ತಾನ ವಿರುದ್ಧದ ಸರಣಿಯನ್ನು ಮೊಟಕುಗೊಳಿಸಿ ಭಾರತಕ್ಕೆ ಅವರ ಫ್ರಾಂಚೈಸಿಗಳು ವ್ಯವಸ್ಥೆ ಮಾಡುವ ಚಾರ್ಟರ್ಡ್‌ ವಿಮಾನದಲ್ಲಿ ಬರಲಿದ್ದಾರೆ ಎಂದು ತಿಳಿದು ಬಂದಿದೆ.

ದಕ್ಷಿಣ ಆಫ್ರಿಕಾ ಆಟಗಾರರು ಬಹುಶಃ ಎರಡನೇ ಏಕದಿನ ಪಂದ್ಯದ ನಂತರ ಭಾರತಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ. ಕಗಿಸೊ ರಬಾಡ, ಅನ್ರಿಚ್ ನೋಕಿಯಾ( ಡೆಲ್ಲಿ ಕ್ಯಾಪಿಟಲ್ಸ್​), ಕ್ವಿಂಟನ್ ಡಿ ಕಾಕ್ (ಮುಂಬೈ ಇಂಡಿಯನ್ಸ್), ಡೇವಿಡ್ ಮಿಲ್ಲರ್ (ರಾಜಸ್ಥಾನ್ ರಾಯಲ್ಸ್) ಮತ್ತು ಲುಂಗಿ ಎಂಗಿಡಿ (ಚೆನ್ನೈ ಸೂಪರ್ ಕಿಂಗ್ಸ್) ಏಪ್ರಿಲ್ 9 ರಿಂದ ಪ್ರಾರಂಭವಾಗುವ ನಗದು ಸಮೃದ್ಧ ಲೀಗ್​ಗಾಗಿ ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನದೆದುರು ಏಪ್ರಿಲ್ 2 ಮತ್ತು ಏಪ್ರಿಲ್ 16ರ ನಡುವೆ 3 ಏಕದಿನ ಮತ್ತು 4 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ದಕ್ಷಿಣ ಆಫ್ರಿಕಾದಿಂದ ಬರುವ ಆಟಗಾರರು ಇಲ್ಲಿಗೆ ಬಂದ ಮೇಲೆ 7 ದಿನಗಳ ಕಡ್ಡಾಯ ಕ್ವಾರಂಟೈನ್​ಗೆ ಒಳಗಾಗುವ ಅವಶ್ಯಕತೆಯಿಲ್ಲ. ಯಾಕೆಂದರೆ, ಪಾಕಿಸ್ತಾನದೆದುರಿನ ಸರಣಿ ಬಯೋಬಬಲ್​ನಲ್ಲೇ ನಡೆಯಲಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮತ್ತು ಬಿಸಿಸಿಐ ನಡುವಿನ ಒಪ್ಪಂದದ ಪ್ರಕಾರ ಐಪಿಎಲ್​ನಲ್ಲಿ ಆಡುವ ಆಟಗಾರರನ್ನು ಮುಂಚಿತವಾಗಿ ಕಳುಹಿಸಿ ಕೊಡಬೇಕಿದೆ. ಅದಕ್ಕಾಗಿ ಸಿಎಸ್​ಎ ಡಿಕಾಕ್, ಎನ್ರಿಚ್, ರಬಾಡ ಮತ್ತು ಮಿಲ್ಲರ್​ರನ್ನು ಏಕದಿನ ಸರಣಿಗೆ ಮಾತ್ರ ಆಯ್ಕೆ ಮಾಡಿ, ಟಿ20 ಸರಣಿಯಿಂದ ಬ್ರೇಕ್ ನೀಡಿದೆ.

ಇದನ್ನು ಓದಿ: ಐಪಿಎಲ್ 2021.. ಮುಂಬೈಗೆ ಬಂದಿಳಿದು ಕ್ವಾರಂಟೈನ್​ಗೊಳಗಾದ ಕೆಕೆಆರ್ ಆಟಗಾರರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.