ETV Bharat / sports

ಸಚಿನ್​ ತಮ್ಮ ಆಟವನ್ನ ಆನಂದಿಸುತ್ತಿರಲಿಲ್ಲ, 2007ರಲ್ಲೇ ಕ್ರಿಕೆಟ್​ ಬಿಡಬೇಕೆಂದುಕೊಂಡಿದ್ದರು: ಗ್ಯಾರಿ ಕರ್ಸ್ಟನ್​

author img

By

Published : Jun 17, 2020, 2:15 PM IST

2007ರ ವಿಶ್ವಕಪ್​ ವರೆಗೂ ಸಚಿನ್​ಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಲು ಅವಕಾಶ ನೀಡಲಾಗುತ್ತಿತ್ತು. ಆ ವಿಶ್ವಕಪ್​ನಲ್ಲಿ ಭಾರತ ಲೀಗ್​ನಲ್ಲೇ ಹೊರಬಿದ್ದಿತ್ತು. ಆಗಿನ ಕೋಚ್​ ಹಾಗೂ ಹಿರಿಯ ಆಟಗಾರರ ವಿರುದ್ಧ ದೇಶದಾದ್ಯಂತ ವ್ಯಾಪಕ ಟೀಕೆ ಕೇಳಿ ಬಂದಿತ್ತು.

ಗ್ಯಾರಿ ಕರ್ಸ್ಟನ್​
ಗ್ಯಾರಿ ಕರ್ಸ್ಟನ್​

ನವದೆಹಲಿ: ಭಾರತ ತಂಡದ ಲೆಜೆಂಡ್​ ಸಚಿನ್ ತೆಂಡೂಲ್ಕರ್​ 2007ರ ಸಂದರ್ಭದಲ್ಲಿ ಕ್ರಿಕೆಟ್​ ಎಂಜಾಯ್​ ಮಾಡುತ್ತಿರಲಿಲ್ಲ. ಅವರು ಕ್ರಿಕೆಟ್​ನಿಂದಲೇ ದೂರವಾಗಬೇಕೆಂದು ಬಯಸಿದ್ದರು ಎಂದು ಭಾರತ ತಂಡದ ಯಶಸ್ವಿ ಕೋಚ್​ ಆಗಿದ್ದ ಗ್ಯಾರಿ ಕರ್ಸ್ಟನ್​ ಬಹಿರಂಗಪಡಿಸಿದ್ದಾರೆ.

2007ರ ವಿಶ್ವಕಪ್​ ವರೆಗೂ ಸಚಿನ್​ಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಲು ಅವಕಾಶ ನೀಡಲಾಗುತ್ತಿತ್ತು. ಆ ವಿಶ್ವಕಪ್​ನಲ್ಲಿ ಭಾರತ ಲೀಗ್​ನಲ್ಲೇ ಹೊರಬಿದ್ದಿತ್ತು. ಆಗಿನ ಕೋಚ್​ ಹಾಗೂ ಹಿರಿಯ ಆಟಗಾರರ ವಿರುದ್ಧ ದೇಶದಾದ್ಯಂತ ವ್ಯಾಪಕ ಟೀಕೆ ಕೇಳಿ ಬಂದಿತ್ತು.

ಆದರೆ, 2007ರ ನಂತರ ಸಚಿನ್ ಆಟದಲ್ಲಿ ನಾಟಕೀಯ ತಿರುವು ಪಡೆದುಕೊಂಡಿತು. ಅವರು ಅಲ್ಲಿಂದ 2013ರ ವರೆಗೆ 24 ಅಂತಾರಾಷ್ಟ್ರೀಯ ಶತಕ ಸಿಡಿಸಿ ಮಿಂಚಿದರು.

ಟಾಲ್ಕ್​ ಸ್ಫೋರ್ಟ್ಸ್​ ಜೊತೆ ಮಾತನಾಡಿರುವ ಕರ್ಸ್ಟನ್​ , ನಾನು ಭಾರತಕ್ಕೆ ಬಂದಾಗ ಸಚಿನ್ ತೆಂಡೂಲ್ಕರ್​ ಬಗ್ಗೆ ಆಲೋಚಿಸಿದರೆ, ಅವರು ಕ್ರಿಕೆಟ್​ ತ್ಯಜಿಸಲು ಬಯಸಿದ್ದರು. ಅವರ ಪ್ರಕಾರ, ಆ ಸಂದರ್ಭದಲ್ಲಿ ಅವರಿಗಿಷ್ಟವಿಲ್ಲದ ಬ್ಯಾಟಿಂಗ್​ ಕ್ರಮಾಂಕದಲ್ಲಿ ಆಡುತ್ತಿದ್ದರು. ಆ ಸಂದರ್ಭದಲ್ಲಿ ಕ್ರಿಕೆಟ್ ​ಅನ್ನು ಎಂಜಾಯ್ ಮಾಡುತ್ತಿರಲಿಲ್ಲ. ಆದರೆ, ನಂತರದ ಮೂರು ವರ್ಷಗಳಲ್ಲಿ ಅವರು 18 ಶತಕಗಳಿಸಿದ್ದರು. ಅದಕ್ಕೆ ಕಾರಣ ಅವರು ನನ್ನ ಕೋಚಿಂಗ್ ಅವಧಿಯಲ್ಲಿ ಅವರಿಗೆ ಬೇಕಾದ ಬ್ಯಾಟಿಂಗ್ ಕ್ರಮಾಂಕಕ್ಕೆ ಹಿಂತಿರುಗಿದ್ದರು. ಅಲ್ಲದೇ ನಾವು ವಿಶ್ವಕಪ್​ ಕೂಡ ಜಯಿಸಿದೆವು ಎಂದು ಕರ್ಸ್ಟನ್​ ಹೇಳಿದ್ದಾರೆ.

ನಾನು ಸಚಿನ್​ ತೆಂಡೂಲ್ಕರ್​ಗೆ ಕೋಚ್​ ಆಗಿ ಏನನ್ನೂ ಮಾಡಲಿಲ್ಲ. ಆದರೆ ಅವರಿಗೆ ಅಗತ್ಯವಾಗಿದ್ದ ವಾತಾವರಣವನ್ನು ಮಾತ್ರ ನಿರ್ಮಿಸಿಕೊಟ್ಟಿದ್ದೆ. ಅವರಿಗೆ ಆಟ ತಿಳಿದಿತ್ತು. ಆದರೆ ಅವರಿಗೆ ಬೇಕಾಗಿದ್ದದ್ದು ಒಂದು ಪರಿಸರ. ಅವರಷ್ಟೇ ಅಲ್ಲ ತಂಡದವರೆಲ್ಲರಿಗೂ ಅದು ಅಗತ್ಯವಾಗಿತ್ತು ಎಂದು ಕರ್ಸ್ಟನ್​ ಹೇಳಿಕೊಂಡಿದ್ದಾರೆ.

ತೆಂಡೂಲ್ಕರ್​​​​​​​​​​​ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ ಕರಿಯರ್​ನಲ್ಲಿ 100 ಅಂತಾರಾಷ್ಟ್ರೀಯ ಶತಕಗಳ ಸಹಿತ 34,357 ರನ್​ಗಳಿಸಿದ್ದಾರೆ. ಅಲ್ಲದೇ ತಮ್ಮ ಕನಸಾದ ವಿಶ್ವಕಪ್​ ಗೆಲ್ಲುವಲ್ಲಿ ಸಫಲರಾದರು. 2011ರ ವಿಶ್ವಕಪ್​ ಟೂರ್ನಿಯಲ್ಲಿ ಎರಡು ಶತಕಗಳ ಸಹಿತ 482 ರನ್​ ಸಿಡಿಸಿ ಎರಡನೇ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.