ETV Bharat / sports

ಭಾರತೀಯರು ಭಾರತದ ಬಗ್ಗೆ ನಿರ್ಧರಿಸಲಿ: ರಿಹಾನಾ ಟ್ವೀಟ್​ ಬಗ್ಗೆ ಸಚಿನ್ ಪ್ರತಿಕ್ರಿಯೆ! - Sachin Tendulkar On Rihanna's Tweet

ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನಾ ರೈತರ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಇದೀಗ ಅನೇಕರು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Sachin Tendulkar
Sachin Tendulkar
author img

By

Published : Feb 3, 2021, 9:03 PM IST

ಮುಂಬೈ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಕಳೆದ ಎರಡು ತಿಂಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ರಸ್ತೆಗಿಳಿದು ಅನ್ನದಾತರು ಹೋರಾಟ ನಡೆಸಿದ್ದಾರೆ. ಇದೇ ವಿಷಯವಾಗಿ ಖ್ಯಾತ ಪಾಪ್​ ಗಾಯಕಿ ರಿಹಾನಾ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದು, ಹೆಚ್ಚು ಚರ್ಚೆಗೊಳಗಾಗಿದೆ.

  • India’s sovereignty cannot be compromised. External forces can be spectators but not participants.
    Indians know India and should decide for India. Let's remain united as a nation.#IndiaTogether #IndiaAgainstPropaganda

    — Sachin Tendulkar (@sachin_rt) February 3, 2021 " class="align-text-top noRightClick twitterSection" data=" ">

ಓದಿ: ರೈತರ ಪ್ರತಿಭಟನೆಗೆ ಪಾಪ್​ ತಾರೆ ರಿಹಾನ್ನಾ ಬೆಂಬಲ... ಆಕೆ ಫೂಲ್ ಎಂದ ಕಂಗನಾ!

ರೈತರ ಪ್ರತಿಭಟನೆ ನಡೆಸುತ್ತಿರುವ ಫೋಟೋ ಶೇರ್ ಮಾಡಿ ಇದರ ಬಗ್ಗೆ ನಾವು ಏಕೆ ಮಾತನಾಡುತ್ತಿಲ್ಲ? ಎಂದು ಅವರು ಪ್ರಶ್ನೆ ಮಾಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಸ್ಟರ್​ ಬ್ಲಾಸ್ಟರ್ ಸಚಿನ್​ ತೆಂಡೂಲ್ಕರ್​, ಭಾರತೀಯರು ಭಾರತದ ಬಗ್ಗೆ ನಿರ್ಧರಿಸಲಿ ಮತ್ತು ದೇಶದ ಸಾರ್ವಭೌಮತ್ವದಲ್ಲಿ ರಾಜಿ ಮಾಡಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಭಾರತದ ಸಾರ್ವಭೌಮತ್ವದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಲು ಸಾಧ್ಯವಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು. ಆದರೆ ಭಾಗವಹಿಸುವಂತಿಲ್ಲ. ರಾಷ್ಟ್ರವಾಗಿ ಒಗ್ಗಟ್ಟಾಗಿ ಉಳಿಯೋಣ ಎಂದು ಟ್ವೀಟ್ ಮಾಡಿದ್ದಾರೆ. ಇದೇ ವಿಚಾರವಾಗಿ ನಟ ಅಕ್ಷಯ್ ಕುಮಾರ್​, ಅಜಯ್​ ದೇವಗನ್​, ಕರಣ್ ಜೋಹರ್​ ಕೂಡ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.