ETV Bharat / sports

ಆಸ್ಟ್ರೇಲಿಯಾ ಆಟಗಾರ್ತಿಯ ಮನವಿಗೆ ಸ್ಪಂದಿಸಿ ಒಂದು ಓವರ್​ ಬ್ಯಾಟಿಂಗ್​ ಮಾಡಿದ ಸಚಿನ್

2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಬಳಿಕ ವಿಶ್ವ ಕ್ರಿಕೆಟ್‌ನ ದಂತಕತೆ ಸಚಿನ್ ತೆಂಡೂಲ್ಕರ್‌​ 2015ರಲ್ಲಿ ಅಮೆರಿಕದಲ್ಲಿ ನಡೆದಿದ್ದ ಆಲ್​ಸ್ಟಾರ್ಸ್ ಟಿ20 ಸರಣಿಯಲ್ಲಿ ಕೊನೆಯದಾಗಿ ಕ್ರಿಕೆಟ್​ ಆಡಿದ್ದರು. ಇದೀಗ ಪೆರ್ರಿ ಮನವಿ ಮೇರೆಗೆ ಬರೋಬ್ಬರಿ ಬುಷ್​ಫೈರ್​ ಪಂದ್ಯದ ನಡುವಿನ ಇನ್ನಿಂಗ್ಸ್​ ಬ್ರೇಕ್​ನಲ್ಲಿ ಐದೂವರೆ ವರ್ಷಗಳ ಬಳಿಕ ಸಚಿನ್ ಬ್ಯಾಟಿಂಗ್​ ಮಾಡಿದರು.

bushfire-charity-match
ಸಚಿನ್​ ತೆಂಡೂಲ್ಕರ್​-ಎಲಿಸ್​ ಪೆರ್ರಿ
author img

By

Published : Feb 9, 2020, 3:50 PM IST

ಮೆಲ್ಬೋರ್ನ್​: ಕ್ರಿಕೆಟ್​ ಜಗತ್ತಿನ ಸರ್ವಶ್ರೇಷ್ಠ ಕ್ರಿಕೆಟಿಗ, ಕ್ರಿಕೆಟ್​ ದೇವರೆಂದೇ ಖ್ಯಾತಿ ಪಡೆದಿರುವ ಸಚಿನ್​ ತೆಂಡೂಲ್ಕರ್​ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್​ ಎಲಿಸ್​ ಪೆರ್ರಿ ಅವರ ಮನವಿಗೆ ಸ್ಪಂದಿಸಿ ಒಂದು ಓವರ್​ ಬೌಲಿಂಗ್‌ಗೆ ಬ್ಯಾಟಿಂಗ್​ ಮಾಡುವ ಮೂಲಕ ಐದೂವರೆ ವರ್ಷಗಳ ಬಳಿಕ ಮತ್ತೆ ಕ್ರಿಕೆಟ್​ ಆಡಿದ್ದಾರೆ.

ಸಚಿನ್​ ಪೆರ್ರಿ ಎಸೆದ ಮೊದಲ ಎಸೆತದಲ್ಲಿ ಬೌಂಡರಿ, ಎರಡನೇ ಎಸೆತದಲ್ಲಿ 2 ರನ್ ಗಳಿಸಿದರು. ನಂತರದ ಎರಡು ಎಸೆತಗಳನ್ನು ಡಾಟ್​ ಮಾಡಿದರು. ಓವರ್‌ನ ಉಳಿದೆರಡು ಎಸೆತಗಳನ್ನು ಸ್ಪಿನ್ನರ್​ ಸದರ್ಲೆಂಡ್​ ಮಾಡಿದ್ದು, ಆ 2 ಎಸೆತಗಳಲ್ಲಿ ಕವರ್​ ಡ್ರೈವ್​ ಹಾಗೂ ತಮ್ಮ ನೆಚ್ಚಿನ ಸ್ಟ್ರೈಟ್​ ಡ್ರೈವ್​ ಮಾಡುವ ಮೂಲಕ ಒಂದೇ ಓವರ್​ನಲ್ಲಿ ವಿವಿಧ ಶಾಟ್‌ಗಳನ್ನು ಪ್ರಯೋಗಿಸಿದರು. ಈ ಮೂಲಕ ಕ್ರಿಕೆಟ್‌ ಅಭಿಮಾನಿಗಳಿಗೆ ದೀರ್ಘಕಾಲದ ನಂತರ ಸಚಿನ್ ಬ್ಯಾಟಿಂಗ್​ ನೋಡುವ ಭಾಗ್ಯ ದೊರೆಯಿತು. ಇದೇ ಸಂದರ್ಭದಲ್ಲಿ ತ್ರಿಕೋನ ಸರಣಿಯಲ್ಲಿ ಫೈನಲ್​ಗೇರಿದ್ದ ಆಸ್ಟ್ರೇಲಿಯಾ ಮಹಿಳಾ ತಂಡದ ಆಟಗಾರ್ತಿಯರು ಸಚಿನ್​ ಜೊತೆ ಫೋಟೋಗೆ ಪೋಸ್​ ನೀಡುವ ಮೂಲಕ ಸಂಭ್ರಮಿಸಿದರು.

ಸಚಿನ್‌​ ಭುಜ ನೋವಿರುವ ಕಾರಣ ಆಟಗಾರರಾಗದೆ ರಿಕಿ ಪಾಂಟಿಂಗ್​ ಟೀಂಗೆ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು. ಮತ್ತೊಬ್ಬ ಭಾರತೀಯ ಮಾಜಿ ಆಟಗಾರ ಯುವರಾಜ್​ ಸಿಂಗ್ ಆ್ಯಡಂ ಗಿಲ್​ಕ್ರಿಸ್ಟ್​ ತಂಡದ ಪರ ಆಡಿದ್ದರು.

ಈ ಪಂದ್ಯವನ್ನು ರಿಕಿ ಪಾಂಟಿಂಗ್​ ಇಲೆವೆನ್​ ತಂಡ 1 ರನ್ನುಗಳಿಂದ ಗೆದ್ದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.