ETV Bharat / sports

ಸಚಿನ್​ಗೆ ಶತಕ ಬಾರಿಸುವ ಕಲೆ ಗೊತ್ತಿತ್ತು.. ಆದರೆ, ಅದನ್ನು 200, 300 ಆಗಿ ಪರಿವರ್ತಿಸುವ ಕಲೆ ಗೊತ್ತಿರಲಿಲ್ಲ!!

ಸಚಿನ್​ ಮತ್ತು ಸೆಹ್ವಾಗ್​ ನಡುವಿನ ಹೋಲಿಕೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಸಚಿನ್​ರಂತಹ ಪ್ರತಿಭಾವಂತ ಕ್ರಿಕೆಟಿಗನನ್ನು ನಾವು ನೋಡಲು ಸಾಧ್ಯವಿಲ್ಲ. ಅವರು ಶತಕಗಳನ್ನು ಹೇಗೆ ಸಿಡಿಸಬೇಕೆಂಬ ಯುಗದಲ್ಲಿ ಜನಿಸಿದವರು..

ಸಚಿನ್​ ತೆಂಡೂಲ್ಕರ್
ಸಚಿನ್​ ತೆಂಡೂಲ್ಕರ್
author img

By

Published : Jul 29, 2020, 7:36 PM IST

ಮುಂಬೈ : ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿರುವ ಬ್ಯಾಟ್ಸ್​ಮನ್ ಆಗಿರುವ ಸಚಿನ್​ ತೆಂಡೂಲ್ಕರ್​ ಅವರು ಎರಡು ಮಾದರಿಯ ಕ್ರಿಕೆಟ್​ನಲ್ಲಿ ಹೆಚ್ಚು ಶತಕಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

ಆದರೆ, ವಿಶ್ವದಲ್ಲೇ ಅತಿ ಹೆಚ್ಚು(200) ಟೆಸ್ಟ್​ ಪಂದ್ಯಗಳನ್ನಾಡಿದ ದಾಖಲೆ ಹೊಂದಿರುವ ಸಚಿನ್​ ತೆಂಡೂಲ್ಕರ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಒಂದು ತ್ರಿಶತಕ ಸಿಡಿಸಿಲ್ಲ. ಇನ್ನು, ದ್ವಿಶತಕದ ವಿಚಾರಕ್ಕೆ ಬಂದರೆ ಕೇವಲ 6 ಮಾತ್ರ ಸಿಡಿಸಿದ್ದಾರೆ. ಹೆಚ್ಚು ದ್ವಿಶತಕ ಸಿಡಿಸಿರುವ ಪಟ್ಟಿಯಲ್ಲಿ ಅವರು 12ನೇ ಆಟಗಾರನಾಗಿದ್ದಾರೆ. ಇದಕ್ಕೆ ಕಾರಣವೇನು ಎನ್ನುವುದನ್ನ ಭಾರತಕ್ಕೆ ಚೊಚ್ಚಲ ವಿಶ್ವಕಪ್​ ತಂಡಕೊಟ್ಟ ನಾಯಕ ಕಪಿಲ್​ ದೇವ್​ ತಿಳಿಸಿದ್ದಾರೆ.

ಸಚಿನ್​ ಮತ್ತು ಸೆಹ್ವಾಗ್​ ನಡುವಿನ ಹೋಲಿಕೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಸಚಿನ್​ರಂತಹ ಪ್ರತಿಭಾವಂತ ಕ್ರಿಕೆಟಿಗನನ್ನು ನಾವು ನೋಡಲು ಸಾಧ್ಯವಿಲ್ಲ. ಅವರು ಶತಕಗಳನ್ನು ಹೇಗೆ ಸಿಡಿಸಬೇಕೆಂಬ ಯುಗದಲ್ಲಿ ಜನಿಸಿದವರು. ಆದರೆ, ಅವರು ಎಂದಿಗೂ ನಿರ್ದಯಿ ಬ್ಯಾಟ್ಸ್​ಮನ್​ ಆಗಿರಲಿಲ್ಲ. ಸರಾಗವಾಗಿ ಶತಕ ಸಿಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಸಚಿನ್​ಗೆ ಅದನ್ನು ದ್ವಿಶತಕ ಹಾಗೂ ತ್ರಿಶತಕಗಳನ್ನಾಗಿ ಹೇಗೆ ಪರಿವರ್ತಿಸಬೇಕು ಎಂದು ಗೊತ್ತಿರಲಿಲ್ಲ ಎಂದು ಮಾಜಿ ಕ್ರಿಕೆಟಿಗ ಡಬ್ಲ್ಯೂ ವಿ ರಾಮನ್​ ನಡೆಸಿಕೊಟ್ಟ ಪೋಡ್​ಕಾಸ್ಟ್​ನಲ್ಲಿ ಕಪಿಲ್​ ದೇವ್​ ಹೇಳಿದ್ದಾರೆ.

ಸಚಿನ್​ ಆ ಕಲೆಯನ್ನು ಹೊಂದಿದ್ದರೆ ಅವರ ಖಾತೆಯಲ್ಲಿ ಕಡಿಮೆಯೆಂದರೂ 5 ತ್ರಿಶತಕ ಹಾಗೂ 10ಕ್ಕೂ ಹೆಚ್ಚು ದ್ವಿಶತಕಗಳಿರುತ್ತಿದ್ದವು. ಅವರಿಗೆ ವೇಗಿಗಳಾಗಲಿ ಅಥವಾ ಸ್ಪಿನ್ನರ್​ಗಳಿಗಾಗಲಿ ಪ್ರತಿ ಓವರ್​ನಲ್ಲಿ ಬೌಂಡರಿ ಅಥವಾ ಸಿಕ್ಸರ್​ ಬಾರಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಮುಂಬೈ ಆಟಕ್ಕೆ ಮಾರು ಹೋಗಿದ್ದರು. ಶತಕ ಪೂರೈಸಿದ ನಂತರ ಮತ್ತೆ ಸೊನ್ನೆಯಿಂದ ಆಡುವ ಮನೋಭಾವ ಅವರದ್ದಾಗಿತ್ತು. ಆದರೆ, ಸೆಹ್ವಾಗ್​ ಶತಕ ಸಿಡಿಸಿ ನಂತರ 20 ಓವರ್​ ಆಡುವವರೆಗೆ ದ್ವಿಶತಕದ ಹತ್ತಿರ ಬರುತ್ತಿದ್ದರು ಎಂದು ಕಪಿಲ್​ ದೇವ್​ ವಿವರಿಸಿದ್ದಾರೆ.

ಭಾರತದ ಪರ ಟೆಸ್ಟ್​ ಕ್ರಿಕೆಟ್​ನಲ್ಲಿ 3 ತ್ರಿಶತಕ ದಾಖಲಾಗಿವೆ. ಅದರಲ್ಲಿ 2 ಸೆಹ್ವಾಗ್​ ಹೆಸರಿನಲ್ಲಿದ್ದರೆ ಒಂದು ಕನ್ನಡಿಗ ಕರುಣ್​ ನಾಯರ್​ ಹೆಸರಿನಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.