ಸೆಂಚುರಿಯನ್: ಶ್ರೀಲಂಕಾ ವಿರುದ್ಧ ಸೆಂಚುರಿಯನ್ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್ ಕೇವಲ ಒಂದು ರನ್ನಿಂದ ದ್ವಿಶತಕ ವಂಚಿತರಾಗಿ ನಿರಾಶೆಯನುಭವಿಸಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 396 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕರಾದ ಮಾರ್ಕ್ರಮ್ ಮತ್ತು ಡಿನ್ ಎಲ್ಗರ್ ಭದ್ರ ಬುನಾದಿ ಹಾಕಿಕೊಟ್ಟರು.
ಎಲ್ಗರ್ 95 ರನ್ ಗಳಿಸಿ ಔಟಾದರೆ, ಮಾರ್ಕ್ರಮ್ 68 ರನ್ ಗಳಿಸಿ ನಿರ್ಗಮಿಸಿದರು. ಡಾಸೆನ್ (15), ನಾಯಕ ಡಿಕಾಕ್(18) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ 6ನೇ ವಿಕೆಟ್ಗೆ ಒಂದಾದ ಪ್ಲೆಸಿಸ್ ಮತ್ತು ಬವುಮಾ(71) 179 ರನ್ಗಳ ಜೊತೆಯಾಟ ನೀಡಿದರು. ನಂತರ ಆಲ್ರೌಂಡರ್ ಮಲ್ಡರ್(36) ಜೊತೆಗೂಡಿದ ಪ್ಲೆಸಿಸ್ 77 ರನ್ಗಳ ಜೊತೆಯಾಟ ನಡೆಸಿದರು.
-
Faf du Plessis falls for 1️⃣9️⃣9️⃣ 😱
— ICC (@ICC) December 28, 2020 " class="align-text-top noRightClick twitterSection" data="
One run short of his maiden Test double hundred, the 🇿🇦 batsman is caught at mid-on off Wanindu Hasaranga.
A disappointing end to a magnificent innings 👏#SAvSL SCORECARD ▶️ https://t.co/5jzy9lhScF pic.twitter.com/eemEd6sJSq
">Faf du Plessis falls for 1️⃣9️⃣9️⃣ 😱
— ICC (@ICC) December 28, 2020
One run short of his maiden Test double hundred, the 🇿🇦 batsman is caught at mid-on off Wanindu Hasaranga.
A disappointing end to a magnificent innings 👏#SAvSL SCORECARD ▶️ https://t.co/5jzy9lhScF pic.twitter.com/eemEd6sJSqFaf du Plessis falls for 1️⃣9️⃣9️⃣ 😱
— ICC (@ICC) December 28, 2020
One run short of his maiden Test double hundred, the 🇿🇦 batsman is caught at mid-on off Wanindu Hasaranga.
A disappointing end to a magnificent innings 👏#SAvSL SCORECARD ▶️ https://t.co/5jzy9lhScF pic.twitter.com/eemEd6sJSq
ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಪ್ಲೆಸಿಸ್ 276 ಎಸೆತಗಳಲ್ಲಿ 24 ಬೌಂಡರಿ ಸಹಿತ 199 ರನ್ ಗಳಿಸಿ ಕೇವಲ 1 ರನ್ನಿಂದ ತಮ್ಮ ಚೊಚ್ಚಲ ದ್ವಿಶತಕ ತಪ್ಪಿಸಿಕೊಂಡರು. ಅವರು ಇದಕ್ಕೂ ಮೊದಲ ಟೆಸ್ಟ್ ಕ್ರಿಕೆಟ್ನಲ್ಲಿ 4000 ರನ್ ಪೂರೈಸಿದ್ದರು.
ಪ್ಲೆಸಿಸ್ ಔಟಾದ ಬೆನ್ನಲ್ಲೇ ದಿಡೀರ್ ಕುಸಿತ ಕಂಡ ದಕ್ಷಿಣ ಅಫ್ರಿಕಾ 142.1 ಓವರ್ಗಳಲ್ಲಿ 621 ರನ್ ಗಳಿಸಿ ಆಲೌಟ್ ಆಗುವ ಮೂಲಕ 225 ರನ್ಗಳ ಭರ್ಜರಿ ಮುನ್ನಡೆ ಸಾಧಿಸಿದೆ. ಕೇಶವ್ ಮಹರಾಜ್ 73 ರನ್ ಗಳಿಸಿ ಕೊನೆಯವರಾಗಿ ಔಟಾದರು.