ETV Bharat / sports

ಸುರೇಶ್​ ರೈನಾ ಜಾಗಕ್ಕೆ ಋತುರಾಜ್​ ಗಾಯಕ್ವಾಡ್ : ಸೂಚನೆ ನೀಡಿದ ಶ್ರೀನಿವಾಸನ್​ - ಸುರೇಶ್ ರೈನಾ ಬದಲು ಋತುರಾಜ್​ ಗಾಯಕ್ವಾಡ್​

ಈಗಾಗಲೇ ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಪುಣೆಯ ಅದ್ಭುತ ಬ್ಯಾಟ್ಸ್​ಮನ್​ ಋತುರಾಜ್ ಗಾಯಕ್ವಾಡ್​ ಅವರನ್ನು ರೈನಾ ಜಾಗದಲ್ಲಿ ಆಡಿಸುವುದಾಗಿ ಸಿಎಸ್​ಕೆ ಬಾಸ್​ ಹೇಳಿದ್ದು, ಅವರು ಈ ಆವೃತ್ತಿಯಿಂದಲೇ ಸೂಪರ್​ ಸ್ಟಾರ್​ ಆಗಬಹುದು, ಯಾರಿಗೆ ಗೊತ್ತು? ಎಂದಿದ್ದಾರೆ..

ಸುರೇಶ್​ ರೈನಾ - ಋತುರಾಜ್​ ಗಾಯಕ್ವಾಡ್
ಸುರೇಶ್​ ರೈನಾ - ಋತುರಾಜ್​ ಗಾಯಕ್ವಾಡ್
author img

By

Published : Aug 31, 2020, 5:08 PM IST

ದುಬೈ : ಸಿಎಸ್​ಕೆ ತಂಡದ ಪ್ರಮುಖ ಆಟಗಾರನಾಗಿದ್ದ ಸುರೇಶ್​ ರೈನಾ ವೈಯಕ್ತಿಕ ಕಾರಣ ನೀಡಿ ಐಪಿಎಲ್​ನಿಂದ ಹೊರ ಬಂದಿದ್ದಾರೆ. ಆದರೆ, ಅವರ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಿಎಸ್​ಕೆ ಮಾಲೀಕ ಶ್ರೀನಿವಾಸನ್, ರೈನಾ ಬದಲು ಆಟಗಾರನನ್ನೂ ಹೆಸರಿಸಿ ಶಾಕ್​ ನೀಡಿದ್ದಾರೆ.

ಶನಿವಾರ ಸುರೇಶ್​ ರೈನಾ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ಸಿಎಸ್​ಕೆ ಸಿಇಒ ಟ್ವೀಟ್​ ಮೂಲಕ ತಿಳಿಸಿದ್ದರು. ಆದರೆ, ಕೆಲ ವರದಿಗಳ ಪ್ರಕಾರ, ರೈನಾಗೆ ಬಯೋ ಸೆಕ್ಯೂರ್​ ವಲಯದ ಬಗ್ಗೆ ಅಸಮಾಧಾನವಿದೆ ಎಂದಿದ್ದರೆ, ಮತ್ತೆ ಕೆಲವು ವರದಿಗಳು ಧೋನಿಗೆ ನೀಡಿದ್ದಂತಹ ಸೌಲಭ್ಯವುಳ್ಳ ರೂಮ್​ ನೀಡದಿರುವುದಕ್ಕೆ ರೈನಾ ಬೇಸರವ್ಯಕ್ತಪಡಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಿವೆ.

164 ಐಪಿಎಲ್‌ ಪಂದ್ಯಗಳಳಿಂದ 4527 ರನ್‌ಗಳಿಸಿರುವ ರೈನಾ, ಒಂದು ವೇಳೆ ತಮ್ಮ ನಿರ್ಧಾರ ಬದಲಿಸಿ ವಾಪಸ್​ ಬಾರದಿದ್ದರೆ, ಈ ವರ್ಷದ ವೇತನವಾದ ₹11 ಕೋಟಿ ಕಳೆದುಕೊಳ್ಳಲಿದ್ದಾರೆ ಎಂದು ಶ್ರೀನಿವಾಸನ್​ ಎಚ್ಚರಿಸಿದ್ದರು. ಅಲ್ಲದೆ ರೈನಾ ಬದಲಿಗೆ ಬೇರೆ ಯಾವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವುದಿಲ್ಲ. ಬದಲಾಗಿ ತಮ್ಮ ತಂಡದಲ್ಲಿರುವ ಯುವ ಆಟಗಾರರಿಗೆ ಅವಕಾಶ ನೀಡುವುದಾಗಿ ಅವರು ತಿಳಿಸಿದ್ದಾರೆ.

ಈಗಾಗಲೇ ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಪುಣೆಯ ಅದ್ಭುತ ಬ್ಯಾಟ್ಸ್​ಮನ್​ ಋತುರಾಜ್ ಗಾಯಕ್ವಾಡ್​ ಅವರನ್ನು ರೈನಾ ಜಾಗದಲ್ಲಿ ಆಡಿಸುವುದಾಗಿ ಸಿಎಸ್​ಕೆ ಬಾಸ್​ ಹೇಳಿದ್ದು, ಅವರು ಈ ಆವೃತ್ತಿಯಿಂದಲೇ ಸೂಪರ್​ ಸ್ಟಾರ್​ ಆಗಬಹುದು, ಯಾರಿಗೆ ಗೊತ್ತು? ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.