ಅಬುಧಾಬಿ: ಅಗ್ರಸ್ಥಾನವನ್ನು ಮುಂದುವರಿಸಿಕೊಂಡು ಹೋಗುವ ಆಲೋಚನೆಯಲ್ಲಿರುವ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಟೂರ್ನಿಯಲ್ಲಿ ಮುಂಬೈ ತಂಡ ಇಲ್ಲಿಯವರೆಗೆ ಒಟ್ಟು 10 ಪಂದ್ಯಗಳನ್ನಾಡಿದ್ದು, 7 ಪಂದ್ಯಗಳಲ್ಲಿ ಗೆಲುವು ಕಂಡಿದ್ರೆ, 3 ಪಂದ್ಯಗಳಲ್ಲಿ ಸೋಲು ಅನುಭವಿಸಿ 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇತ್ತ ರಾಜಸ್ಥಾನ ತಂಡ ಆಡಿರುವ 11 ಪಂದ್ಯಗಳ ಪೈಕಿ 4 ಪಂದ್ಯ ಜಯಿಸಿದ್ರೆ, 7ರಲ್ಲಿ ಸೋಲು ಕಂಡಿದೆ.
-
Match 45. Mumbai Indians win the toss and elect to bat https://t.co/zppwj1LdxA #RRvMI #Dream11IPL #IPL2020
— IndianPremierLeague (@IPL) October 25, 2020 " class="align-text-top noRightClick twitterSection" data="
">Match 45. Mumbai Indians win the toss and elect to bat https://t.co/zppwj1LdxA #RRvMI #Dream11IPL #IPL2020
— IndianPremierLeague (@IPL) October 25, 2020Match 45. Mumbai Indians win the toss and elect to bat https://t.co/zppwj1LdxA #RRvMI #Dream11IPL #IPL2020
— IndianPremierLeague (@IPL) October 25, 2020
ಗಾಯದಿಂದ ರೋಹಿತ್ ಚೇತರಿಸಿಕೊಳ್ಳದ ಕಾರಣ ಪೊಲಾರ್ಡ್ ಈ ಪಂದ್ಯವನ್ನು ಮುನ್ನಡೆಸುತ್ತಿದ್ದಾರೆ. ಇನ್ನು ಈ ಪಂದ್ಯದಲ್ಲಿ ಕೌಲ್ಟರ್ ನೈಲ್ ಬದಲು ಜೇಮ್ಸ್ ಪ್ಯಾಟಿನ್ಸನ್ಗೆ ಮುಂಬೈ ಅವಕಾಶ ಪಡೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ.
ಐಪಿಎಲ್ ಇತಿಹಾಸದಲ್ಲಿ ಮುಂಬೈ ಮತ್ತು ರಾಜಸ್ಥಾನ್ ತಂಡ ಇಲ್ಲಿಯವರೆಗೆ 21 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ, ರಾಜಸ್ಥಾನ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.