ಶಾರ್ಜಾ : ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಸಿದ ಸಂಜು ಸಾಮ್ಸನ್(74) ಹಾಗೂ ಸ್ಟಿವ್ ಸ್ಮಿತ್(69) ಅರ್ಧಶತಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 216 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ್ ತಂಡ ಆರಂಭದಲ್ಲೇ ಯುವ ಬ್ಯಾಟ್ಸ್ಮನ್ ಜೈಸ್ವಾಲ್(6)ರನ್ನ ಬೇಗನೆ ಕಳೆದುಕೊಂಡಿತು. ಆದರೆ, ಸಂಜು ಸಾಮ್ಸನ್ ಮತ್ತು ನಾಯಕ ಸ್ಮಿತ್ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 216 ರನ್ಗಳಿಸಿದೆ.
ಜೈಸ್ವಾಲ್ ವಿಕೆಟ್ ನಂತರ ಅಬ್ಬರದ ಬ್ಯಾಟಿಂಗ್ ನಡೆಸಿದ ಸಂಜು ಸಾಮನ್ಸ್ 32 ಎಸೆಗಳಲ್ಲಿ 9 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 74 ರನ್ ಗಳಿಸಿದರು. ಇವರು ಸ್ಮಿತ್ ಜೊತೆ 2 ವಿಕೆಟ್121 ರನ್ಗಳ ದಾಖಲೆಯ ಜೊತೆಯಾಟ ನಡೆಸಿದರು. ಸಾಮ್ಸನ್, ಕರ್ರನ್ ಓವರ್ನಲ್ಲಿ ಜಾಧವ್ಗೆ ಕ್ಯಾಚ್ ನೀಡಿ ಔಟಾದರು.
-
Innings Break!
— IndianPremierLeague (@IPL) September 22, 2020 " class="align-text-top noRightClick twitterSection" data="
Batting fireworks from Samson, a well made 67 from Steve Smith and a beauty of a cameo by Archer, propel @rajasthanroyals to a total of 216/7.
What do you reckon is in store next ?#Dream11IPL #RRvCSK pic.twitter.com/aX0cr1TNco
">Innings Break!
— IndianPremierLeague (@IPL) September 22, 2020
Batting fireworks from Samson, a well made 67 from Steve Smith and a beauty of a cameo by Archer, propel @rajasthanroyals to a total of 216/7.
What do you reckon is in store next ?#Dream11IPL #RRvCSK pic.twitter.com/aX0cr1TNcoInnings Break!
— IndianPremierLeague (@IPL) September 22, 2020
Batting fireworks from Samson, a well made 67 from Steve Smith and a beauty of a cameo by Archer, propel @rajasthanroyals to a total of 216/7.
What do you reckon is in store next ?#Dream11IPL #RRvCSK pic.twitter.com/aX0cr1TNco
ಸಾಮ್ಸನ್ ಔಟಾದ ನಂತರ ರನ್ಗತಿ ಕಡಿಮೆಯಾಯಿತು. ಜೊತೆಗೆ ಆರ್‌ಆರ್ ತಂಡ ನಿರಂತರ ವಿಕೆಟ್ ಕಳೆದುಕೊಂಡಿತು. ಮಿಲ್ಲರ್(0) ಖಾತೆ ತೆರೆಯದೆ ರನ್ಔಟ್ ಆದರೆ, ಉತ್ತಪ್ಪ 5 ರನ್ ಗಳಿಸಿ ಔಟಾದರು. ನಂತರ ಬಂದ ತೆವಾಟಿಯಾ 10, ರಿಯಾನ್ ಪರಾಗ್ 6 ರನ್ಗಳಿಸಿ ಔಟಾದರು.
ಆದರೆ, ಕೊನೆ ಓವರ್ನಲ್ಲಿ ಅಬ್ಬರಿಸಿದ ಜೋಫ್ರಾ ಆರ್ಚರ್ ಕೇವಲ 8 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 27 ರನ್ ಚಚ್ಚಿದರು. ಇವರು 8ನೇ ವಿಕೆಟ್ಗೆ ಟಾಮ್ ಕರ್ರನ್ ಜೊತೆ 12 ಎಸೆತಗಳಲ್ಲಿ 38 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
20 ಓವರ್ಗಳಲ್ಲಿ ರಾಜಸ್ಥಾನ್ ತಂಡ 7 ವಿಕೆಟ್ ನಷ್ಟಕ್ಕೆ 216 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ಚೆನ್ನೈ ಪರ ಸ್ಯಾಮ್ ಕರ್ರನ್ 33 ರನ್ ನೀಡಿ 3 ವಿಕೆಟ್ ಪಡೆದ್ರೆ, ದೀಪಕ್ ಚಹಾರ್ 31 ರನ್ ನೀಡಿ 1 ವಿಕೆಟ್ ಪಡೆದರು. ಆದರೆ, ಜಡೇಜಾ 40, ಪಿಯೂಷ್ ಚಾವ್ಲಾ 55 ರನ್ ಹಾಗೂ ಲುಂಗಿನ ಎಂಗಿಡಿ 56 ರನ್ ನೀಡಿ ದುಬಾರಿಯಾದರು.