ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು 2021ರ ಹರಾಜಿಗೂ ಮುನ್ನ 12 ಆಟಗಾರರನ್ನು ಉಳಿಸಿಕೊಂಡಿದೆ. ಆಶ್ಚರ್ಯವೆಂದ್ರೆ, ಕ್ರಿಸ್ ಮೋರಿಸ್, ಮೊಯಿನ್ ಅಲಿ ಹಾಗೂ ಶುವಂ ದುಬೆಯನ್ನು ತಂಡದಿಂದ ಬಿಡುಗಡೆಗೊಳಿಸಿದೆ.
2021ರ ಐಪಿಎಲ್ಗೆ ಫೆಬ್ರವರಿ 14ರಂದು ಮಿನಿ ಹರಾಜು ನಡೆಯುವ ಸಾಧ್ಯತೆಯಿದೆ. ಅದಕ್ಕಾಗಿ ಎಲ್ಲಾ ಪ್ರಾಂಚೈಸಿಗೂ ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ವರದಿ ನೀಡಲು ಜನವರಿ 20 ಅಂತಿಮ ದಿನವಾಗಿತ್ತು. ಇದೀಗ ಆರ್ಸಿಬಿ ತನ್ನ 12 ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ.
ಆದರೆ, 2020ರಲ್ಲಿ ನಿರೀಕ್ಷೆ ಮಾಡಿದಷ್ಟು ಪ್ರದರ್ಶನ ತೋರದ ಆಸ್ಟ್ರೇಲಿಯಾನದ ನಾಯಕ ಆ್ಯರೋನ್ ಫಿಂಚ್, ಕ್ರಿಸ್ ಮೋರಿಸ್, ಉದಾನ ಗುರುಕಿರಾತ್ ಮನ್ ತಂಡದಿಂದ ಕೈಬಿಟ್ಟಿದೆ. ಸ್ಟಾರ್ಗಳಾದ ಕೊಹ್ಲಿ, ಎಬಿಡಿ,ಚಹಾಲ್ ಜೊತೆಗೆ ಯುವ ಆಟಗಾರರಿಗೆ ಮಣೆ ಹಾಕಿರುವ ಆರ್ಸಿಬಿ, ಪಡಿಕ್ಕಲ್, ಸಿರಾಜ್, ಸೈನಿ, ಫಿಲಿಪ್ಪೆ ಹಾಗೂ ಕನ್ನಡಿಗ ಪವನ್ ದೇಶಪಾಂಡೆಯವರನ್ನು ರೀಟೈನ್ ಮಾಡಿಕೊಂಡಿದೆ.
-
IPL Retention Announcement 🔊 Here’s the news you’ve been waiting for, 12th Man Army. We have retained 12 stars from our 2020 squad. 🌟🤩#PlayBold #IPL2021 #WeAreChallengers pic.twitter.com/YkzSV3EUjU
— Royal Challengers Bangalore (@RCBTweets) January 20, 2021 " class="align-text-top noRightClick twitterSection" data="
">IPL Retention Announcement 🔊 Here’s the news you’ve been waiting for, 12th Man Army. We have retained 12 stars from our 2020 squad. 🌟🤩#PlayBold #IPL2021 #WeAreChallengers pic.twitter.com/YkzSV3EUjU
— Royal Challengers Bangalore (@RCBTweets) January 20, 2021IPL Retention Announcement 🔊 Here’s the news you’ve been waiting for, 12th Man Army. We have retained 12 stars from our 2020 squad. 🌟🤩#PlayBold #IPL2021 #WeAreChallengers pic.twitter.com/YkzSV3EUjU
— Royal Challengers Bangalore (@RCBTweets) January 20, 2021
ಆರ್ಸಿಬಿ ಉಳಿಸಿಕೊಂಡಿರುವ ಆಟಗಾರರು
ವಿರಾಟ್ ಕೊಹ್ಲಿ, ಡಿವಿಲಿಯರ್ಸ್, ಯುಜ್ವೇಂದ್ರ ಚಹಾಲ್, ದೇವದತ್ ಪಡಿಕ್ಕಲ್, ಜೋಶ್ ಫಿಲಿಪ್ಪೆ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಹ್ಬಾಜ್ ಅಹ್ಮದ್, ಪವನ್ ದೇಶಪಾಂಡೆ, ಆ್ಯಡಂ ಜಂಪಾ, ಕೇನ್ ರಿಚರ್ಡ್ಸನ್
ತಂಡದಿಂದ ಕೈಬಿಟ್ಟಿರುವ ಆಟಗಾರರು
ಆ್ಯರೋನ್ ಫಿಂಚ್, ಕ್ರಿಸ್ ಮೋರಿಸ್, ಉಮೇಶ್ ಯಾದವ್, ಮೊಯೀನ್ ಅಲಿ, ಇಸುರು ಉದಾನ, ಡೇಲ್ ಸ್ಟೈನ್, ಗುರುಕಿರಾತ್ ಮನ್, ಶಿವಂ ದುಬೆ, ಅನಿವೃದ್ ಜೋಶಿ, ಪವನ್ ನೇಗಿ ಸೇರಿದಂತೆ ಹಲವು ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ.
ಇದನ್ನು ಓದಿ : ರೈನಾರನ್ನು ರೀಟೈನ್ ಮಾಡಿಕೊಂಡ ಸಿಎಸ್ಕೆ: ಕೇದಾರ್, ಚಾವ್ಲಾರನ್ನು ಕೈಬಿಡುವ ಸಾಧ್ಯತೆ