ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಚಾಲನೆ ಸಿಕ್ಕಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ಷೇತ್ರರಕ್ಷಣೆ ಆಯ್ದುಕೊಂಡಿದೆ.
ದೇವದತ್ ಪಡಿಕ್ಕಲ್ ಕಳೆದ ಕೆಲ ದಿನಗಳ ಹಿಂದೆ ಕೋವಿಡ್ನಿಂದ ಚೇತರಿಸಿಕೊಂಡಿರುವ ಕಾರಣ ವಿಶ್ರಾಂತಿ ಪಡೆದುಕೊಳ್ಳಲಿದ್ದು, ಇದೀಗ ಕ್ಯಾಪ್ಟನ್ ಕೊಹ್ಲಿ ಜತೆ ಆರಂಭಿಕರಾಗಿ ರಜತ್ ಪಟಿದರ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಸುಮಾರು 8ವರ್ಷಗಳ ಹಿಂದೆ ಆರ್ಸಿಬಿ ತಂಡದಲ್ಲಿ ಆಡಿದ್ದ ಡೆನಿಯಲ್ ಇದೀಗ ಮತ್ತೊಮ್ಮೆ ಅದೇ ಪ್ರಾಂಚೈಸಿಯಲ್ಲಿ ಆಡಲಿದ್ದಾರೆ. ಇದರ ಜತೆಗೆ ಮ್ಯಾಕ್ಸವೆಲ್ ಹಾಗೂ ಜೆಮ್ಸಿನ್ ಇದೀನ ಪಂದ್ಯದಲ್ಲಿ ಡೆಬ್ಯು ಮಾಡ್ತಿದ್ದಾರೆ.
-
#RCB Captain @imVkohli wins the toss and elects to bowl first against #MumbaiIndians in the season opener of #VIVOIPL 2021.
— IndianPremierLeague (@IPL) April 9, 2021 " class="align-text-top noRightClick twitterSection" data="
Follow the game here - https://t.co/9HI54vpf2I #MIvRCB pic.twitter.com/haOAZAEUfx
">#RCB Captain @imVkohli wins the toss and elects to bowl first against #MumbaiIndians in the season opener of #VIVOIPL 2021.
— IndianPremierLeague (@IPL) April 9, 2021
Follow the game here - https://t.co/9HI54vpf2I #MIvRCB pic.twitter.com/haOAZAEUfx#RCB Captain @imVkohli wins the toss and elects to bowl first against #MumbaiIndians in the season opener of #VIVOIPL 2021.
— IndianPremierLeague (@IPL) April 9, 2021
Follow the game here - https://t.co/9HI54vpf2I #MIvRCB pic.twitter.com/haOAZAEUfx
ಮುಂಬೈ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಈ ಹಿಂದಿನ ವರ್ಷದ ಆವೃತ್ತಿಯಲ್ಲಿ ಆಡಿದ್ದ ಪ್ರಮುಖ ಪ್ಲೇಯರ್ಸ್ಗಳಿಗೆ ಮಣೆ ಹಾಕಿದ್ದು, ಡಿಕಾಕ್ ಬದಲಿಗೆ ಕ್ರಿಸ್ ಲಿನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಇನ್ನು ಎರಡು ತಂಡಗಳು ಐಪಿಎಲ್ನಲ್ಲಿ ಒಟ್ಟು 27 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಮುಂಬೈ 17 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್ಸಿಬಿ ಸೂಪರ್ ಓವರ್ ಸೇರಿದಂತೆ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2015ರಿಂದ ಎರಡು ತಂಡಗಳು 8 ಬಾರಿ ಮುಖಾಮುಖಿಯಾಗಿದ್ದು, ಆರ್ಸಿಬಿ ಕೇವಲ 2 ರಲ್ಲಿ ಮಾತ್ರ ಜಯಿಸಿದೆ.
ಆಡುವ 11ರ ಬಳಗ ಇಂತಿದೆ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ಕ್ಯಾಪ್ಟನ್), ಕ್ರಿಸ್ ಲಿನ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್(ವಿ.ಕೀ), ಹಾರ್ದಿಕ್ ಪಾಂಡ್ಯ, ಕಿರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಮಾರ್ಕೊ ಜೆನ್ಸನ್, ಟ್ರೆಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ(ಕ್ಯಾಪ್ಟನ್), ರಜತ್ ಪಟಿದರ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್, ಡೆನಿಯಲ್ ಕ್ರಿಶ್ಚಿನ್, ವಾಷಿಂಗ್ಟನ್ ಸುಂದರ್, ಕೈಲ್ ಜೆಮ್ಸಿನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಹ್ಜಾದ್ ಅಹ್ಮದ್, ಯಜುವೇಂದ್ರ ಚಹಲ್