ಹೈದರಾಬಾದ್: 13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದೆ. ಸೆ. 19 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಹಾಗೂ ಚೆನ್ನೈ ತಂಡ ಮುಖಾಮುಖಿ ಆಗಲಿವೆ. ಇತ್ತ ಆರ್ಸಿಬಿ ತಂಡ ಸೆ.21 ರಂದು ಹೈದರಾಬಾದ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.
ಕಳೆದ 12 ವರ್ಷಗಳಿಂದ ಟ್ರೋಫಿಗಾಗಿ ಸೆಣಸಾಡುತ್ತಿರುವ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಯಾವಾಗಲು ಕನ್ನಡಿಗರಿಲ್ಲದೆ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ತಂಡದಲ್ಲಿ ಈ ಬಾರಿ ಇಬ್ಬರು ಕನ್ನಡಿಗರಿದ್ದಾರೆ. ಉತ್ತಮ ಫಾರ್ಮ್ನಲ್ಲಿರುವ ದೇವದತ್ ಪಡಿಕ್ಕಲ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಲಿದ್ದಾರೆ ಎಂಬ ನಿರೀಕ್ಷೆ ಇದೆ.
-
ನಮ್ಮ ಕರ್ನಾಟಕದ ಹುಡುಗರಿಗೆ ಯಾವ ಸಂದೇಶವನ್ನು ನೀಡಲು ನೀವು ಬಯಸುತ್ತೀರಿ? 🤩#PlayBold #IPL2020 #WeAreChallengers pic.twitter.com/j3m6qwaRdd
— Royal Challengers Bangalore (@RCBTweets) September 9, 2020 " class="align-text-top noRightClick twitterSection" data="
">ನಮ್ಮ ಕರ್ನಾಟಕದ ಹುಡುಗರಿಗೆ ಯಾವ ಸಂದೇಶವನ್ನು ನೀಡಲು ನೀವು ಬಯಸುತ್ತೀರಿ? 🤩#PlayBold #IPL2020 #WeAreChallengers pic.twitter.com/j3m6qwaRdd
— Royal Challengers Bangalore (@RCBTweets) September 9, 2020ನಮ್ಮ ಕರ್ನಾಟಕದ ಹುಡುಗರಿಗೆ ಯಾವ ಸಂದೇಶವನ್ನು ನೀಡಲು ನೀವು ಬಯಸುತ್ತೀರಿ? 🤩#PlayBold #IPL2020 #WeAreChallengers pic.twitter.com/j3m6qwaRdd
— Royal Challengers Bangalore (@RCBTweets) September 9, 2020
ಈ ಮಧ್ಯೆ ಕನ್ನಡಿಗ ದೇವದತ್ ಪಡಿಕ್ಕಲ್ ಮತ್ತು ಪವನ್ ದೇಶಪಾಂಡೆ ಫೋಟೋಗಳೊಂದಿಗೆ ಕನ್ನಡದಲ್ಲೇ ಟ್ವೀಟ್ ಮಾಡಿರುವ ಆರ್ಸಿಬಿ ತಂಡ ನಮ್ಮ ಕರ್ನಾಟಕದ ಹುಡುಗರಿಗೆ ಯಾವ ಸಂದೇಶವನ್ನು ನೀಡಲು ನೀವು ಬಯಸುತ್ತೀರಿ? ಎಂದು ಕೇಳಿದೆ.
-
ಅವರಿಗೆ ಯಾವುದೇ ಸಂದೇಶ ಇಲ್ಲ, ನೀವು ಅವರನ್ನು ಪ್ಲೇಯಿಂಗ್ ೧೧ ಅಲ್ಲಿ ಆಡಿಸಬೇಕು ಎಂದು ನಿಮಗೆ ಸಂದೇಶ ನೀಡಲು ಇಚ್ಛಿಸುತ್ತೇನೆ
— abhiagri (@dabhi1999) September 9, 2020 " class="align-text-top noRightClick twitterSection" data="
">ಅವರಿಗೆ ಯಾವುದೇ ಸಂದೇಶ ಇಲ್ಲ, ನೀವು ಅವರನ್ನು ಪ್ಲೇಯಿಂಗ್ ೧೧ ಅಲ್ಲಿ ಆಡಿಸಬೇಕು ಎಂದು ನಿಮಗೆ ಸಂದೇಶ ನೀಡಲು ಇಚ್ಛಿಸುತ್ತೇನೆ
— abhiagri (@dabhi1999) September 9, 2020ಅವರಿಗೆ ಯಾವುದೇ ಸಂದೇಶ ಇಲ್ಲ, ನೀವು ಅವರನ್ನು ಪ್ಲೇಯಿಂಗ್ ೧೧ ಅಲ್ಲಿ ಆಡಿಸಬೇಕು ಎಂದು ನಿಮಗೆ ಸಂದೇಶ ನೀಡಲು ಇಚ್ಛಿಸುತ್ತೇನೆ
— abhiagri (@dabhi1999) September 9, 2020
-
Please ಅವರಿಗೆ playing eleven ಅಲ್ಲಿ ಆಡಲು ಅವಕಾಶ ನೀಡಿ
— Jithendra_Jithu_ck (@ck_jithu) September 9, 2020 " class="align-text-top noRightClick twitterSection" data="
">Please ಅವರಿಗೆ playing eleven ಅಲ್ಲಿ ಆಡಲು ಅವಕಾಶ ನೀಡಿ
— Jithendra_Jithu_ck (@ck_jithu) September 9, 2020Please ಅವರಿಗೆ playing eleven ಅಲ್ಲಿ ಆಡಲು ಅವಕಾಶ ನೀಡಿ
— Jithendra_Jithu_ck (@ck_jithu) September 9, 2020
ಬೆಂಗಳೂರು ತಂಡದ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ತರಹೇವಾರಿ ವಿಶ್ ಮಾಡಿದ್ದಾರೆ. ಕೆಲವರು ನಾವು ನಮ್ಮ ಆಟಗಾರರಿಗೆ ಯಾವುದೇ ಸಲಹೆ ನೀಡಲು ಬಯಸುವುದಿಲ್ಲ. ಆದರೆ 11ರ ಬಳಗದಲ್ಲಿ ಆಡಿಸುವಂತೆ ನಿಮಗೆ ಸಲಹೆ ನೀಡುತ್ತೇವೆ ಎಂದಿದ್ದಾರೆ.
-
ಕಪ್ ಗೆಲ್ಲದಿದ್ದರೂ ಪರವಾಗಿಲ್ಲ ಸಿಎಸ್ಕೆ ನ ಹಾಕೊಂಡ್ರು ರುಬ್ರೋ
— Manu Prabhas (@manuprabhaas) September 9, 2020 " class="align-text-top noRightClick twitterSection" data="
">ಕಪ್ ಗೆಲ್ಲದಿದ್ದರೂ ಪರವಾಗಿಲ್ಲ ಸಿಎಸ್ಕೆ ನ ಹಾಕೊಂಡ್ರು ರುಬ್ರೋ
— Manu Prabhas (@manuprabhaas) September 9, 2020ಕಪ್ ಗೆಲ್ಲದಿದ್ದರೂ ಪರವಾಗಿಲ್ಲ ಸಿಎಸ್ಕೆ ನ ಹಾಕೊಂಡ್ರು ರುಬ್ರೋ
— Manu Prabhas (@manuprabhaas) September 9, 2020
ಇನ್ನೂ ಕೆಲವರು ನಾವು ಕಪ್ಗೆಲ್ಲದಿದ್ದರೂ ಪರವಾಗಿಲ್ಲ ಆದರೆ ಸಿಎಸ್ಕೆ ತಂಡವನ್ನು ಸೋಲಿಸಬೇಕು ಎಂದ್ರೆ. ಮತ್ತೊಬ್ಬರು ಟ್ವೀಟ್ ಮಾಡಿ Uncle's ನ ಹೊಡಿಬೇಕು ಸುಬ್ಬಿ ಎಂದು ಟಗರು ಸಿನಿಮಾದ ಡೈಲಾಗ್ನಲ್ಲೇ ಸಂದೇಶ ನೀಡಿದ್ದಾರೆ. ಮತ್ತೆ ಕೆಲವರು ಈ ಸಾರಿ ಕಪ್ ನಮ್ದೆ ಗುರೂ ಎಂದಿದ್ದಾರೆ.
-
Uncle's ನಾ ಹೊಡಿಬೇಕು ಸುಬ್ಬಿ
— ರಾಜು (@RajuChoudri7) September 9, 2020 " class="align-text-top noRightClick twitterSection" data="
">Uncle's ನಾ ಹೊಡಿಬೇಕು ಸುಬ್ಬಿ
— ರಾಜು (@RajuChoudri7) September 9, 2020Uncle's ನಾ ಹೊಡಿಬೇಕು ಸುಬ್ಬಿ
— ರಾಜು (@RajuChoudri7) September 9, 2020
ಕಳೆದ ಒಂದು ವಾರದಿಂದ ಆರ್ಸಿಬಿ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದು, ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.