ETV Bharat / sports

ಒಂದೇ ಪಂದ್ಯದಲ್ಲಿ ಕೊಹ್ಲಿ ದಾಖಲೆ ಸಹಿತ ಎರಡು ದಾಖಲೆ ಬ್ರೇಕ್​ ಮಾಡಿದ ರಾಸ್​ ಟೇಲರ್​!

author img

By

Published : Feb 8, 2020, 3:59 PM IST

ಭಾರತ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ 348 ರನ್​ಗಳ ದಾಖಲೆಯ ಜಯಕ್ಕೆ ಕಾರಣರಾಗಿದ್ದ ಟೇಲರ್​ 2ನೇ ಏಕದಿನ ಪಂದ್ಯದಲ್ಲೂ ಅಜೇಯ 73 ರನ್​ಗಳಿಸುವ ಮೂಲಕ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಕಾದಾಟದಲ್ಲಿ ಅತಿ ಹೆಚ್ಚು ರನ್​ಗಳಿಸಿದ 2ನೇ ಆಟಗಾರ ಎನಿಸಿಕೊಂಡರು.

ross taylor records
ross taylor records

ಆಕ್ಲೆಂಡ್: ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಭಾರತಕ್ಕೆ ಕಬ್ಬಿಣದ ಕಡಲೆಯಾಗಿರುವ ರಾಸ್​ ಟೇಲರ್​ 2ನೇ ಏಕದಿನ ಪಂದ್ಯದ ವೇಳೆ ಮಹತ್ವದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.

ಭಾರತ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ 348 ರನ್​ಗಳ ದಾಖಲೆಯ ಜಯಕ್ಕೆ ಕಾರಣರಾಗಿದ್ದ ಟೇಲರ್​, 2ನೇ ಏಕದಿನ ಪಂದ್ಯದಲ್ಲೂ ಅಜೇಯ 73 ರನ್​ಗಳಿಸುವ ಮೂಲಕ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಕಾದಾಟದಲ್ಲಿ ಅತಿ ಹೆಚ್ಚು ರನ್​ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಈಗಾಗಲೇ ಭಾರತದ ವಿರುದ್ಧ ಅತಿ ಹೆಚ್ಚು ರನ್​ ಗಳಿಸಿರುವ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ದ್ವಿಪಕ್ಷೀಯ ಸರಣಿಯಲ್ಲಿ ಸಚಿನ್​ ಅತಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್​ ಆಗಿದ್ದಾರೆ. ಸಚಿನ್​ 41 ಇನ್ನಿಂಗ್ಸ್​ಗಳಲ್ಲಿ 1750 ರನ್​ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಟೇಲರ್​ 34 ಇನ್ನಿಂಗ್ಸ್​ಗಳಲ್ಲಿ 1373 ರನ್​ಗಳಿಸಿ ಕೊಹ್ಲಿಯನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದಿದ್ದಾರೆ. ಕೊಹ್ಲಿ 25 ಇನ್ನಿಂಗ್ಸ್​ಗಳಲ್ಲಿ 1369 ರನ್​ಗಳಿಸಿ 3ನೇ ಸ್ಥಾನದಲ್ಲಿದ್ದಾರೆ.

ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಅತಿಹೆಚ್ಚು ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್‌ ಆಗಿ ದಾಖಲೆಗೆ ಪಾತ್ರರಾಗಿದ್ದಾರೆ. ಟೇಲರ್​ ಭಾರತದ ವಿರುದ್ಧ 3 ಶತಕ ಹಾಗೂ 8 ಅರ್ಧಶತಕ ಬಾರಿಸಿದ್ದಾರೆ. ಈ ಮೊದಲು ನಾಥನ್ ಆಸ್ಟೈ​ 10 ಬಾರಿ, ಮಾಜಿ ನಾಯಕ ಸ್ಟೀಫನ್​ ಫ್ಲೇಮಿಂಗ್ ಹಾಗೂ ಹಾಲಿ ನಾಯಕ ವಿಲಿಯಮ್ಸನ್​​ 9 ಬಾರಿ 50ಕ್ಕಿಂತ ಹೆಚ್ಚು ರನ್​ ಬಾರಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.