ಮುಂಬೈ: ಭಾರತದ ಬ್ಯಾಟಿಂಗ್ ಶಕ್ತಿಯಾಗಿರುವ ರೋಹಿತ್ ಶರ್ಮಾ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅವಕಾಶ ಕಳೆದುಕೊಂಡ ಹತಾಶೆಯಲ್ಲಿ 'ಸೂರ್ಯ ನಾಳೆ ಮತ್ತೆ ಹುಟ್ಟುತ್ತಾನೆಂದು' ಟ್ವೀಟ್ ಮಾಡಿ ನೋವು ತೋಡಿಕೊಂಡಿದ್ದರು,
ರೋಹಿತ್ ಇಂಗ್ಲೆಂಡ್ ಪ್ರವಾಸದ ವೇಳೆ ಟಿ-20 ಹಾಗೂ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಟಿ20ಯಲ್ಲಿ ತಮ್ಮ 3ನೇ ಶತಕ ಬಾರಿಸಿದ್ದ ರೋಹಿತ್, ಏಕದಿನ ಕ್ರಿಕೆಟ್ನಲ್ಲೂ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿ ಮೊದಲ ಪಂದ್ಯದಲ್ಲಿಯೇ 137 ರನ್ಗಳಿಸಿ ಮಿಂಚಿದ್ದರು. ಆದರೆ, ಅಂದೇ ಮೊದಲ 3 ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಿದ್ದ ಟೆಸ್ಟ್ ತಂಡದಲ್ಲಿ ಮಾತ್ರ ರೋಹಿತ್ರನ್ನು ಆಯ್ಕೆ ಮಾಡಿರಲಿಲ್ಲ.
-
Sun will rise again tomorrow 😊
— Rohit Sharma (@ImRo45) July 18, 2018 " class="align-text-top noRightClick twitterSection" data="
">Sun will rise again tomorrow 😊
— Rohit Sharma (@ImRo45) July 18, 2018Sun will rise again tomorrow 😊
— Rohit Sharma (@ImRo45) July 18, 2018
ತಮ್ಮನ್ನು ಟೆಸ್ಟ್ಗೆ ಪರಿಗಣಿಸದಿದ್ದರಿಂದ ಕೋಪಗೊಂಡಿದ್ದ ರೋಹಿತ್ ಟ್ವೀಟ್ ಮೂಲಕ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದರು. ಅಂದು ರೋಹಿತ್ "sun will rise again tomorrow" ಎಂದು ಟ್ವೀಟ್ ಮಾಡಿದ್ದರು. ಅಲ್ಲಿಂದೀಚೆಗೆ ರೋಹಿತ್ ಒಂದು ವರ್ಷದಲ್ಲಿ ಏಕದಿನ ಕ್ರಿಕೆಟ್ನ ಬಾದ್ ಶಾ ಆಗಿ ಮೆರೆದಾಡಿದ್ದಾರೆ. ನಾಯಕನಾಗಿ, ಬ್ಯಾಟ್ಸ್ಮನ್ ಆಗಿಯೂ ಯಶಸ್ಸು ಕಾಣುವ ಮೂಲಕ ಅಂದು ಮಾಡಿದ್ದ ಟ್ವೀಟ್ಗೆ ಒಂದು ವರ್ಷ ಕಳೆದಿದ್ದು ತಾವೇನೆಂದೂ ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಒಂದು ವರ್ಷದಲ್ಲಿ ರೋಹಿತ್ ಬ್ಯಾಟಿಂಗ್ ದಾಖಲೆ
ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್(1910)
ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ (09)
ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು 50+ ಸ್ಕೋರ್(17)
ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ಬೌಂಡರಿ(179)
ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ಸಿಕ್ಸರ್(59 ಕ್ರಿಸ್ ಗೇಲ್ ಕೂಡ 59)
ಬ್ಯಾಟಿಂಗ್ ಸರಾಸರಿ (70.74)
ವಿಶ್ವಕಪ್ನಲ್ಲಿ ಗರಿಷ್ಠ ಸ್ಕೋರರ್(648)
ಇಷ್ಟೆಲ್ಲ ಸಾಧನೆ ಮಾಡಿರುವ ರೋಹಿತ್ ಶರ್ಮಾರ ನಾಯಕನಾಗಿಯೂ ಕೂಡ ಮಿಂಚಿದ್ದು, ಏಷ್ಯಾಕಪ್ ಹಾಗೂ 12ನೇ ಆವೃತ್ತಿಯ ಐಪಿಎಲ್ ಟ್ರೋಫಿಗಳನ್ನು ಜಯಿಸಿದ್ದಾರೆ. ಇದೀಗ ವಿಂಡೀಸ್ ಪ್ರವಾಸಕ್ಕೆ ಟೆಸ್ಟ್ ತಂಡಕ್ಕೆ ರೋಹಿತ್ಗೆ ಅವಕಾಶ ಸಿಗುವುದೇ ಎಂದು ಕಾದುನೋಡಬೇಕಿದೆ.