ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಐವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ 'ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ ಲಭಿಸಿದೆ. ಕೇಂದ್ರ ಕ್ರೀಡಾ ಸಚಿವಾಲಯ ಪ್ರಶಸ್ತಿಗೆ ಅರ್ಹರಾದ ಕ್ರೀಡಾಳುಗಳ ಹೆಸರುಗಳನ್ನು ಪ್ರಕಟಿಸಿದೆ.
ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ, ಪ್ಯಾರಾ ಅಥ್ಲೀಟ್ ಮರಿಯಪ್ಪ.ಟಿ, ಟೇಬಲ್ ಟೆನ್ನಿಸ್ ಆಟಗಾರ್ತಿ ಮನಿಕಾ ಬತ್ರಿ, ಕುಸ್ತಿಪಟು ವಿನೇಶ್ ಪೋಗಾಟ್ ಹಾಗೂ ಹಾಕಿ ಆಟಗಾರ್ತಿ ರಾಣಿಗೆ ಈ ಗೌರವ ಸಂದಿದೆ.
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು:
ಬಿಲ್ಲುವಿದ್ಯೆ ಕೋಚ್ ಧರ್ಮೆಂದ್ರ ತಿವಾರಿ, ಅಥ್ಲೆಟಿಕ್ ಕೋಚ್ ಪುರುಷೋತ್ತಮ ರಾಯ್, ಬಾಕ್ಸಿಂಗ್ ಕೋಚ್ ಶಿವ ಸಿಂಗ್, ಹಾಕಿ ಕೋಚ್ ಕೃಷ್ಣಕುಮಾರ್ ಹೂಡಾ, ಪವರ್ ಲಿಫ್ಟಿಂಗ್ ಕೋಚ್ ವಿಜಯ್ ಬಾಲಚಂದ್ರ ಮುನೀಶ್ವರ್, ಟೆನ್ನಿಸ್ ಕೋಚ್ ನರೇಶ್ ಕುಮಾರ್ ಹಾಗೂ ಕುಸ್ತಿ ಕೋಚ್ ಓಂಪ್ರಕಾಶ್ ದಯಾ ಅವರಿಗೆ ದ್ರೋಣಾಚಾರ್ಯ ಗೌರವ ಸಂದಿದೆ.
-
Cricketers Ishant Sharma and Deepti Sharma, athlete Dutee Chand, shooter Manu Bhaker among 27 sportspersons to be conferred with Arjuna Award. https://t.co/X2d7SNSc7j
— ANI (@ANI) August 21, 2020 " class="align-text-top noRightClick twitterSection" data="
">Cricketers Ishant Sharma and Deepti Sharma, athlete Dutee Chand, shooter Manu Bhaker among 27 sportspersons to be conferred with Arjuna Award. https://t.co/X2d7SNSc7j
— ANI (@ANI) August 21, 2020Cricketers Ishant Sharma and Deepti Sharma, athlete Dutee Chand, shooter Manu Bhaker among 27 sportspersons to be conferred with Arjuna Award. https://t.co/X2d7SNSc7j
— ANI (@ANI) August 21, 2020
ಕ್ರೀಡಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ವಿಶ್ವಕಪ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ 5 ಶತಕ ಬಾರಿಸಿದ್ದ ರೋಹಿತ್ ಶರ್ಮಾ, ಕುಸ್ತಿಪಟು ವಿನೇಶ್ ಪೋಗಟ್, ಟೇಬಲ್ ಟೆನ್ನಿಸ್ ಆಟಗಾರ್ತಿ ಮಾನಿಕ ಬಾತ್ರಾ ಹಾಗೂ 2016ರ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ಅವರ ಹೆಸರನ್ನು ವಿಶೇಷ ಆಯ್ಕೆ ಸಮಿತಿ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು.
ರೋಹಿತ್ ಶರ್ಮಾ ಖೇಲ್ ರತ್ನ ಪ್ರಶಸ್ತಿ ಪಡೆದ ನಾಲ್ಕನೇ ಕ್ರಿಕೆಟಿಗರಾಗಿದ್ದಾರೆ. ಇವರಿಗೂ ಮೊದಲು ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಅರ್ಜುನ ಪ್ರಶಸ್ತಿ ಪುರಸ್ಕೃತರು:
ದ್ಯುತಿ ಚಾಂದ್, ಇಶಾಂತ್ ಶರ್ಮಾ, ದೀಪ್ತಿ ಶರ್ಮಾ, ಆಕಾಶ್ ದೀಪ್ ಸಿಂಗ್ ಸೇರಿದಂತೆ 27 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಗಿದೆ.
ಧ್ಯಾನ್‌ಚಂದ್ ಪ್ರಶಸ್ತಿ:
ಕುಲ್ದೀಪ್ ಸಿಂಗ್ ಬುಲ್ಲಾರ್, ಎನ್.ಉಷಾ, ಪ್ರದೀಪ್ ಶ್ರೀಕೃಷ್ಣ ಗಾಡ್ಲೆ ಸೇರಿ ಐವರಿಗೆ ಧ್ಯಾನ್‌ಚಂದ್ ಅವಾರ್ಡ್ ಘೋಷಣೆಯಾಗಿದೆ.