ETV Bharat / sports

ಭಾರತ - ಆಸೀಸ್ ಟೆಸ್ಟ್ ಸರಣಿ: ಕಳಪೆ ಪ್ರದರ್ಶನದಿಂದ ಸ್ಥಾನ ಕಳೆದುಕೊಂಡ ಕನ್ನಡಿಗ ಮಯಾಂಕ್ - ರೋಹಿತ್ ಶರ್ಮಾ ಲೇಟೆಸ್ಟ್ ನ್ಯೂಸ್

ಕಾಂಗರೂ ನಾಡಿನಲ್ಲಿ ತೋರಿದ ಕಳಪೆ ಪ್ರದರ್ಶನದಿಂದಾಗಿ ಮಯಾಂಕ್ ಅಗರ್ವಾಲ್ ಆಡುವ 11ರ ಬಳಗದಿಂದ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ.

Mayank Agarwal
ಮಯಾಂಕ್ ಅಗರ್ವಾಲ್
author img

By

Published : Jan 6, 2021, 1:59 PM IST

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲೆರಡು ಟೆಸ್ಟ್ ಪಂದ್ಯಗಲ್ಲಿ ರನ್ ಗಳಿಸಲು ಪರದಾಡಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಮೂರನೇ ಟೆಸ್ಟ್ ಪಂದ್ಯದ ಆಡುವ 11ರ ಬಳಗದಿಂದ ಹೊರಬಿದ್ದಿದ್ದಾರೆ.

ಆಸೀಸ್ ವಿರುದ್ಧದ ಸರಣಿಯ ಮೊದಲೆರಡು ಪಂದ್ಯಗಳಿಗೆ ರೋಹಿತ್ ಶರ್ಮಾ ಅಲಭ್ಯರಾಗಿದ್ದ ಕಾರಣ ಮಯಾಂಕ್ ಅಗರ್ವಾಲ್​ಗೆ ಮಹತ್ವದ ಅವಕಾಶ ಒದಗಿ ಬಂದಿತ್ತು. ಆದರೆ ಉತ್ತಮ ರನ್ ಗಳಿಸುವಲ್ಲಿ ಮಯಾಂಕ್ ಎಡವಿದ್ರು. ಮೊದಲ ಒಂದ್ಯದಲ್ಲಿ 17 ಮತ್ತು 9 ರನ್ ಗಳಿಸಿದ್ರೆ, ದ್ವಿತೀ ಟೆಸ್ಟ್ ಪಂದ್ಯದಲ್ಲಿ 0 ಮತ್ತು 5 ರನ್ ಗಳಿಸಿದ್ದಾರೆ.

Mayank Agarwal
ಮಯಾಂಕ್ ಅಗರ್ವಾಲ್

ಕಾಂಗರೂ ನಾಡಿನಲ್ಲಿ ತೋರಿದ ಕಳಪೆ ಪ್ರದರ್ಶನದಿಂದಾಗಿ ಮಯಾಂಕ್ ಇದೀಗ 11ರ ಬಳಗದಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಶುಬ್ಮನ್ ಗಿಲ್ 45 ಮತ್ತು 35 ರನ್ ಗಳಿಸಲುವ ಮೂಲಕ ಆತ್ಮವಿಶ್ವಾಸ ಮೂಡಿಸಿದ್ರು, ಹೀಗಾಗಿ ಮೂರನೇ ಟೆಸ್ಟ್ ಪಂದ್ಯದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಮೂರನೇ ಪಂದ್ಯದಲ್ಲೂ ಗಿಲ್ ಉತ್ತಮ ಪ್ರದರ್ಶನ ಮುಂದುವರೆಸಿದ್ರೆ, ರೋಹಿತ್ ಜೊತೆ ನಾಲ್ಕನೇ ಟೆಸ್ಟ್​ ಪಂದ್ಯಕ್ಕೂ ಸ್ಥಾನ ಪಡೆದರೆ ಅಚ್ಚರಿ ಇಲ್ಲ. ಒಟ್ಟಿನಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲಿದ ಮಯಾಂಕ್ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.