ವಿಶಾಖಪಟ್ಟಣ: ಟೀಂ ಇಂಡಿಯಾದ ಹಿಟ್ಮ್ಯಾನ್ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದು, ಪ್ರಸಕ್ತ ಸಾಲಿನಲ್ಲಿ ಹಿಟ್ಮ್ಯಾನ್ ಬ್ಯಾಟ್ನಿಂದ ಸಿಡಿದಿರುವ 7ನೇ ಶತಕ ಇದಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಜೋಡಿ ದ್ವಿಶತಕದಾಟವಾಡಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟಿತ್ತು. ಈ ವೇಳೆ ರೋಹಿತ್ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಜೀವನದ 28ನೇ ಶತಕ ಸಿಡಿಸಿದ್ರೆ, ಕೆಎಲ್ ತಮ್ಮ ಮೂರನೇ ಏಕದಿನ ಶತಕ ಸಿಡಿಸಿ ಮಿಂಚಿದರು. ಇನ್ನು ಇದೇ ವರ್ಷದಲ್ಲಿ ರೋಹಿತ್ ಬ್ಯಾಟ್ನಿಂದ ಸಿಡಿದ ಏಳನೇ ಶತಕ ಇದಾಗಿದೆ.
ಕ್ಯಾಲೇಂಡರ್ ವರ್ಷದಲ್ಲಿ ಸಿಡಿದ ಅತಿ ಹೆಚ್ಚು ಶತಕ
9 ಶತಕ: ಸಚಿನ್ ತೆಂಡೂಲ್ಕರ್ 1998
7 ಶತಕ: ಸೌರವ್ ಗಂಗೂಲಿ 2000
7 ಶತಕ: ಡೇವಿಡ್ ವಾರ್ನರ್ 2016
7 ಶತಕ: ರೋಹಿತ್ ಶರ್ಮಾ 2019
ಇನ್ನು ಈ ಸಲದ ವಿಶ್ವಕಪ್ನಲ್ಲೇ ಐದು ಶತಕ ದಾಖಲು ಮಾಡಿದ್ದ ಹಿಟ್ಮ್ಯಾನ್ ಮಹಾಟೂರ್ನಿಯಲ್ಲಿ ಅತಿ ಹೆಚ್ಚು ರನ್ಗಳಿಕೆ ಮಾಡಿದ್ದ ಪ್ಲೇಯರ್ ಎಂಬ ರೆಕಾರ್ಡ್ ಸಹ ನಿರ್ಮಾಣ ಮಾಡಿದ್ದರು.ಈ ಶತಕದೊಂದಿಗೆ ಪ್ರಸಕ್ತ ವರ್ಷದ ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಹಿಂದಿಕ್ಕಿ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಪ್ಲೇಯರ್ ಎಂಬ ಪಾತ್ರಕ್ಕೆ ಹಿಟ್ಮ್ಯಾನ್ ಪಾತ್ರರಾಗಿದ್ದಾರೆ. ಇಂದಿನ ಪಂದ್ಯದಲ್ಲಿ 159ರನ್ಗಳಿಕೆ ಮಾಡಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದ್ದಾರೆ.