ವಿಶಾಖಪಟ್ಟಣ: ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳ ಅಬ್ಬರದ ಬ್ಯಾಟಿಂಗ್ನಿಂದಾಗಿ 2ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಟೀಂ ಇಂಡಿಯಾ 107 ರನ್ಗಳ ಭರ್ಜರಿ ಜಯ ದಾಖಲಿಸಿದೆ. ವಿಂಡೀಸ್ ವಿರುದ್ಧ 5ನೇ ಅತಿ ಹೆಚ್ಚು ರನ್ಗಳ ಅಂತರದಿಂದ ಗೆದ್ದ ದಾಖಲೆಯೂ ಬರೆಯಿತು. 3 ಏಕದಿನ ಪಂದ್ಯಗಳ ಸರಣಿಯಲ್ಲಿ 1-1 ಸಮಬಲಗೊಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ರಾಹುಲ್-ರೋಹಿತ್ ಮೊದಲ ವಿಕೆಟ್ ಜೊತೆಯಾಟದಲ್ಲಿ 227 ರನ್ ಸೇರಿಸಿದರು. 104 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 8 ಬೌಂಡರಿ ಸಹಿತ 102 ರನ್ಗಳಿಸಿದ ರಾಹುಲ್, ಅಲ್ಜಾರಿ ಜೋಸೆಫ್ಗೆ ವಿಕೆಟ್ ಒಪ್ಪಿಸಿದರು. ನಂತರದ ಓವರ್ನಲ್ಲೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪೊಲಾರ್ಡ್ ಬೌಲಿಂಗ್ನಲ್ಲಿ ಗೋಲ್ಡನ್ ಡಕ್ ಆದರು.
ಆದರೆ, ತನ್ನ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದ ರೋಹಿತ್ 138 ಎಸೆತಗಳಲ್ಲಿ 17 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಸಹಿತ 159 ರನ್ಗಳಿಸಿ ಕಾಟ್ರೆಲ್ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಸತತ 7ನೇ ವರ್ಷವೂ ಭಾರತದ ಪರ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
-
#TeamIndia beat West Indies by 107 runs in the 2nd ODI🙌#INDvWI pic.twitter.com/T1JpTbWAzm
— BCCI (@BCCI) December 18, 2019 " class="align-text-top noRightClick twitterSection" data="
">#TeamIndia beat West Indies by 107 runs in the 2nd ODI🙌#INDvWI pic.twitter.com/T1JpTbWAzm
— BCCI (@BCCI) December 18, 2019#TeamIndia beat West Indies by 107 runs in the 2nd ODI🙌#INDvWI pic.twitter.com/T1JpTbWAzm
— BCCI (@BCCI) December 18, 2019
27 ಎಸೆತಗಳಲ್ಲಿ 73 ರನ್ ಸಿಡಿಸಿದ ಪಂತ್-ಶ್ರೇಯಸ್ ಅಯ್ಯರ್: ರೋಹಿತ್ ಶರ್ಮಾ ಔಟಾದ ನಂತರ ಜೊತೆಯಾದ ಪಂತ್ ಹಾಗೂ ಅಯ್ಯರ್ ವಿಂಡೀಸ್ ಬೌಲರ್ಗಳನ್ನ ಚೆಂಡಾಡಿದರು. ಈ ಜೋಡಿ 27 ಎಸೆತಗಳಲ್ಲಿ 73 ರನ್ಗಳ ಜೊತೆಯಾಟ ನೀಡಿದರು. ಪಂತ್ ಕೇವಲ 16 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿ ಸಹಿರ 39 ರನ್ಗಳಿಸಿದರೆ, ಶ್ರೇಯಸ್ ಅಯ್ಯರ್ 32 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ 53 ರನ್ಗಳಿಸಿದರು. ಕೇದಾರ್ ಜಾದವ್ 16 ರನ್ಗಳಿಸಿದರು. ಉತ್ತಮ ಪ್ರದರ್ಶನ ತೋರಿದ ಟೀಂ ಇಂಡಿಯಾ ವಿಂಡೀಸ್ಗೆ 388 ರನ್ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು.
ಬೃಹತ್ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ಆರಂಭದಲ್ಲೇ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಯ್ತು. ತಂಡದ ಮೊತ್ತ 61 ತಲುಪುತ್ತಿದ್ದಂತೆ ಆರಂಭಿಕ ಆಟಗಾರ ಎವಿನ್ ಲೆವಿಸ್ (28) ವೇಗಿ ಶಾರ್ದೂಲ್ ಠಾಕೂರ್ಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಗೆಲುವಿನ ರೂವಾರಿಯಾಗಿದ್ದ ಶಿಮ್ರಾನ್ ಹೆಟ್ಮೆಯರ್ (4) ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಳಿಕ ರೋಸ್ಟನ್ ಚೇಸ್ (4) ಕೂಡ ಜಡೇಜಾಗೆ ಬೌಲ್ಡ್ ಆದರು.
ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ ಶೈ ಹೋಪ್ ಈ ಪಂದ್ಯದಲ್ಲೂ ಮಿಂಚಿದರು. ಒಂದೆಡೆ ವಿಕೆಟ್ಗಳು ಪತನಗೊಳ್ಳುತ್ತಿದ್ದರೂ ತನ್ನ ತಾಳ್ಮೆಯುತ ಆಟವಾಡುತ್ತಾ ಪಂದ್ಯವನ್ನು ಗೆಲ್ಲಿಸಲೇಬೇಕು ಎಂಬ ಹಂಬಲದಲ್ಲಿದ್ದ ಹೋಪ್ಗೆ ಮತ್ತಷ್ಟು ಹೋಪ್ ಕೊಟ್ಟಿದ್ದು ನಿಕೋಲಸ್ ಪೂರನ್.
-
#TeamIndia level the series 1-1 🔥
— BCCI (@BCCI) December 18, 2019 " class="align-text-top noRightClick twitterSection" data="
Onto the decider at Cuttack! #INDvWI pic.twitter.com/bQ4kn9MXG8
">#TeamIndia level the series 1-1 🔥
— BCCI (@BCCI) December 18, 2019
Onto the decider at Cuttack! #INDvWI pic.twitter.com/bQ4kn9MXG8#TeamIndia level the series 1-1 🔥
— BCCI (@BCCI) December 18, 2019
Onto the decider at Cuttack! #INDvWI pic.twitter.com/bQ4kn9MXG8
ಕ್ರೀಸ್ಗೆ ಬಂದ ಪೂರನ್ 6 ಬೌಂಡರಿ 6 ಸಿಕ್ಸರ್ ಬಾರಿಸಿ ಕೇವಲ 47 ಎಸೆತಗಳಲ್ಲಿ 75 ರನ್ಗಳಿಸಿದ್ದರು. ಇತ್ತ ಹೋಪ್ 78 ರನ್ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ, ಮೊಹಮ್ಮದ್ ಶಮಿ ಈ ಇಬ್ಬರ ಉತ್ತಮ ಜೊತೆಯಾಟಕ್ಕೆ ಬ್ರೇಕ್ ನೀಡಿದರು. ನಂತರ ನಾಯಕ ಕಿರಾನ್ ಪೊಲಾರ್ಡ್ ಗೋಲ್ಡಕ್ ಡಕ್ ಆದರು. ವಿಕೆಟ್ಗಳನ್ನು ಕಳೆದುಕೊಳ್ಳುತ್ತಿದ್ದಂತೆ ವೇಗವಾಗಿ ಬ್ಯಾಟ್ ಬೀಸಲು ಮುಂದಾದ ಹೋಪ್(78), ಕುಲದೀಪ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬೌಲರ್ ಕಿಮೋ ಪೌಲ್ 4 ಬೌಂಡರಿ, 3 ಸಿಕ್ಸರ್ ಬಾರಿಸಿ 46 ರನ್ ಗಳಿಸಿದರು. ಕೊನೆಯದಾಗಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡ ವಿಂಡೀಸ್ 280 ರನ್ ಗಳಿಸಲಷ್ಟೇ ಶಕ್ತವಾಯ್ತು.
ವಿಂಡೀಸ್ ಪರ ಕಾಟ್ರೆಲ್ 83 ರನ್ ನೀಡಿ 2 ವಿಕೆಟ್, ಕೀಮೋ ಪಾಲ್ 57ಕ್ಕೆ 1, ಜೋಸೆಪ್ 68ಕ್ಕೆ 1 ಪೊಲಾರ್ಟ್ 2 ಓವರ್ಗಳಲ್ಲಿ 20 ರನ್ ನೀಡಿ 1 ವಿಕೆಟ್ ಪಡೆದರು. ಭಾರತದ ಪರ ಮೊಹಮ್ಮದ್ ಶಮಿ, ಕುಲದೀಪ್ಗೆ ತಲಾ 3, ಜಡೇಜಾಗೆ 2, ಠಾಕೂರ್ಗೆ 1 ವಿಕೆಟ್ ಬಿದ್ದಿವೆ.
ಕುಲದೀಪ್ಗೆ ಹ್ಯಾಟ್ರಿಕ್: ತಾಳ್ಮೆಯುತ ಆಟದ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಶೈ ಹೋಪ್ ಕುಲದೀಪ್ ಬೌಲಿಂಗ್ನ 32ನೇ ಓವರ್ 4ನೇ ಎಸೆತದಲ್ಲಿ ಭಾರೀ ಹೊಡೆತಕ್ಕೆ ಮುಂದಾಗಿ ನಾಯಕ ಕೊಹ್ಲಿಗೆ ಕ್ಯಾಚಿತ್ತರು. ತದ ನಂತರ 5ನೇ ಎಸೆತದಲ್ಲಿ ವಿಂಡೀಸ್ ನಾಯಕ ಜೆಸನ್ ಹೋಲ್ಡರ್ ಸ್ಟಂಪ್ ಆದರು. ಕೊನೆಯ ಎಸೆತದಲ್ಲಿ (32.6) ಅಲ್ಜಾರಿ ಜೋಸೆಫ್ (0) ಜಾಧವ್ಗೆ ಕ್ಯಾಚ್ ನೀಡುವ ಮೂಲಕ ಕುಲದೀಪ್ ಹ್ಯಾಟ್ರಿಕ್ ಪಡೆದುಕೊಂಡರು.