ಅಬುಧಾಬಿ: ರೋಹಿತ್ ಶರ್ಮಾ ಅರ್ಧಶತಕ, ಕೀರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಕೊನೆಯ ಓವರ್ಗಳಲ್ಲಿ ನಡೆಸಿದ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 192 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ರಾಹುಲ್ ಬೌಲಿಂಗ್ ಆಯ್ಕೆ ಮಾಡಿಕೊಂಡು ಮುಂಬೈಗೆ ಬ್ಯಾಟಿಂಗ್ ಅಹ್ವಾನಿಸಿದರು. ನಾಯಕನ ನಿರ್ಧಾರವನ್ನು ಮೊದಲ ಓವರ್ನಲ್ಲಿ ಡಿಕಾಕ್(0) ವಿಕೆಟ್ ಪಡೆಯುವ ಮೂಲಕ ಕಾಟ್ರೆಲ್ ಸಮರ್ಥಿಸಿಕೊಂಡರು.
ನಂತರ ಬಂದ ಬಂದ ಸೂರ್ಯ ಕುಮಾರ ಯಾದವ್ ಕೇವಲ 10ಮ ರನ್ಗಳಿಸಿ ಔಟಾದರು. ಈ ಸಂದರ್ಭದಲ್ಲಿ ನಾಯಕನ ಜೊತೆಗೂಡಿದ ಇಶಾನ್ ಕಿಶನ್(28) 3ನೇ ವಿಕೆಟ್ಗೆ 61 ರನ್ಗಳ ಜೊತೆಯಾಟ ನೀಡಿದರು. ಕಿಶನ್ ಇಂದು ಬ್ಯಾಟಿಂಗ್ನಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನ ತೋರಲು ವಿಫಲರಾದರು. ಅವರು 32 ಎಸೆತಗಳಲ್ಲಿ 28 ರನ್ಗಳಿಸಿ ಗೌತಮ್ಗೆ ವಿಕೆಟ್ ನೀಡಿದರು.
-
Innings Break!@mipaltan post a formidable total of 191/4 on the board, courtesy batting exploits by Rohit Sharma, Pollard and Hardik Pandya.
— IndianPremierLeague (@IPL) October 1, 2020 " class="align-text-top noRightClick twitterSection" data="
Will #KXIP chase this down?#Dream11IPL #KXIPvMI pic.twitter.com/L45AIDTk10
">Innings Break!@mipaltan post a formidable total of 191/4 on the board, courtesy batting exploits by Rohit Sharma, Pollard and Hardik Pandya.
— IndianPremierLeague (@IPL) October 1, 2020
Will #KXIP chase this down?#Dream11IPL #KXIPvMI pic.twitter.com/L45AIDTk10Innings Break!@mipaltan post a formidable total of 191/4 on the board, courtesy batting exploits by Rohit Sharma, Pollard and Hardik Pandya.
— IndianPremierLeague (@IPL) October 1, 2020
Will #KXIP chase this down?#Dream11IPL #KXIPvMI pic.twitter.com/L45AIDTk10
ನಂತರ ಪೊಲಾರ್ಡ್ ಜೊತೆ ಸೇರಿಕೊಂಡ ರೋಹಿತ್ ನಿಧಾನವಾಗಿ ರನ್ಗತಿ ಹೆಚ್ಚಿಸಿದರು. ಈ ಜೋಡಿ 43 ರನ್ಗಳ ಜೊತೆಯಾಟ ನಡೆಸಿತು. ಈ ಸಂದರ್ಭದಲ್ಲಿ ಅರ್ಧಶತಕ ಸಿಡಿಸಿದ್ದ ರೋಹಿತ್ ಶಮಿ ಬೌಲಿಂಗ್ನಲ್ಲಿ ಮ್ಯಾಕ್ಸ್ವೆಲ್ ಹಾಗೂ ನಿಶಾಮ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಅವರು 45 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದಂತೆ 70 ರನ್ಗಳಿಸಿ ಔಟಾದರು.
ಪೊಲಾರ್ಡ್-ಹಾರ್ದಿಕ್ ಜುಗಲ್ಬಂದಿ
ರೋಹಿತ್ ನಂತರ ಬಂದ ಹಾರ್ದಿಕ್ ಪಾಂಡ್ಯ 5ನೇ ವಿಕೆಟ್ ಜೊತೆಯಾಟದಲ್ಲಿ 23 ಎಸೆತಗಳಲ್ಲಿ 67 ರನ್ ಸೇರಿಸಿದರು. 11 ಎಸೆತಗಳನ್ನೆದುರಿಸಿದ ಹಾರ್ದಿಕ್ 2 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 30 ರನ್ಗಳಿಸಿದರೆ, ಪೊಲಾರ್ಡ್ 20 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿ ಸೇರಿದಂತೆ 47 ರನ್ಗಳಿಸಿ ಔಟಾಗದೆ ಉಳಿದರು.
124ಕ್ಕೆ 4 ವಿಕೆಟ್ ಕಳೆದುಕೊಂಡು ಕಡಿಮೆ ಮೊತ್ತಕ್ಕೆ ಕುಸಿಯುವ ಬೀತಿಯಿದ್ದ ಮುಂಬೈ ತಂಡವನ್ನು 191 ರನ್ಗಳ ಬೃಹತ್ ಮೊತ್ತ ದಾಖಲಿಸುವಂತೆ ಮಾಡಿದರು. ಮೊದಲಾರ್ಧದಲ್ಲಿ ಉತ್ತಮ ಬೌಲಿಂಗ್ ನಿರ್ವಹಣೆ ಮಾಡಿದ್ದ ರಾಹುಲ್ ಕೊನೆಯ ಓವರ್ನಲ್ಲಿ ಸ್ಪಿನ್ನರ್ ಕಣಕ್ಕಿಳಿಸಿ ತಪ್ಪು ಮಾಡಿದರು. ಇದರ ಲಾಭ ಪಡೆದ ಪೊಲಾರ್ಡ್- ಹಾರ್ದಿಕ್ 25 ರನ್ ಚಚ್ಚಿದರು. ಅಲ್ಲದೆ ವೇಗಿ ಶಮಿ ಹಾಗೂ ನಿಶಾಮ್ ಕೂಡ ತಮ್ಮ ಕೊನೆಯ ಓವರ್ಗಳಲ್ಲಿ ದುಬಾರಿಯಾದ್ದದ್ದು ಪಂಜಾಬ್ ತಂಡಕ್ಕೆ ಹೊಡೆದ ನೀಡಿತು.