ETV Bharat / sports

ಟಿ20 ವಿಶ್ವಕಪ್​ನಲ್ಲಿ ಆರಂಭಿಕರಾಗಿ ರೋಹಿತ್-ಧವನ್ ಆಡಿದರೆ ಉತ್ತಮ : ಮಾಜಿ ಸೆಲೆಕ್ಟರ್​ - ಭಾರತ vs ಇಂಗ್ಲೆಂಡ್

ಶಿಖರ್​ ಧವನ್​ ಮತ್ತು ರೋಹಿತ್​ ಶರ್ಮಾ ಅವರ ಸಾಮರ್ಥ್ಯವನ್ನು ಕೇವಲ ಒಂದು ಪಂದ್ಯದ ವೈಫಲ್ಯದಿಂದ ಅಳೆಯುವುದಕ್ಕಾಗುವುದಿಲ್ಲ. ಅವರು ಏಕದಿನ ಸರಣಿಯಲ್ಲಿ ಉತ್ತವಾಗಿ ಆಡಿದ್ದಾರೆ. ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಸುಲಭವಲ್ಲ. ಇಶಾನ್​ ಕಿಶನ್ ತಂಡಕ್ಕೆ ಸೇರ್ಪಡೆಗೊಳ್ಳಬೇಕಾದರೆ ಮತ್ತಷ್ಟು ಅಸಾಧಾರಣ ಪ್ರದರ್ಶನ ನೀಡಬೇಕಿದೆ ಎಂದು ಆಯ್ಕೆ ಸಮಿತಿ ಮಾಜಿ ಸದಸ್ಯ ಹೇಳಿದ್ದಾರೆ.

ರೋಹಿತ್ ಶರ್ಮಾ-ಶಿಖರ್ ಧವನ್
ರೋಹಿತ್ ಶರ್ಮಾ-ಶಿಖರ್ ಧವನ್
author img

By

Published : Mar 30, 2021, 3:22 PM IST

Updated : Mar 30, 2021, 3:34 PM IST

ನವದೆಹಲಿ : ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದಲ್ಲಿ ಆರಂಭಿಕರಾಗಿ ಅನುಭವಿಗಳಾದ ಶಿಖರ್ ಧವನ್ ಮತ್ತು ರೋಹಿತ್​ ಅವರನ್ನೇ ಕಣಕ್ಕಿಳಿಸಬೇಕು. ಇದು ಅತ್ಯುತ್ತಮ ಆಯ್ಕೆ ಎಂದು ಮಾಜಿ ಆಯ್ಕೆ ಸಮಿತಿ ಸದಸ್ಯ ಸರಂದೀಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆದ್ದ ನಂತರ ಕೊಹ್ಲಿ ಈ ವರ್ಷ ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದರು. ಜೊತೆಗೆ ಮುಂಬರುವ ವಿಶ್ವಕಪ್​ನಲ್ಲಿ ರೋಹಿತ್​ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಕೂಡ ಇದೆ ಎಂಬ ಮಾತುಗಳು ಕೇಳಿ ಬಂದಿವೆ. ಧವನ್​ ಸರಣಿಯ ಮೊದಲ ಪಂದ್ಯದ ವೈಫಲ್ಯದ ನಂತರ ಮುಂದಿನ 4 ಪಂದ್ಯಗಳಲ್ಲೂ ಅವರನ್ನು ಕಡೆಗಣಿಸಲಾಗಿತ್ತು.

2ನೇ ಪಂದ್ಯದಲ್ಲಿ ಇಶಾನ್​ ಕಿಶನ್ ಕಣಕ್ಕಿಳಿದರೆ, ರೋಹಿತ್ ನಂತರದ 3 ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿದ್ದರು. ಸತತ 4 ಪಂದ್ಯಗಳ ವೈಫಲ್ಯದ ನಂತರ, ಕೊನೆಯ ಪಂದ್ಯದಲ್ಲಿ ರಾಹುಲ್​ರನ್ನು ಹೊರಗಿಟ್ಟು ಸ್ವತಃ ಕೊಹ್ಲಿ ಆರಂಭಿಕನಾಗಿ ಆಡಿ 80 ರನ್ ​ಗಳಿಸಿದ್ದರು.

"ನಿಜಕ್ಕೂ ಆಶ್ಚರ್ಯವೆನಿಸುತ್ತಿದೆ(ಧವನ್ ಕಡಗಣನೆ), ಧವನ್​ ಐಪಿಎಲ್​ನಲ್ಲಿ ಉತ್ತಮವಾಗಿ ಆಡಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಎಲ್ಲೆಲ್ಲಿ ಆಡಿದ್ದಾರೆ ಅಲ್ಲೆಲ್ಲಾ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದಾರೆ. ಬಹುಶಃ ಅವರು(ಮ್ಯಾನೇಜ್​ಮೆಂಟ್​) ಹೊಸ ಆಯ್ಕೆಯನ್ನು ಹುಡುಕುತ್ತಿದ್ದಾರೆ ಅನಿಸುತ್ತಿದೆ. ಆದರೆ, ನನ್ನ ಪ್ರಕಾರ ರೋಹಿತ್-ಧವನ್​ರ ಲೆಫ್ಟ್​ ಹ್ಯಾಂಡ್ -ರೈಟ್ ಹ್ಯಾಂಡ್​ ಸಂಯೋಜನೆ ಭಾರತಕ್ಕೆ ಮುಂಬರುವ ವಿಶ್ವಕಪ್​ಗೆ ಅತ್ಯುತ್ತಮ ಆಯ್ಕೆ" ಎಂದು ಸರಂದೀಪ್ ಸಿಂಗ್ ತಿಳಿಸಿದ್ದಾರೆ.

ನೀವು ಅವರ ಸಾಮರ್ಥ್ಯವನ್ನು ಕೇವಲ ಒಂದು ಪಂದ್ಯದ ವೈಫಲ್ಯದಿಂದ ಅಳೆಯುವುದಕ್ಕಾಗುವುದಿಲ್ಲ. ಅವರು ಏಕದಿನ ಸರಣಿಯಲ್ಲಿ ಉತ್ತವಾಗಿ ಆಡಿದ್ದಾರೆ. ಈ ಐಪಿಎಲ್​ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಸುಲಭವಲ್ಲ. ಇಶಾನ್​ ಕಿಶನ್ ತಂಡಕ್ಕೆ ಸೇರ್ಪಡೆಗೊಳ್ಳಬೇಕಾದರೆ ಮತ್ತಷ್ಟು ಅಸಾಧಾರಣ ಪ್ರದರ್ಶನ ನೀಡಬೇಕಿದೆ ಎಂದಿದ್ದಾರೆ.

ಕೆ. ಎಲ್. ರಾಹುಲ್ ಏಕದಿನ ಪಂದ್ಯಗಳಲ್ಲಿ ಮುಂದುವರಿಯಬೇಕು ಮತ್ತು ಶ್ರೇಯಸ್ ಅಯ್ಯರ್ ಹಿಂದಿರುಗಿದ ನಂತರ ರಿಷಭ್ ಪಂತ್ ಅವರ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:ಐಪಿಎಲ್​ನಲ್ಲಿ 'ಸಾಫ್ಟ್​ ಸಿಗ್ನಲ್​' ನಿಯಮ ರದ್ಧತಿಗೆ ನಿರ್ಧಾರ: ಗವಾಸ್ಕರ್​ ಸಂತಸ

Last Updated : Mar 30, 2021, 3:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.