ETV Bharat / sports

'ಐಪಿಎಲ್​​​​​​​​ ಪ್ರದರ್ಶನಕ್ಕೂ ವಿಶ್ವಕಪ್​​ಗೂ ಸಂಬಂಧವಿಲ್ಲ' ಎಂಬ ಮಾತನ್ನು ನಿಜ ಮಾಡಿದ ರೋಹಿತ್​​

ಐಪಿಎಲ್​ ಒಂದೂವರೆ ತಿಂಗಳು ನಡೆಯುವ ಲೀಗ್​ ಆಗಿದ್ದು, ಇಲ್ಲಿ ಆಟಗಾರರು ನೀಡುವ ಪ್ರದರ್ಶನ ವಿಶ್ವಕಪ್​ ತಂಡಕ್ಕೆ ಯಾವುದೇ ಪರಣಾಮ ಬೀರುವುದಿಲ್ಲ ಎಂದು ರೋಹಿತ್​ ವಿಶ್ವಕಪ್​ಗೂ ಮುನ್ನ ಹೇಳಿಕೆ ನೀಡಿದ್ದರು. ಇದೀಗ ಅದನ್ನು ತಮ್ಮ ಬ್ಯಾಟ್​​ನಿಂದ ನಿರೂಪಿಸಿ ತೋರಿಸಿದ್ದಾರೆ.

rohit
author img

By

Published : Jun 17, 2019, 9:01 AM IST

Updated : Jun 17, 2019, 1:28 PM IST

ಮ್ಯಾಚೆಸ್ಟರ್​: ಕಳೆದ ತಿಂಗಳು ನಡೆದಿದ್ದ ಐಪಿಎಲ್​ನಲ್ಲಿ ಮುಂಬೈ ತಂಡ ಚಾಂಪಿಯನ್​ ಆಗಿತ್ತು. ನಾಯಕ ರೋಹಿತ್​ ಮಾತ್ರ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ರೋಹಿತ್​ ಕಳಪೆ ಫಾರ್ಮ್​ ದೊಡ್ಡ ಹೊಡೆತ ಕೊಡುತ್ತೆ ಎಂಬ ಮಾತು ಕೇಳಿಬಂದಿತ್ತು.

ಆದರೆ, ರೋಹಿತ್​ ಮಾತ್ರ ಐಪಿಎಲ್​ನಲ್ಲಿ ನೀಡುವ ಪ್ರದರ್ಶನ ವಿಶ್ವಕಪ್​ ಆಯ್ಕೆಗೆ ಮಾನದಂಡವಾಗುವುದಿಲ್ಲ ಎಂದಿದ್ದರು. ವಿಶ್ವಕಪ್​ಗಾಗಿ ಕಳೆದ 5 ವರ್ಷಗಳಿಂದ ಕಠಿಣ ಶ್ರಮವಹಿಸಿ ಆಡಲಾಗುತ್ತಿದೆ. ತಂಡದಲ್ಲಿರುವ ಎಲ್ಲಾ ಆಟಗಾರರು ಏಕದಿನ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಒಂದೂವರೆ ತಿಂಗಳು ನಡೆಯುವ ಐಪಿಎಲ್​ ಯಾವೊಬ್ಬ ಆಟಗಾರನ ಸಾಮರ್ಥ್ಯವನ್ನು ಅಳೆಯುವುದಕ್ಕಾಗುವುದಿಲ್ಲ ಎಂದು ಪ್ರತಿಪಾದಿಸಿದ್ದರು.

ಇದೀಗ ವಿಶ್ವಕಪ್​ನಲ್ಲಿ ಭಾರತ ತಂಡ ಆಡಿರುವ ಮೂರು ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಿರುವ ರೋಹಿತ್​ ಶರ್ಮಾ 2 ಶತಕ ಹಾಗೂ 1 ಅರ್ಧಶತಕ ಸಹಿತ 319 ರನ್ ​ಗಳಿಸಿ ಹೆಚ್ಚು ರನ್​ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಒಂದು ತಿಂಗಳ ಹಿಂದೆ ತಾವು ಹೇಳಿದ್ದ ಮಾತನ್ನು ನಿಜ ಮಾಡಿದ್ದಾರೆ.

ರೋಹಿತ್​ ಮಾತ್ರವಲ್ಲದೆ ಯುವ ಸ್ಪಿನ್​ ಬೌಲರ್​ ಕುಲ್ದೀಪ್​ ಕೂಡ ಐಪಿಎಲ್​ನಲ್ಲಿ ವೈಫಲ್ಯ ಕಂಡಿದ್ದರು. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಬರ್​ ಅಜಂ, ಫಾಖರ್​ ಜಮಾನ್​ ವಿಕೆಟ್​ ಪಡೆಯುವ ಮೂಲಕ ತಮ್ಮ ತಾಕತ್ತನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ.

Intro:Body:Conclusion:
Last Updated : Jun 17, 2019, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.