ETV Bharat / sports

ಬೆಂಗಳೂರಿನ NCAಯಲ್ಲಿ ಫಿಟ್​ನೆಸ್​ ತರಬೇತಿ ಆರಂಭಿಸಿದ ರೋಹಿತ್

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಮೊದಲ ಟೆಸ್ಟ್​ ನಂತರ ಭಾರತಕ್ಕೆ ಹಿಂತಿರುಗುತ್ತಿದ್ದಾರೆ. ಹಾಗಾಗಿ ಟೆಸ್ಟ್​ ಸರಣಿಯಲ್ಲಿ ರೋಹಿತ್ ಶರ್ಮಾ ಪಾತ್ರ ಮಹತ್ವವಾಗಿದೆ. ಆದ್ದರಿಂದ ಪ್ರವಾಸಕ್ಕೂ ಮುನ್ನ ಅವರು ಫಿಟ್​ನೆಸ್​ ಕೂಡ ಪ್ರಮುಖವಾಗಿದೆ.

ರೋಹಿತ್ ಶರ್ಮಾ
ರೋಹಿತ್ ಶರ್ಮಾ
author img

By

Published : Nov 19, 2020, 5:00 PM IST

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್​ ಸರಣಿಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಫಿಟ್​ನೆಸ್​ ಸಾಬೀತುಪಡಿಸಿಬೇಕಿರುವ ಭಾರತ ತಂಡದ ಸ್ಟಾರ್ ಓಪನರ್​ ರೋಹಿತ್ ಶರ್ಮಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್​ನೆಸ್​ ತರಬೇತಿ ಆರಂಭಿಸಿದ್ದಾರೆ.

ರೋಹಿತ್​ ಐಪಿಎಲ್​ ವೇಳೆ ಗಾಯಕ್ಕೊಳಗಾಗಿದ್ದರಿಂದ ಅವರನ್ನು ಮೂರು ಮಾದರಿಯ ತಂಡಗಳಿಂದ ಹೊರಗಿಡಲಾಗಿತ್ತು. ನಂತರ ಚೇತರಿಸಿಕೊಂಡು ಪ್ಲೇ ಆಫ್​ ಹಾಗೂ ಫೈನಲ್​ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ರೋಹಿತ್ ಐಪಿಎಲ್​ಗೆ ಮರಳುತ್ತಿದ್ದಂತೆ ಅವರಿಗೆ ಫಿಟ್​ನೆಸ್​ ದೃಷ್ಟಿಯಿಂದ ಸೀಮಿತ ಓವರ್​ಗಳ ಸರಣಿಗೆ ವಿಶ್ರಾಂತಿ ನೀಡಿ, ಟೆಸ್ಟ್​ ತಂಡಕ್ಕೆ ನೇಮಕ ಮಾಡಿತ್ತು. ರೋಹಿತ್ ಐಪಿಎಲ್​ ಫೈನಲ್ ಪಂದ್ಯದಲ್ಲಿ 68 ರನ್​ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಮೊದಲ ಟೆಸ್ಟ್​ ನಂತರ ಭಾರತಕ್ಕೆ ಹಿಂತಿರುಗುತ್ತಿದ್ದಾರೆ. ಹಾಗಾಗಿ ಟೆಸ್ಟ್​ ಸರಣಿಯಲ್ಲಿ ರೋಹಿತ್ ಶರ್ಮಾ ಪಾತ್ರ ಮಹತ್ವವಾಗಿದೆ. ಆದ್ದರಿಂದ ಪ್ರವಾಸಕ್ಕೂ ಮುನ್ನ ಅವರು ಫಿಟ್​ನೆಸ್​ ಕೂಡ ಪ್ರಮುಖವಾಗಿದೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಬುಧವಾರವಷ್ಟೇ ಭಾರತ ತಂಡದ ಅನುಭವಿ ವೇಗಿಯಾಗಿರುವ ಇಶಾಂತ್ ಶರ್ಮಾ ಕೂಡ ಎನ್​ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್​ ಮತ್ತು ಮುಖ್ಯ ಆಯ್ಕೆಗಾರ ಸುನೀಲ್ ಜೋಶಿ ಮುಂದೆ ಬೌಲಿಂಗ್ ಮಾಡುವ ಮೂಲಕ ಫಿಟ್​ನೆಸ್​ ಪರೀಕ್ಷೆ ಎದುರಿಸಿದ್ದರು.

ಫಿಟ್​ನೆಸ್​ ಪರೀಕ್ಷೆ ಮುಗಿದ ಕೂಡಲೆ ರೋಹಿತ್ ಮತ್ತು ಇಶಾಂತ್​ ಇಬ್ಬರು ಒಟ್ಟಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳಸಲಿದ್ದಾರೆ. ನಂತರ ಅಲ್ಲಿ 14 ದಿನಗಳ ಕ್ವಾರಂಟೈನ್ ಮುಗಿದ ಮೇಲೆ ತಂಡ ಸೇರಿಕೊಳ್ಳಲಿದ್ದಾರೆ.

ತವರಿನಲ್ಲಿ ನಡೆದಿರುವ ಟೆಸ್ಟ್​ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ರೋಹಿತ್ ಶರ್ಮಾರಿಗೆ ಆರಂಭಿಕನಾಗಿ, ಇದು ಮೊದಲ ಸರಣಿಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.