ETV Bharat / sports

ರೋಡ್​​ ಸೇಫ್ಟಿ ವರ್ಲ್ಡ್​​ ಸಿರೀಸ್ : ಇಂಗ್ಲೆಂಡ್ ಮಣಿಸಿ​ ಸೆಮೀಸ್​ಗೆ ಲಗ್ಗೆ ಇಟ್ಟ ವೆಸ್ಟ್ ಇಂಡೀಸ್ ಲೆಜೆಂಡ್ಸ್

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್ ಲೆಜೆಂಡ್ಸ್ ತಂಡ ಉತ್ತಮ ಆರಂಭ ಪಡೆಯಿತು. ಇಂಗ್ಲೆಂಡ್ ಲೆಜೆಂಡ್ಸ್ ನಾಯಕ ಕೆವಿನ್ ಪೀಟರ್ಸನ್ ಅಬ್ಬರದ ಆಟದ ನೆರವಿನಿಂದ, 20 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 186 ರನ್​ಗಳ ಬೃಹತ್ ಮೊತ್ತ ಪೇರಿಸಿತು.

author img

By

Published : Mar 17, 2021, 11:46 AM IST

Road Safety World Series
ರೋಡ್​​ ಸೇಫ್ಟಿ ವರ್ಲ್ಡ್​​ ಸಿರೀಸ್

ರಾಯಪುರ(ಛತ್ತೀಸ್​ಗಢ): ರೋಡ್​​ ಸೇಫ್ಟಿ ವರ್ಲ್ಡ್​​ ಸಿರೀಸ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ಸ್- ಇಂಗ್ಲೆಂಡ್ ಲೆಜೆಂಡ್ಸ್ ನಡುವಿನ ಪಂದ್ಯದಲ್ಲಿ, ವೆಸ್ಟ್ ಇಂಡೀಸ್ ಲೆಜೆಂಡ್ಸ್ ​ ಐದು ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್ ಲೆಜೆಂಡ್ಸ್ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಕೆವಿನ್ ಪೀಟರ್ಸನ್ ಅಬ್ಬರದ ಆಟದ ನೆರವಿನಿಂದ, ಇಂಗ್ಲೆಂಡ್ ಲೆಜೆಂಡ್ಸ್ 20 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 186 ರನ್​ಗಳ ಬೃಹತ್ ಮೊತ್ತ ಪೇರಿಸಿತು. ​ಪೀಟರ್ಸನ್ 24 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್​​ ನೆರವಿನಿಂದ 38 ರನ್ ಗಳಿಸಿದರು. ಇನ್ನೂ ಪಿ. ಮಸ್ಟರ್ಡ್​ ಅರ್ಧಶತಕ ಸಿಡಿಸಿ ಮಿಂಚಿದರು. ಮಸ್ಟರ್ಡ್ 41 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್​ ನೆರವಿನಿಂದ 57 ರನ್ ಗಳಿಸಿದರು.

ಈ ಬೃಹತ್​ ಮೊತ್ತ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಲೆಜೆಂಡ್ಸ್ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಡ್ವೇನ್ ಸ್ಮಿತ್ ಅರ್ಧಶತಕ ಸಿಡಿಸಿ ಮಿಂಚಿದರು. ಸ್ಮಿತ್ 31 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್​​​​ ನೆರವಿನಿಂದ 58 ರನ್ ಗಳಿಸಿದರು. ಇನ್ನು ಈವರಿಗೆ ಉತ್ತಮ ಸಾಥ್​ ನೀಡಿದ ನರಸಿಂಗ್ ಡಿಯೊ ನಾರೈನ್ 37 ಬಾಲ್​ಗಳಲ್ಲಿ 6 ಬೌಂಡರಿ ನೆರವಿನಂದ 53 ರನ್​ಗಳಿಸಿದರು. ಅಂತಿಮವಾಗಿ ವೆಸ್ಟ್​ ಇಂಡೀಸ್ ಲೆಜೆಂಡ್ಸ್ ತಂಡ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 187 ರನ್​ಗಳಿಸಿ ಗೆಲುವಿನ ಗುರಿ ಮುಟ್ಟಿತು.ಈ ಗೆಲುವಿನ ಮೂಲಕ ವೆಸ್ಟ್​ ಇಂಡೀಸ್ ಲೆಜೆಂಡ್ಸ್ ತಂಡ ಸೆಮಿ ಫೈನಲ್​​ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ವಿರುದ್ಧ ಸೆಣಸಾಡಲಿದೆ.

ಓದಿ : ಚಹಲ್ ಎಸತದಲ್ಲಿ ಮೊದಲ ಸಿಕ್ಸರ್​ ಸಿಡಿಸಿದ್ದು ನನ್ನ ಬ್ಯಾಟಿಂಗ್ ವೇಗ ಹೆಚ್ಚಿಸಿತ್ತು: ಜೋಸ್ ಬಟ್ಲರ್

ಸಂಕ್ಷಿಪ್ತ ಸ್ಕೋರ್ : ಇಂಗ್ಲೆಂಡ್ ಲೆಜೆಂಡ್ಸ್ 20 ಓವರ್​ಗಳಲ್ಲಿ 186/5 ( ಕೆವಿನ್ ಪೀಟರ್ಸನ್ 38, ಮಸ್ಟರ್ಡ್ 57 , ಸ್ಮಿತ್ 2/31, ವೆಸ್ಟ್ ಇಂಡೀಸ್ ಲೆಜೆಂಡ್ಸ್ 20 ಓವರ್​ಗಳಲ್ಲಿ 187/5 ( ಡ್ವೇನ್ ಸ್ಮಿತ್ 58, ನರಸಿಂಗ್ ಡಿಯೊ ನಾರೈನ್ 53, ಕ್ರಿಸ್ ಟ್ರೆಮ್ಲೆಟ್ 2/37, ಟ್ರೇಡವೇಲ್ 2/35 )

ETV Bharat Logo

Copyright © 2024 Ushodaya Enterprises Pvt. Ltd., All Rights Reserved.