ETV Bharat / sports

ಯುವರಾಜ್, ಸಚಿನ್ ಅಬ್ಬರ: ವಿಂಡೀಸ್ ಲೆಜೆಂಡ್ಸ್​ ಮಣಿಸಿ ರೋಡ್​ ಸೇಫ್ಟಿ ಟೂರ್ನಿ ಫೈನಲ್ ಪ್ರವೇಶಿಸಿದ ಭಾರತ - ಯುವರಾಜ್ ಸಿಂಗ್

ಭಾರತ ನೀಡಿದ 219ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ವೆಸ್ಟ್​ ಇಂಡೀಸ್ ಲೆಜೆಂಡ್​ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 206 ರನ್​ಗಳಿಸಲಷ್ಟೇ ಶಕ್ತವಾಗಿ 12 ರನ್​ಗಳ ಸೋಲು ಕಂಡಿತು.

ಫೈನಲ್ ತಲುಪಿದ ಭಾರತ ಲೆಜೆಂಡ್ಸ್​
ಫೈನಲ್ ತಲುಪಿದ ಭಾರತ ಲೆಜೆಂಡ್ಸ್​
author img

By

Published : Mar 18, 2021, 12:49 AM IST

ರಾಯ್ಪುರ್​: ಸಚಿನ್ ತೆಂಡೂಲ್ಕರ್ ಅವರ ನಾಯಕನಾಟ ಮತ್ತು ಯುವರಾಜ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಲೆಜೆಂಡ್ಸ್​ ತಂಡ ವೆಸ್ಟ್​ ಇಂಡೀಸ್ ಲೆಜೆಂಡ್ಸ್ ತಂಡವನ್ನು ಮಣಿಸ್ ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​ನಲ್ಲಿ ಫೈನಲ್ ಪ್ರವೇಶಿಸಿದೆ.

ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ 218ರನ್​ಗಳ ಬೃಹತ್ ಮೊತ್ತ ಕಲೆಯಾಕಿತ್ತು.

ಆರಂಭಿಕರಾದ ಸಚಿನ್ ಮತ್ತು ಸೆಹ್ವಾಗ್(35) ಮೊದಲ ವಿಕೆಟ್​ಗೆ 56 ರನ್​ ಸೇರಿಸಿನ ಭದ್ರ ಬುನಾದಿಯಾಕಿದರು. ಸಚಿನ್ 42 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ 65 ರನ್​ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಯೂಸುಫ್ ಪಠಾಣ್ 20 ಎಸೆತಗಳಲ್ಲಿ 3 ಸಿಕ್ಸರ್, 2 ಬೌಂಡರಿ ಸಹಿತ 37, ಯುವರಾಜ್ ಸಿಂಗ್​ 20 ಎಸೆತಗಳಲ್ಲಿ 1 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್​ಗಳ ನೆರವಿನಿಂದ 49 ರನ್​ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.

ಇದನ್ನು ಓದಿ:ಮತ್ತೊಮ್ಮೆ ಸಿಡಿಲಬ್ಬರದ ಬ್ಯಾಟಿಂಗ್​​... ಒಂದೇ ಓವರ್​ನಲ್ಲಿ 4 ಸಿಕ್ಸರ್​ ಸಿಡಿಸಿದ ಯುವಿ

219ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ವೆಸ್ಟ್​ ಇಂಡೀಸ್ ಲೆಜೆಂಡ್​ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 206 ರನ್​ಗಳಿಸಲಷ್ಟೇ ಶಕ್ತವಾಗಿ 12 ರನ್​ಗಳ ಸೋಲು ಕಂಡಿತು.

ಆರಂಭಿಕ ಬ್ಯಾಟ್ಸ್​ಮನ್ ಡ್ವೇನ್ ಸ್ಮಿತ್​ 36 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 63, ನರಸಿಂಗ್ ಡಿಯೋನರಿನ್​ 44 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 59 ಮತ್ತು ನಾಯಕ ಲಾರಾ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ 46 ರನ್​​ಗಳಿಸಿದರು.

ಭಾರತದ ಪರ ಇರ್ಫಾನ್ ಪಠಾಣ್ 48ಕ್ಕೆ 1, ಗೋನಿ 35ಕ್ಕೆ1, ವಿನಯ್ ಕುಮಾರ್​ 26ಕ್ಕೆ 2 ಮತ್ತು ಓಝಾ 24ಕ್ಕೆ 1 ವಿಕೆಟ್ ಪಡೆದರು. ಯುವರಾಜ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಶುಕ್ರವಾರ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಗೆದ್ದವರನ್ನು ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಎದುರಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.